ಕರ್ನಾಟಕ ಕೊರೊನಾ ಅಪ್‌ಡೇಟ್ಸ್: 5851 ಕೊರೊನಾ ಸೋಂಕಿತರು ಪತ್ತೆ

ಬೆಂಗಳೂರು, ಆಗಸ್ಟ್ 24: ಕರ್ನಾಟಕದಲ್ಲಿ ಒಂದೇ ದಿನ 5851 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ರಾಜ್ಯದಲ್ಲಿ ಸೋಮವಾರ ಒಂದೇ ದಿನ ಬರೋಬ್ಬರಿ 130 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 4810ಕ್ಕೆ ಏರಿಕೆಯಾಗಿದೆ.

Recommended Video

      Congress ನಲ್ಲಿ ಹೆಚ್ಚಿದ ಆಂತರಿಕ ಬಿರುಕು , Kapil Sibal ಗರಂ | Oneindia Kannada

      ಕೊರೊನಾ ವೈರಸ್ ನಿಂದಾಗಿ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ 26 ಸೋಂಕಿತರು ಸೇರಿದಂತೆ ರಾಜ್ಯದಲ್ಲಿ ಒಟ್ಟು 130 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

      ಇನ್ನು 2,83,665 ಪ್ರಕರಣಗಳ ಪೈಕಿ 1,97,625 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. 81, 211 ಮಂದಿ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

      5851 New COVID-19 Cases Reported In Karnataka On August 24

      ಇಂದು ಬೆಂಗಳೂರು ನಗರವೊಂದರಲ್ಲೇ ಅತಿ ಹೆಚ್ಚು ಅಂದರೆ 1918 ಹೊಸ ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಒಟ್ಟು 5851 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,83,665ಕ್ಕೇರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

      ಬಾಗಲಕೋಟೆ 53, ಬಳ್ಳಾರಿ 306, ಬೆಳಗಾವಿ 319, ಬೆಂಗಳೂರು ಗ್ರಾಮಾಂತರ 35, ಬೆಂಗಳೂರು ನಗರ 1918, ಬೀದರ್ 83, ಚಾಮರಾಜನಗರ 29, ಚಿಕ್ಕಬಳ್ಳಾಪುರ 76, ಚಿಕ್ಕಮಗಳೂರು 123, ಚಿತ್ರದುರ್ಗ 28, ದಕ್ಷಿಣ ಕನ್ನಡ 201, ದಾವಣಗೆರೆ 167, ಧಾರವಾಡ 221, ಗದಗ 141, ಹಾಸನ 200, ಹಾವೇರಿ 148, ಕಲಬುರಗಿ 176, ಕೊಡಗು 35, ಕೋಲಾರ 45, ಕೊಪ್ಪಳ 271, ಮಂಡ್ಯ 82, ಮೈಸೂರು 202, ರಾಯಚೂರು 183, ಶಿವಮೊಗ್ಗ 220, ತುಮಕೂರು 85, ಉಡುಪಿ 104, ಉತ್ತರ ಕನ್ನಡ 91, ವಿಜಯಪುರ 138, ಯಾದಗಿರಿಯಲ್ಲಿ 122 ಪ್ರಕರಣಗಳು ಪತ್ತೆಯಾಗಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+