ರಾಜ್ಯದಲ್ಲಿಂದು 53 ಹೊಸ ಪ್ರಕರಣ, ಶಿವಮೊಗ್ಗಕ್ಕೆ ಕೊರೊನಾ ಎಂಟ್ರಿ

ಬೆಂಗಳೂರು, ಮೇ 10: ಕರ್ನಾಟಕದಲ್ಲಿಂದು 53 ಹೊಸ ಕೊರೊನಾ ಕೇಸ್ ಪತ್ತೆಯಾಗಿದೆ. ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನ 12 ಗಂಟೆವರೆಗಿನ ವರದಿ ಬಿಡುಗಡೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 847ಕ್ಕೆ ಏರಿಕೆಯಾಗಿದೆ.

ಹಸಿರು ವಲಯ ಶಿವಮೊಗ್ಗದಲ್ಲಿ 8 ಸೋಂಕಿತ ಪ್ರಕರಣಗಳು ದಾಖಲಾಗಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ. ಅಹಮದಾಬಾದ್‌ಗೆ ಭೇಟಿ ನೀಡಿದ್ದ ಜನರಿಗೆ ಶಿವಮೊಗ್ಗದಲ್ಲಿ ಕೊವಿಡ್ ಸೋಂಕು ಕಾಣಿಸಿಕೊಂಡಿದೆ.

53 New COVID19 Cases Reported In Karnataka Today

53 ಹೊಸ ಕೇಸ್ ಪೈಕಿ ಬೆಳಗಾವಿ 22, ಶಿವಮೊಗ್ಗ 8, ಬೆಂಗಳೂರು 3, ಉತ್ತರ ಕನ್ನಡದ ಭಟ್ಕಳದಲ್ಲಿ 7, ಕಲಬುರಗಿ 3, ಬಾಗಲಕೋಟೆ 8, ದಾವಣಗೆರೆ 1, ಚಿಕ್ಕಬಳ್ಳಾಪುರ 1 ಕೇಸ್ ದಾಖಲಾಗಿದೆ.

ಬೆಳಗಾವಿಯಲ್ಲಿ ಇಂದು ಅತಿ ಹೆಚ್ಚು ಸೋಂಕು ವರದಿಯಾಗಿದ್ದು, ಇವರೆಲ್ಲರು ರಾಜಸ್ಥಾನದ ಅಜಮೀರ್‌ಗೆ ಪ್ರಯಾಣ ಮಾಡಿದ್ದ ಹಿನ್ನೆಲೆ ಹೊಂದಿದ್ದಾರೆ.

ಇನ್ನುಳಿದಂತೆ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 847ಕ್ಕೆ ಏರಿಕೆಯಾಗಿದ್ದು, ಈವರೆಗೂ 31 ಜನರು ಮೃತಪಟ್ಟಿದ್ದಾರೆ. 405 ಜನರು ಸೋಂಕಿನಿಂದ ಚೇತರಿಸಿಕೊಂಡ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+