ಚಿಕ್ಕಮಗಳೂರು: ಬಿಜೆಪಿಗೆ ಸೇರಿದ್ದೆನ್ನಲಾದ 50 ಸಾವಿರ ಸೀರೆ ವಶ
ಚಿಕ್ಕಮಗಳೂರು, ಏಪ್ರಿಲ್ 30: ಚುನಾವಣೆಗೆ ಇನ್ನೇನು 11 ದಿನಗಳಿವೆ. ಈ ಹಿನ್ನೆಲೆಯಲ್ಲಿ ಮತದಾರರನ್ನು ಓಲೈಸುವ ಕೆಲಸ ರಾಜ್ಯಾದ್ಯಂತ ಭರದಿಂದ ಸಾಗಿದೆ.
ಚೆಕ್ ಪೋಸ್ಟ್ ಗಳನ್ನು ಹಾಕಿ ಮತದಾರರನ್ನು ಒಲೈಸುವ ಸಾಮಾಗ್ರಿಗಳ ಬೇಟೆಗೆ ಪೊಲೀಸರು ಇಳಿದಿದ್ದಾರೆ. ಆದರೆ ರಂಗೋಲಿ ಕೆಳಗೆ ತೂರಿರುವ ಅಭ್ಯರ್ಥಿಗಳು ಬಿಗಿ ಪಹರೆಯ ಮಧ್ಯೆಯೂ ಓಲೈಕೆ ರಾಜಕಾರಣದಲ್ಲಿ ತೊಡಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಅಲ್ಲಲ್ಲಿ ವಸ್ತುಗಳು, ನಗ-ನಗದು, ಮದ್ಯವನ್ನು ವಶಕ್ಕೆ ಪಡೆಯಲಾಗುತ್ತಿದೆ.
ಇದೇ ರೀತಿ ಇಂದು ಚಿಕ್ಕಮಗೂರಿನಲ್ಲಿ ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳ ಜಂಟಿ ಕಾರ್ಯಚರಣೆ ನಡೆಸಿ ಭರ್ಜರಿ ಬೇಟೆಯಾಡಿದ್ದಾರೆ.

ಚಿಕ್ಕಮಗಳೂರಿನ ಕೌಂತ್ಯ ಹೋಟೇಲ್ ಹಿಂಭಾಗ 10 ಚಕ್ರದ ಲಾರಿಯಲ್ಲಿ ಬಂದಿದ್ದ 50,000 ಕ್ಕೂ ಅಧಿಕ ಸೀರೆಗಳನ್ನು ವಶಕ್ಕ ಪಡೆದಿದ್ದಾರೆ.
ಸೀರೆಗಳನ್ನು ವಶಕ್ಕೆ ಪಡೆದ ಸ್ಥಳದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆಯನ್ನೂ ನಡೆಸುತ್ತಿದ್ದಾರೆ. ಈ ಸೀರೆಗಳು ಬಿಜೆಪಿ ಪಕ್ಷಕ್ಕೆ ಸೇರಿದ ಸೀರೆಗಳು ಎನ್ನಲಾಗಿದೆ.












Click it and Unblock the Notifications