ಕರ್ನಾಟಕದಲ್ಲಿ ಹೊಸದಾಗಿ 426 ಮಂದಿ ಕೊರೊನಾ ಸೋಂಕಿತರು ಪತ್ತೆ
ಬೆಂಗಳೂರು,ಫೆಬ್ರವರಿ 03: ಕರ್ನಾಟಕದಲ್ಲಿ ಹೊಸದಾಗಿ 426 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
ಒಂದೇ ದಿನ ಇಬ್ಬರು ಮೃತಪಟ್ಟಿದ್ದಾರೆ, ಆಸ್ಪತ್ರೆಯಿಂದ 433 ಮಂದಿ ಬಿಡುಗಡೆಯಾಗಿದ್ದಾರೆ. ಒಟ್ಟು 5915 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ 922437 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಇದುವರೆಗೆ 12225 ಮಂದಿ ಸಾವನ್ನಪ್ಪಿದ್ದಾರೆ. 940596 ಪ್ರಕರಣಗಳಿವೆ. 146 ಮಂದಿ ಐಸಿಯುನಲ್ಲಿದ್ದಾರೆ.ಬಾಗಲಕೋಟೆ 1, ಬಳ್ಳಾರಿ 5, ಬೆಳಗಾವಿ 8,ಬೆಂಗಳೂರು ಗ್ರಾಮಾಂತರ 04, ಬೆಂಗಳೂರು ನಗರ 231, ಬೀದರ್ 1,ಚಾಮರಾಜನಗರ 1,ಚಿಕ್ಕಬಳ್ಳಾಪುರ 3,ಚಿಕ್ಕಮಗಳೂರು 01, ಚಿತ್ರದುರ್ಗ 9, ದಕ್ಷಿಣ ಕನ್ನಡ 61, ದಾವಣಗೆರೆ 12, ಧಾರವಾಡ 3, ಹಾಸನ 03, ಕಲಬುರಗಿ 18, ಕೊಡಗು 06, ಕೋಲಾರ 03, ಕೊಪ್ಪಳ 02, ಮಂಡ್ಯ 07, ಮೈಸೂರು 10, ರಾಯಚೂರು 01, ರಾಮನಗರ 01, ಶಿವಮೊಗ್ಗ 05, ತುಮಕೂರು 25, ಉಡುಪಿ 04, ಉತ್ತರ ಕನ್ನಡ 01 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.












Click it and Unblock the Notifications