ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 4272 ಕೊರೊನಾ ಪ್ರಕರಣ ದಾಖಲು

ಬೆಂಗಳೂರು, ಜೂನ್ 26: ರಾಜ್ಯದಲ್ಲಿ ಶನಿವಾರ 4272 ಹೊಸ ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗಿವೆ. ರಾಜಧಾನಿ ಬೆಂಗಳೂರಿನಲ್ಲಿ 955 ಪ್ರಕರಣಗಳು ಪತ್ತೆಯಾಗಿವೆ.

ಕಳೆದ 24 ಗಂಟೆಗಳಲ್ಲಿ 115 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈವರೆಗೂ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 34,654ಕ್ಕೆ ಏರಿಕೆಯಾಗಿದೆ. ಇಂದು 6,126 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

4272 New Coronavirus Cases Reported in Karnataka On June 26

ಶನಿವಾರದ ಅಂಕಿ ಸಂಖ್ಯೆ ಪ್ರಕಾರ, ರಾಜ್ಯದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 28,31,026 ಆಗಿದೆ. ಇಲ್ಲಿಯವರೆಗೆ ಒಟ್ಟು 26,91,123 ಸೋಂಕಿತರು ಗುಣಮುಖರಾಗಿದ್ದಾರೆ. ಸದ್ಯಕ್ಕೆ 105226 ಸಕ್ರಿಯ ಕೊರೊನಾ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಜಿಲ್ಲಾವಾರು ಕೊರೊನಾ ಪ್ರಕರಣಗಳ ವಿವರ: ರಾಜ್ಯದಲ್ಲಿ ಒಟ್ಟು 4272 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಪೈಕಿ ಬಾಗಲಕೋಟೆ 3, ಬಳ್ಳಾರಿ 61, ಬೆಳಗಾವಿ 115, ಬೆಂಗಳೂರು ಗ್ರಾಮಾಂತರ 89, ಬೆಂಗಳೂರು 955, ಬೀದರ್ 1, ಚಾಮರಾಜನಗರ 71, ಚಿಕ್ಕಬಳ್ಳಾಪುರ 52, ಚಿಕ್ಕಮಗಳೂರು 200, ಚಿತ್ರದುರ್ಗ 75, ದಕ್ಷಿಣ ಕನ್ನಡ 375, ದಾವಣಗೆರೆ 80, ಧಾರವಾಡ 60, ಗದಗ 30, ಹಾಸನ 320, ಹಾವೇರಿ 27, ಕಲಬುರಗಿ 22, ಕೊಡಗು 160, ಕೋಲಾರ 134, ಕೊಪ್ಪಳ 26, ಮಂಡ್ಯ 134, ಮೈಸೂರು 647, ರಾಯಚೂರು 19, ರಾಮನಗರ 13, ಶಿವಮೊಗ್ಗ 217, ತುಮಕೂರು 159, ಉಡುಪಿ 139, ಉತ್ತರ ಕನ್ನಡ 62, ವಿಜಯಪುರ 12, ಯಾದಗಿರಿ 14 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

Recommended Video

      ಕಾಡಿನಲ್ಲಿ ಫೋಟೋ ಕ್ಲಿಕ್ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+