ಕರ್ನಾಟಕದ 5 ಜಿಲ್ಲೆಗಳಲ್ಲಿ ಒಂದೇ ಒಂದು ಕೊರೊನಾ ಕೇಸ್ ಇಲ್ಲ!

ಬೆಂಗಳೂರು, ಮಾರ್ಚ್.04: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕೊರೊನಾವೈರಸ್ ಸೋಂಕು ನಿಯಂತ್ರಣಕ್ಕೆ ಬಂದಂತೆ ಕಾಣುತ್ತಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದ ಐದು ಜಿಲ್ಲೆಗಳಲ್ಲಿ ಒಂದೇ ಒಂದು ಕೊವಿಡ್-19 ಸೋಂಕಿತ ಪ್ರಕರಣಗಳು ಪತ್ತೆಯಾಗಿಲ್ಲ.

ರಾಜ್ಯದಲ್ಲಿ ಕಳೆದ ಒಂದು ದಿನದಲ್ಲಿ 571 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. 24 ಗಂಟೆಗಳಲ್ಲಿ ನಾಲ್ವರು ಮಹಾಮಾರಿಗೆ ಬಲಿಯಾಗಿದ್ದು, 496 ಸೋಂಕಿತರು ಗುಣಮುಖರಾಗಿದ್ದಾರೆ.

ಗುರುವಾರದ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 953136 ಕೊವಿಡ್-19 ಸೋಂಕಿತ ಪ್ರಕರಣಗಳಿವೆ. ಕೊರೊನಾವೈರಸ್ ಮಹಾಮಾರಿಗೆ ಈವರೆಗೂ 12350 ಜನರು ಪ್ರಾಣ ಬಿಟ್ಟಿದ್ದು, 934639 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಾಹಿತಿ ನೀಡಿದೆ.

571 New Coronavirus Cases Reported in Karnataka Today, State Tally Rise to 953136

ಯಾವ ಜಿಲ್ಲೆಯಲ್ಲಿ ಎಷ್ಟು ಕೊವಿಡ್-19 ಕೇಸ್?:

ರಾಜ್ಯದಲ್ಲಿ ಒಟ್ಟು 571 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 0, ಬಳ್ಳಾರಿ 8, ಬೆಳಗಾವಿ 9, ಬೆಂಗಳೂರು ಗ್ರಾಮಾಂತರ 3, ಬೆಂಗಳೂರು 385, ಬೀದರ್ 8, ಚಾಮರಾಜನಗರ 2, ಚಿಕ್ಕಬಳ್ಳಾಪುರ 10, ಚಿಕ್ಕಮಗಳೂರು 0, ಚಿತ್ರದುರ್ಗ 6, ದಕ್ಷಿಣ ಕನ್ನಡ 19, ದಾವಣಗೆರೆ 4, ಧಾರವಾಡ 5, ಗದಗ 0, ಹಾಸನ 11, ಹಾವೇರಿ 0, ಕಲಬುರಗಿ 23, ಕೊಡಗು 5, ಕೋಲಾರ 3, ಕೊಪ್ಪಳ 1, ಮಂಡ್ಯ 2, ಮೈಸೂರು 20, ರಾಯಚೂರು 3, ರಾಮನಗರ 2, ಶಿವಮೊಗ್ಗ 6, ತುಮಕೂರು 11, ಉಡುಪಿ 7, ಉತ್ತರ ಕನ್ನಡ 5, ವಿಜಯಪುರ 13, ಯಾದಗಿರಿ 0 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.

Recommended Video

      ಕೋವಿನ್‌ ಆಪ್‌ನಲ್ಲಿ ನೋಂದಣಿ ಹೇಗೆ ? ಏನೆಲ್ಲಾ ವಿವರ ಸಲ್ಲಿಸಬೇಕು? ಇಲ್ಲಿದೆ ಡಿಟೇಲ್ಸ್‌ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+