ಕರ್ನಾಟಕದಲ್ಲಿ 67 ಸಾವಿರಕ್ಕೇರಿದ ಕೊರೊನಾ ಸೋಂಕಿತರ ಸಂಖ್ಯೆ
ಬೆಂಗಳೂರು, ಜುಲೈ 20: ಕರ್ನಾಟಕದಲ್ಲಿ ಹೊಸದಾಗಿ 3648 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 72 ಮಂದಿ ಇಂದು ಮೃತಪಟ್ಟಿದ್ದಾರೆ.
ಇದುವರೆಗೆ 67,420 ಕೊರೊನಾ ಸೋಂಕಿತರಿದ್ದು, 1403 ಮಂದಿ ಸಾವನ್ನಪ್ಪಿದ್ದಾರೆ. ಇಂದು 730 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೆ 23,795 ಮಂದಿ ಗುಣಮುಖರಾಗಿದದ್ದಾರೆ. 280 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಇದುವರೆಗೆ 1,52,310 ಮಂದಿ ತಪಾಸಣೆಗೆ ಒಳಗಾಗಿದ್ದಾರೆ. ಇಂದು 36,473 ಮಂದಿಯನ್ನು ಪರೀಕ್ಷಿಸಲಾಗಿದೆ. ಇದುವರೆಗೆ 1057303 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿತ್ತು.

ಬೆಂಗಳೂರಿನಲ್ಲಿ 1452, ಬಳ್ಳಾರಿ 234, ಬೆಂಗಳೂರು ಗ್ರಾಮಾಂತರ 208, ಧಾರವಾಡ 200, ವಿಜಯಪುರ 160, ಮೈಸೂರು 149, ಕಲಬುರಗಿ 124, ಉಡುಪಿ 98, ದಕ್ಷಿಣ ಕನ್ನಡ 89, ಉತ್ತರ ಕನ್ನಡ 78, ದಾವಣಗೆರೆ 73, ಹಾಸನ 67, ಕೊಪ್ಪಳ 62, ಬೆಳಗಾವಿ 60, ಚಿಕ್ಕಬಳ್ಳಾಪುರ 60, ರಾಮನಗರ 56, ತುಮಕೂರು 55, ಬಾಗಲಕೋಟೆ 54, ಚಾಮರಾಜನಗರ 49, ಯಾದಗಿರಿ 43, ಚಿಕ್ಕಮಗಳೂರು 43, ಮಂಡ್ಯ 41, ಕೋಲಾರ 41, ಹಾವೇರಿ 36, ಗದಗ 31, ಚಿತ್ರದುರ್ಗ 29, ಕೊಡಗು 8, ರಾಯಚೂರಲ್ಲಿ 3 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ.












Click it and Unblock the Notifications