ಕರ್ನಾಟಕ: ಸ್ಟೈಫಂಡ್ ಹೆಚ್ಚಳಕ್ಕೆ ಐದು ಜಿಲ್ಲೆಗಳ ವಿದ್ಯಾರ್ಥಿಗಳ ಆಗ್ರಹ

ಕರ್ನಾಟಕ ರಾಜ್ಯದ ಐದು ಜಿಲ್ಲೆಗಳ ಈ ವಿದ್ಯಾರ್ಥಿಗಳು ಸ್ಟೈಫಂಡ್ ಹೆಚ್ಚಳ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಈ ಸಂಬಂಧ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾರಣವೇನು ತಿಳಿಯಿರಿ.

ಬೆಂಗಳೂರು, ಫೆಬ್ರವರಿ 28: ಕರ್ನಾಟಕ ರಾಜ್ಯದ ಐದು ಜಿಲ್ಲೆಗಳ ವಿದ್ಯಾರ್ಥಿಗಳು ಸ್ಟೈಫಂಡ್ ಹೆಚ್ಚಳ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಈ ಸಂಬಂಧ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ.

ಹೌದು,ಇತರ ಕೆಲವು ವೃತ್ತಿಪರ ಕೋರ್ಸ್‌ಗಳನ್ನು ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸ್ಟೈಫಂಡ್ (ಭತ್ಯೆ) ಹೆಚ್ಚಿಸಿದಂತೆ ನಮ್ಮ ಇಂಟರ್ನಶಿಪ್ ಸಂದರ್ಭದಲ್ಲಿ ನೀಡುವ ಹಣವನ್ನು ಏರಿಕೆ ಮಾಡಬೇಕು. ಹೀಗೆಂದು ರಾಜ್ಯದ ಐದು ಕ್ಯಾಂಪಸ್‌ಗಳ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

5 Campus Veterinary students of Karnataka urge for stipend increase

ಕರ್ನಾಟಕದ ಬೆಂಗಳೂರು, ಬೀದರ್, ಹಾಸನ, ಶಿವಮೊಗ್ಗ ಮತ್ತು ಗದಗದಲ್ಲಿ ಪಶುವೈದ್ಯಕೀಯ ವಿಜ್ಞಾನ ಮತ್ತು ಪಶುವೈದ್ಯಕೀಯ ವಿದ್ಯಾರ್ಥಿಗಳು ಸೋಮವಾರ ತರಗತಿಗಳನ್ನು ತೊರೆದಿದ್ದಾರೆ. ಈ ಐದು ಜಿಲ್ಲೆಗಳ ಕ್ಯಾಂಪಸ್‌ಗಳ ಪಶುವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಪಶುವೈದ್ಯಕೀಯ ಕೋರ್ಸ್‌ ಅನ್ನು ಪೂರೈಸಲು ಒಟ್ಟು ಐದೂವರೆ ವರ್ಷ ಹಿಡಿಯುತ್ತದೆ. ಅದರಲ್ಲಿ ಕೊನೆಯ ವರ್ಷ ಇಂಟರ್ನ್‌ಶಿಪ್ ತರಬೇತಿ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಪ್ರಸ್ತುತ ಪಶುವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 14,000 ರೂಪಾಯಿ ಸ್ಟೈಫಂಡ್ ನೀಡಲಾಗುತ್ತದೆ.

5 Campus Veterinary students of Karnataka urge for stipend increase

ಆದರೆ ಇಂಟರ್ನ್‌ಶಿಪ್ ಅವಧಿಯಲ್ಲಿ ನಾವು ರಾಜ್ಯದ ವಿವಿಧ ಕೇಂದ್ರಗಳಿಗೆ ತೆರಳಬೇಕಾಗುತ್ತದೆ. ಈ ಸಂದರ್ಭದಲ್ಲಿ ಇರುವ 14,000 ರೂಪಾಯಿ ಅತ್ಯಲ್ಪವಾಗಿದೆ. ಆಹಾರ, ವಸತಿ ಮತ್ತು ಸಾರಿಗೆ ಸೇರಿದಂತೆ ನಮ್ಮ ವೆಚ್ಚಗಳು ಪ್ರಯಾಣದ ವೇಳೆ ಹೆಚ್ಚಿರುತ್ತದೆ. ಈ ಹಣ ಎಲ್ಲವನ್ನು ಒಳಗೊಂಡಿಲ್ಲ, ಸಾಕಾಗುವುದಿಲ್ಲ. ಹೀಗಾಗಿ ಕೂಡಲೇ ಸ್ಟೇಫಂಡ್ ಪ್ರಮಾಣ ಹೆಚ್ಚಿಸುವಂತೆ ಬೆಂಗಳೂರಿನ ಪಶುವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯೊಬ್ಬರು ಅಳಲು ತೋಡಿಕೊಂಡರು.

ಎಂಬಿಬಿಎಸ್ ಪದವೀದರರ ಸ್ಟೈಫಂಡ್ ಹೆಚ್ಚಾಗಿದೆ. ಅವರಿಗೆ ಮಾಸಿಕವಾಗಿ 30 ಸಾವಿರ ರೂಪಾಯಿ ನೀಡಲಾಗುತ್ತಿದೆ. ಆದರೆ ನಾವು 14,000 ರೂಪಾಯಿಯನ್ನೇ ಪಡೆಯಬೇಕಾಗಿದೆ ಎಂದು ಅವರು ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+