• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕದ 4 ಜಿಲ್ಲೆಗಳಲ್ಲೇ ಒಂದೇ ಒಂದು ಕೊವಿಡ್-19 ಪ್ರಕರಣಗಳಿಲ್ಲ!

|

ಬೆಂಗಳೂರು, ಜನವರಿ.27: ರಾಜ್ಯದಲ್ಲಿ ಕೊರೊನಾವೈರಸ್ ಅಟ್ಟಹಾಸದ ಪ್ರಮಾಣ ಬಹುತೇಕ ತಗ್ಗಿದೆ. ಕಳೆದ 24 ಗಂಟೆಗಳಲ್ಲಿ 428 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆಯು 937383ಕ್ಕೆ ಏರಿಕೆಯಾಗಿದೆ.

ಕರ್ನಾಟಕದಲ್ಲಿ ಮಹಾಮಾರಿಗೆ ಬಲಿಯಾಗುತ್ತಿದ್ದವ ಸಂಖ್ಯೆ ಕೂಡಾ ಇಳಿಮುಖವಾಗಿದೆ. ಕಳೆದೊಂದು ದಿನದಲ್ಲಿ ಕೊರೊನಾವೈರಸ್ ನಿಂದ ಮೂವರು ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆ 12207ಕ್ಕೆ ಏರಿಕೆ ಆಗಿರುವುದು ಗೊತ್ತಾಗಿದೆ.

ಸಿಹಿಸುದ್ದಿ: 8 ತಿಂಗಳಿನಲ್ಲೇ ಮೊದಲ ಬಾರಿಗೆ ಕೊರೊನಾವೈರಸ್ ದಾಖಲೆ!

ಬುಧವಾರದ ಅಂಕಿ-ಅಂಶಗಳ ಪ್ರಕಾರ, ಒಟ್ಟು 937383 ಸೋಂಕಿತ ಪ್ರಕರಣಗಳ ಪೈಕಿ 918859 ಸೋಂಕಿತರು ಗುಣಮುಖರಾಗಿದ್ದಾರೆ. ಒಂದು ದಿನದಲ್ಲೇ 760 ಸೋಂಕಿತರು ಗುಣಮುಖರಾಗಿದ್ದು, ಉಳಿದಂತೆ ರಾಜ್ಯದಲ್ಲಿ 6298 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಾಹಿತಿ ನೀಡಿದೆ.

ಯಾವ ರಾಜ್ಯದಲ್ಲಿ ಎಷ್ಟು ಕೊವಿಡ್-19 ಪ್ರಕರಣ?

ರಾಜ್ಯದಲ್ಲಿ ಒಟ್ಟು 428 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 0, ಬಳ್ಳಾರಿ 4, ಬೆಳಗಾವಿ 9, ಬೆಂಗಳೂರು ಗ್ರಾಮಾಂತರ 7, ಬೆಂಗಳೂರು 227, ಬೀದರ್ 2, ಚಾಮರಾಜನಗರ 3, ಚಿಕ್ಕಬಳ್ಳಾಪುರ 3, ಚಿಕ್ಕಮಗಳೂರು 6, ಚಿತ್ರದುರ್ಗ 13, ದಕ್ಷಿಣ ಕನ್ನಡ 14, ದಾವಣಗೆರೆ 14, ಧಾರವಾಡ 16, ಗದಗ 1, ಹಾಸನ 15, ಹಾವೇರಿ 0, ಕಲಬುರಗಿ 12, ಕೊಡಗು 14, ಕೋಲಾರ 4, ಕೊಪ್ಪಳ 0, ಮಂಡ್ಯ 8, ಮೈಸೂರು 17, ರಾಯಚೂರು 1, ರಾಮನಗರ 0, ಶಿವಮೊಗ್ಗ 4, ತುಮಕೂರು 10, ಉಡುಪಿ 6, ಉತ್ತರ ಕನ್ನಡ 14, ವಿಜಯಪುರ 2, ಯಾದಗಿರಿ 2 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.

   Kerala ದಲ್ಲಿ ನಿಯಂತ್ರಣಕ್ಕೆ ಬಾರದ Corona ಸೋಂಕು! | Oneindia Kannada

   English summary
   428 New Coronavirus Cases Reported in Karnataka Today, State Tally Rise to 937383.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X