ಕರ್ನಾಟಕದಲ್ಲಿ ಒಂದೇ ದಿನ 8749 ಕೊವಿಡ್-19 ಸೋಂಕಿತರು ಗುಣಮುಖ

ಬೆಂಗಳೂರು, ಅಕ್ಟೋಬರ್.23: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿನ ಹರಡುವಿಕೆ ಪ್ರಮಾಣ ಕೊಂಚ ತಗ್ಗಿದೆ. ಕಳೆದ 24 ಗಂಟೆಗಳಲ್ಲಿ 5352 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆಯು 793907ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಒಂದೇ ದಿನ ಮಹಾಮಾರಿ ಕೊರೊನಾವೈರಸ್ ಸೋಂಕಿಗೆ 51 ಜನರು ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 10821ಕ್ಕೆ ಏರಿಕೆಯಾಗಿದೆ. ಕೊವಿಡ್-19 ಸೋಂಕಿತ ಪ್ರಕರಣ ಸಂಬಂಧ ರಾಜ್ಯ ಆರೋಗ್ಯ ಮತ್ತು ಕುಟುಂಬ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ.

ಕೊರೊನಾವೈರಸ್ ಒಟ್ಟು 793907 ಸೋಂಕಿತ ಪ್ರಕರಣಗಳ ಪೈಕಿ 693584 ಸೋಂಕಿತರು ಗುಣಮುಖರಾಗಿದ್ದಾರೆ. 89483 ಸಕ್ರಿಯ ಪ್ರಕರಣಗಳಿವೆ ಎಂದು ತಿಳಿದು ಬಂದಿದೆ. ಕಳೆದ 24 ಗಂಟೆಗಳಲ್ಲಿ 8749 ಕೊವಿಡ್-19 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

5352 New Coronavirus Cases Reported in Karnataka Today, State Tally Rise to 793907

ಎಷ್ಟು ಮಂದಿಗೆ ಕೊರೊನಾವೈರಸ್ ಪರೀಕ್ಷೆ?:

ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆ ಸಾರ್ವಜನಿಕರನ್ನು ಕೊವಿಡ್-19 ತಪಾಸಣೆಗೆ ಒಳಪಡಿಸುವುದು ತುರ್ತು ಅಗತ್ಯವಾಗಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲೇ 21615 ಜನರನ್ನು ರಾಪಿಡ್ ಆಂಟಿಜೆನ್ ಡಿಟೆಕ್ಷನ್ ತಪಾಸಣೆಗೆ ಒಳಪಡಿಸಲಾಗಿದ್ದು, 86741 ಜನರಿಗೆ RT-PCR ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಒಂದೇ ದಿನ 108356 ಜನರನ್ನು ಕೊವಿಡ್-19 ಟೆಸ್ಟ್ ಗೆ ಒಳಪಡಿಸಲಾಗಿದೆ. ರಾಜ್ಯದಲ್ಲಿ ಇದುವರೆಗೂ 71,68,545 ಜನರಿಗೆ ಕೊವಿಡ್-19 ತಪಾಸಣೆಗೆ ಒಳಪಡಿಸಲಾಗಿದೆ.

ಜಿಲ್ಲೆವಾರು ಕೊವಿಡ್-19 ಕೇಸ್?:

ರಾಜ್ಯದಲ್ಲಿ ಒಟ್ಟು 5352 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 17, ಬಳ್ಳಾರಿ 155, ಬೆಳಗಾವಿ 80, ಬೆಂಗಳೂರು ಗ್ರಾಮಾಂತರ 152, ಬೆಂಗಳೂರು 2688, ಬೀದರ್ 3, ಚಾಮರಾಜನಗರ 40, ಚಿಕ್ಕಬಳ್ಳಾಪುರ 108, ಚಿಕ್ಕಮಗಳೂರು 102, ಚಿತ್ರದುರ್ಗ 99, ದಕ್ಷಿಣ ಕನ್ನಡ 329, ದಾವಣಗೆರೆ 298, ಧಾರವಾಡ 92, ಗದಗ 12, ಹಾಸನ 109, ಹಾವೇರಿ 32, ಕಲಬುರಗಿ 62, ಕೊಡಗು 37, ಕೋಲಾರ 47, ಕೊಪ್ಪಳ 27, ಮಂಡ್ಯ 168, ಮೈಸೂರು 220, ರಾಯಚೂರು 70, ರಾಮನಗರ 11, ಶಿವಮೊಗ್ಗ 47, ತುಮಕೂರು 100, ಉಡುಪಿ 50, ಉತ್ತರ ಕನ್ನಡ 113, ವಿಜಯಪುರ 92, ಯಾದಗಿರಿ 36 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+