ಸಿದ್ದು ವಿರುದ್ದ ಆಖಾಡಕ್ಕಿಳಿದ 35 ಶಾಸಕರು: ಪ್ರಯತ್ನಕ್ಕೆ ಫಲ ಸಿಗುವುದೇ?

Posted By:
Subscribe to Oneindia Kannada

ಸಚಿವ ಸ್ಥಾನ, ನಿಗಮ ಮಂಡಳಿ ಸ್ಥಾನಕ್ಕೆ ಭಗೀರಥ ಪ್ರಯತ್ನ ಮುಂದುವರಿಸಲು ನಿರ್ಧರಿಸಿರುವ ಸಮಾನ ಮನಸ್ಕ ಶಾಸಕರು ಮಗುದೊಮ್ಮೆ ದೆಹಲಿಯಲ್ಲಿ ಹೈಕಮಾಂಡ್ ಬಾಗಿಲು ಬಡಿಯಲು ಸಜ್ಜಾಗಿದ್ದಾರೆ.

30 ರಿಂದ 35 ಶಾಸಕರು ದೆಹಲಿಗೆ ಹೋಗಲು ದಿನಾಂಕವನ್ನು ನಿಗದಿ ಪಡಿಸಿಕೊಂಡಿದ್ದಾರೆ. ಇದೇ ತಿಂಗಳು 9 ಅಥವಾ 10ನೇ ತಾರೀಕಿಗೆ ಇದಕ್ಕಾಗಿ ದಿನಾಂಕ ನಿಗದಿಯಾಗಿದೆ.(ತನ್ನ ವಿದ್ಯಾರ್ಥಿ ಜೀವನದ ಬಗ್ಗೆ ಸಿಎಂ ಹೇಳಿದ್ದು)

ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾಗುವುದಾಗಿ, ಸಮಾನ ಮನಸ್ಕ ಶಾಸಕರನ್ನು ಒಗ್ಗೂಡಿಸಿರುವ ಬೆಂಗಳೂರು ಯಶವಂತಪುರದ ಶಾಸಕ ಎಸ್ ಟಿ ಸೋಮಶೇಖರ್ ತುಮಕೂರಿನಲ್ಲಿ ಶುಕ್ರವಾರ (ಏ 2) ಹೇಳಿದ್ದಾರೆ.

ಅಧಿಕಾರಕ್ಕೆ ಬಂದ ನಂತರ ಅದೆಷ್ಟೋ ಬಾರಿ ಸಂಪುಟ ಪುನಾರಚನೆ ಮಾಡುವುದಾಗಿ ಹೇಳಿ ಆಸೆ ಹುಟ್ಟಿಸಿರುವ ಮುಖ್ಯಮಂತ್ರಿಗಳು, ಬಜೆಟ್ (2016) ಅಧಿವೇಶನದ ನಂತರ ಪುನಾರಚಿಸುವುದಾಗಿ ಹೇಳಿದ್ದರು.

ಸಚಿವ ಸಂಪುಟ ಪುನಾರಚನೆ ಸಂದರ್ಭದಲ್ಲಿ ಹೊಸಬರಿಗೆ ಅವಕಾಶ ನೀಡಬೇಕೆಂದು ಹೈಕಮಾಂಡ್ ಮೇಲೆ ಒತ್ತಡ ತರುವುದರ ಜೊತೆಗೆ, ಹಿರಿಯ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡವ ಬೇಡಿಕೆಯನ್ನೂ ದೆಹಲಿಯಲ್ಲಿ ವರಿಷ್ಠರ ಮುಂದೆ ಇಡಲಿದ್ದೇವೆ ಎಂದು ಸೋಮಶೇಖರ್ ಸ್ಪಷ್ಟ ಪಡಿಸಿದ್ದಾರೆ.(ಅಡಕತ್ತರಿಯಲ್ಲಿ ಸಿದ್ದು)

ಸಿಎಂ ಕಾರ್ಯವೈಖರಿ, ದಿಗ್ವಿಜಯ್ ಸಿಂಗ್ ವಿರುದ್ದವೂ ದೂರು, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ...

ನಾನೂ ಒಬ್ಬ ಸಚಿವ ಸ್ಥಾನದ ಆಕಾಂಕ್ಷಿ

ನಾನೂ ಒಬ್ಬ ಸಚಿವ ಸ್ಥಾನದ ಆಕಾಂಕ್ಷಿ

ನಾನೂ ಒಬ್ಬ ಸಚಿವ ಸ್ಥಾನದ ಆಕಾಂಕ್ಷಿ, ಇದನ್ನೂ ಹೈಕಮಾಂಡ್ ಮುಂದೆ ತಿಳಿಸಲಿದ್ದೇನೆ. ಎರಡೂವರೆ ಮೂರು ವರ್ಷಗಳ ಕಾಲ ಸಚಿವರಾಗಿ, ಸರಿಯಾಗಿ ಕೆಲಸ ಮಾಡದ ಸಚಿವರನ್ನು ಕೈಬಿಟ್ಟು, ಉತ್ಸಾಹಿಗಳಿಗೆ ಸಚಿವ ಸ್ಥಾನ ನೀಡಿ, ಪಕ್ಷದ ವರ್ಚಸ್ಸನ್ನು ಹೆಚ್ಚಿಸಲು ಸಹಕಾರ ನೀಡಿ ಎಂದು ಹೈಕಮಾಂಡ್ ಬಳಿ ಮನವಿ ಮಾಡುವುದಾಗಿ ಸೋಮಶೇಖರ್ ಹೇಳಿದ್ದಾರೆ.

ಸಿದ್ದಗಂಗಾ ಶ್ರೀಗಳ ಭೇಟಿಯ ನಂತರ ಹೇಳಿಕೆ

ಸಿದ್ದಗಂಗಾ ಶ್ರೀಗಳ ಭೇಟಿಯ ನಂತರ ಹೇಳಿಕೆ

ತುಮಕೂರಿನಲ್ಲಿ ಸಿದ್ದಗಂಗಾ ಶ್ರೀಗಳ 109ನೇ ಜನ್ಮದಿನೋತ್ಸವದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಸೋಮಶೇಖರ್, ಒಂಬತ್ತು ವರ್ಷಗಳ ನಂತರ ಪಕ್ಷ ಅಧಿಕಾರಕ್ಕೆ ಬಂದಿದೆ. ಮುಂದಿನ ಎರಡು ವರ್ಷದಲ್ಲಿ ಎದುರಾಗುವ ಚುನಾವಣೆ ಎದುರಿಸಲು ಉತ್ತಮ ತಂಡವನ್ನು ಕಟ್ಟಬೇಕಾಗಿದೆ ಎಂದಿದ್ದಾರೆ.

ಸಿದ್ದು ಕಾರ್ಯವೈಖರಿ

ಸಿದ್ದು ಕಾರ್ಯವೈಖರಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯವೈಖರಿ ಬಗ್ಗೆ ಕೂಡಾ ಸಮಾನ ಮನಸ್ಕರು ದೂರು ನೀಡಲು ನಿರ್ಧರಿಸಿದ್ದಾರೆ ಎನ್ನುವ ಸುದ್ದಿಯಿದೆ. ಎಸಿಬಿ ರಚನೆ, ಇತ್ತೀಚಿನ ಚುನಾವಣೆಯ ಫಲಿತಾಂಶದ ಬಗ್ಗೆ ಹೈಕಮಾಂಡ್ ನಲ್ಲಿ ವಿವರಿಸಲು ಸಮಾನ ಮನಸ್ಕರು ತಯಾರಾಗಿದ್ದಾರೆ.

ದಿಗ್ವಿಜಯ್ ಸಿಂಗ್

ದಿಗ್ವಿಜಯ್ ಸಿಂಗ್

ರಾಜ್ಯ ಉಸ್ತುವಾರಿಯಾಗಿರುವ ದಿಗ್ವಿಜಯ್ ಸಿಂಗ್, ಪಕ್ಷವನ್ನು ರಾಜ್ಯದಲ್ಲಿ ಮುನ್ನಡೆಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಅವರು ಉಸ್ತುವಾರಿ ತೆಗೆದುಕೊಂಡ ನಂತರ ಪಕ್ಷ ಮುಜುಗರಕ್ಕೀಡಾದ ಉದಾಹರಣೆಗಳೇ ಜಾಸ್ತಿ. ಅವರನ್ನು ಉಸ್ತುವಾರಿಯಿಂದ ಎತ್ತಂಗಡಿ ಮಾಡಬೇಕು ಎನ್ನುವುದು ಸಮಾನ ಮನಸ್ಕರ ಆಗ್ರಹ.

ಕೆಲವೊಂದು ಸಮಾನ ಮನಸ್ಕರ ಶಾಸಕರ ಪಟ್ಟಿ

ಕೆಲವೊಂದು ಸಮಾನ ಮನಸ್ಕರ ಶಾಸಕರ ಪಟ್ಟಿ

ಸುಮಾರು 30-35 ಸಮಾನ ಮನಸ್ಕರು ಇರುವ ಶಾಸಕರ ಪಟ್ಟಿಯಲ್ಲಿ ಸೋಮಶೇಖರ್, ಪ್ರಿಯಕೃಷ್ಣ, ನರೇಂದ್ರಸ್ವಾಮಿ, ರಘುಮೂರ್ತಿ, ಶಿವರಾಂ ಹೆಬ್ಬಾರ್, ಮುನಿರತ್ನ, ಕೆ ಎನ್ ರಾಜಣ್ಣ, ಬೈರತಿ ಬಸವರಾಜ್, ಆರ್ ವಿ ದೇವರಾಜ್, ಎಂ ಕೃಷ್ಣಪ್ಪ ಮುಂತಾದವರಿದ್ದಾರೆ ಎನ್ನಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
35 MLAs headed by Yeshwanthpur (Bengaluru) MLA, S T Somashekhar meeting High Command, demanding for Minister post and CM Siddaramaiah and AICC General Secretary Digvijay Singh working style on April 9 or 10th.
Please Wait while comments are loading...