Get Updates
Get notified of breaking news, exclusive insights, and must-see stories!

ರಾಜ್ಯದಲ್ಲಿ 34 ತಹಶೀಲ್ದಾರರ ದಿಢೀರ್ ವರ್ಗಾವಣೆ

Transfer of Tahsildars: ರಾಜ್ಯ ಸರ್ಕಾರ ಆಗಾಗ ಆಡಳಿತ ಯಂತ್ರಕ್ಕೆ ಸರ್ಜರಿ ಮಾಡುತ್ತಲಿರುತ್ತದೆ. ಹಾಗೆಯೇ ಇದೀಗ 34 ತಹಶೀಲ್ದಾರರ ದಿಢೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಹಾಗಾದರೆ ಯಾರನ್ನು ಎಲ್ಲಿಗೆ ವರ್ಹಾಯಿಸಲಾಗಿದೆ ಎನ್ನುವ ಸಂಪೂರ್ಣ ಪಟಗಟಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಕಂದಾಯ ಇಲಾಖೆ ಈ ಕುರಿತಂತೆ ಅಧಿಸೂಚನೆ ಹೊರಡಿಸಿದ್ದು, ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ತಹಶೀಲ್ದಾರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿರುವುದಾಗಿ ತಿಳಿಸಿದೆ.

52 Tahsildar sudden transferred by state government

ಬೆಂಗಳೂರಿನ ವಿವಿ ಟವರ್‌ನಲ್ಲಿ ವಿಶೇಷಾಧಿಕಾರಿಗಳು, ಸಕ್ಷಮ ಪ್ರಾಧಿಕಾರಿಗಳ ಕಾರ್ಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಂತಹ ತಹಶೀಲ್ದಾರ್ ಗ್ರೇಡ್-2 ಕಾವ್ಯಶ್ರೀ ಎಚ್ ಅವರನ್ನು ಬಾದಾಮಿ ತಾಲ್ಲೂಕು ತಹಶೀಲ್ದಾರ್ ಗ್ರೇಡ್-1 ಆಗಿ ವರ್ಗಾಯಿಸಲಾಗಿದೆ. ಬಾಗಲಕೋಟೆಯ ಗುಳೇದಗುಡ್ಡ ತಾಲ್ಲೂಕಿನ ವಿಶೇಷ ತಹಶೀಲ್ದಾರ್ ಮಹೇಶ್ ಭಗವಂತ ಗಸ್ತೆ ಅವರನ್ನು ಧಾರವಾಡದ-ಹುಬ್ಬಳ್ಳಿ ನಗರ ತಹಶೀಲ್ದಾರ್ ಗ್ರೇಡ್-1 ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ಎಂ.ರೇಣುಕಾ ಅವರನ್ನು ಹಿರೇಕೆರೂರು ತಾಲ್ಲೂಕು ತಹಶೀಲ್ದಾರ್, ಕೆ.ರಾಘವೇಂದ್ರರಾವ್ ಅವರನ್ನು ಶಿರಹಟ್ಟಿ ತಾಲ್ಲೂಕು ತಹಶೀಲ್ದಾರ್ ಗ್ರೇಡ್-1 ಹುದ್ದೆ, ಡಾ.ಚಿಕ್ಕಪ್ಪ ನಾಯಕ ಅವರನ್ನು ಅಂಕೋಲಾ ತಾಲ್ಲೂಕಿನ ತಹಶೀಲ್ದಾರ್ ಗ್ರೇಡ್-1 ಹುದ್ದೆಗೆ ವರ್ಗಾಯಿಸಲಾಗಿದೆ.

ಎಸ್‌ಬಿ ಕೊಡಲಗಿ ಅವರನ್ನು ಪುತ್ತೂರು ತಾಲ್ಲೂಕು ತಹಶೀಲ್ದಾರ್ ಆಗಿ, ಶೀತಲ್ ಟಿಎಸ್ ಅವರನ್ನು ನೆಲಮಂಗಲ ತಾಲ್ಲೂಕು ತಹಶೀಲ್ದಾರ್ ಆಗಿ, ಜಿವಿ ಮೋಹನ್ ಕುಮಾರ್ ಅವರನ್ನು ತಿಪಟೂರು ತಾಲ್ಲೂಕು ತಹಶೀಲ್ದಾರ್ ಆಗಿ ವರ್ಗಾವಣೆ ಮಾಡಲಾಗಿದೆ.

ಪೊಲೀಸ್ ಇನ್ಸ್ಪೆಕ್ಟರ್‌ಗಳ ವರ್ಗಾವಣೆ: ಇತ್ತೀಚೆಗಷ್ಟೇ ರಾಜ್ಯ ಸರ್ಕಾರವು 41 ಪೊಲೀಸ್ ಇನ್ಸ್ಪೆಕ್ಟರ್ (ಸಿವಿಲ್‌)ಗಳ ದಿಢೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು.

ಪೊಲೀಸ್ ಸಿಬ್ಬಂದಿ ಮಂಡಳಿಯ ಸಭೆಯ ನಿರ್ಣಯದಂತೆ ಈ ಕೆಳಕಂಡ ಪೊಲೀಸ್ ಇನ್ಸ್‌ಪೆಕ್ಟರ್ (ಸಿವಿಲ್)ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅವರುಗಳ ಹೆಸರಿನ ಮುಂದೆ ಸೂಚಿಸಿರುವ ಸ್ಥಳಗಳಿಗೆ ವರ್ಗಾವಣೆ ಮಾಡಿ ಆದೇಶಿಸಲಾಗಿತ್ತು.

ಯಾರು ಎಲ್ಲಿಗೆ ವರ್ಗಾವಣೆ?

1. ವಿಕಾಸ್‌ ಎಸ್ - ಕನಕಪುರ ವೃತ್ತ, ರಾಮನಗರ ಜಿಲ್ಲೆ
2. ವಿಕ್ಟರ್ ಸೈಮನ್‌ - ಹೆಬ್ಬಗೋಡಿ ಪೊಲೀಸ್‌ ಠಾಣೆ, ಬೆಂಗಳೂರು ಜಿಲ್ಲೆ.
3. ಬಾಲಕೃಷ್ಣ ಆರ್ - ಶೇಷಾದ್ರಿಪುರಂ ಪೊಲೀಸ್‌ ಠಾಣೆ, ಬೆಂಗಳೂರು ನಗರ
4. ಮಂಜು ಕೆ.ಎಂ - ಹಲಸೂರು ಗೇಟ್ ಪೊಲೀಸ್ ಠಾಣೆ, ಬೆಂಗಳೂರು ನಗರ
5. ಹರೀಶ್ ವಿ - ಜೆ.ಪಿ.ನಗರ ಪೊಲೀಸ್‌ ಠಾಣೆ, ಬೆಂಗಳೂರು ನಗರ
6. ಶಿವಕುಮಾರ್ ಟಿ.ಸಿ - ಸಿ.ಸಿ.ಬಿ, ಬೆಂಗಳೂರು ನಗರ
7. ದಯಾನಂದ ಎಂ.ಜೆ - ಸಿ.ಸಿ.ಬಿ, ಬೆಂಗಳೂರು, ನಗರ
8. ಹರೀಶ್ ಎಂ.ಆರ್ - ಸಿ.ಸಿ.ಬಿ. ಬೆಂಗಳೂರು ನಗರ
9. ರಾಜೇಶ್ ಆರ್ - ಮಹಿಳಾ ಪೊಲಸ್ ಠಾಣೆ, ಉತ್ತರ ವಿಭಾಗ, ಬೆಂಗಳೂರು ನಗರ
10. ದೊಡ್ಡಪ್ಪ ಜೆ - ಬಿಎಂಟಿಎಫ್, ಬೆಂಗಳೂರು
11. ಸತೀಶ್ ಸಿ - ಬೆಸ್ಕಾಂ ಜಾಗೃತ ದಳ, ಇಂದಿರಾನಗರ, ಬೆಂಗಳೂರು
12. ಕುಮಾರ್ ಎ.ಪಿ - ಬಿ.ಡಿ.ಎ., ಬೆಂಗಳೂರು
13. ನಂಜುಂಡಸ್ವಾಮಿ ಎಂ - ಬಸವನಗರ ಪೊಲೀಸ್‌ ಠಾಣೆ, ದಾವಣಗೆರೆ ಜಿಲ್ಲೆ
14. ಪುಲ್ಲಯ್ಯ - ಸಾಗರ ಟೌನ್ ಪೊಲೀಸ್‌ ಠಾಣೆ, ಶಿವಮೊಗ್ಗ ಜಿಲ್ಲೆ
15. ರವೀಶ ಕೆ.ಎನ್‌ - ಚನ್ನಗಿರಿ ಪೊಲೀಸ್ ಠಾಣೆ, ದಾವಣಗೆರೆ ಜಿಲ್ಲೆ
16. ಬ್ರಿಜೇಶ್ ಮ್ಯಾಥ್ಯೂ - ಚನ್ನಗಿರಿ ಪೊಲೀಸ್ ಠಾಣೆ, ದಾವಣಗೆರೆ ಜಿಲ್ಲೆಗೆ ಆದ ವರ್ಗಾವಣೆ ಆದೇಶವನ್ನು ರದ್ದುಪಡಿಸಿ ಸಿ.ಐ.ಡಿ ಘಟಕದಲ್ಲೇ ಮುಂದುವರೆಸಿದೆ.
17. ಅಭಯ್‌ ಪ್ರಕಾಶ್ ಸೋಮನಾಳ್ - ಚಿಕ್ಕಮಗಳೂರು ಟೌನ್ ಪೊಲೀಸ್ ಠಾಣೆ, ಚಿಕ್ಕಮಗಳೂರು ಜಿಲ್ಲೆ
18. ಸೋಮೇಗೌಡ ಪಿ.ಪಿ - ಆಲ್ದೂರು ವೃತ್ತ, ಚಿಕ್ಕಮಗಳೂರು ಜಿಲ್ಲೆ
19. ಸಿದ್ದರಾಮೇಶ್ವರ ಎಸ್ - ಹೊನ್ನಾವರ ಪೊಲೀಸ್ ಠಾಣೆ, ಉತ್ತರ ಕನ್ನಡ ಜಿಲ್ಲೆ
20. ಸೋಮಲಿಂಗ ರೆಡ್ಡಿ ಡಿ ಕಿರೆದಳ್ಳಿ - ಬ್ರಹ್ಮಪುರ ಪೊಲೀಸ್ ಠಾಣೆ, ಕಲಬುರಗಿ ನಗರ
21. ಲಾಲೆಸಾಬ್ ಹೈದರ್‌ಸಾಬ್ ಗೌಂಡಿ - ಖಾನಾಪುರ ಪೊಲೀಸ್ ಠಾಣೆ, ಬೆಳಗಾವಿ ಜಿಲ್ಲೆ
22. ಸೋಮ್ಲಾನಾಯ್ಕ್ - ಚಿತವಾಡಗಿ ಪೊಲೀಸ್ ಠಾಣೆ, ವಿಜಯನಗರ ಜಿಲ್ಲೆ
23. ಅಜೇಜ್ ಕಲಾದಗಿ - ಪೊಲೀಸ್ ತರಬೇತಿ ಶಾಲೆ, ಖಾನಾಪುರ
24. ಗೋಪಾಲ್ ಆರ್ - ಹೆಸ್ಕಾಂ ಜಾಗೃತ ದಳ, ಕಾರವಾರ
25. ವೆಂಕಟೇಶ್ ಕೆ ಯಾಡಹಳ್ಳಿ - ಕರ್ನಾಟಕ ಲೋಕಾಯುಕ್ತ
26. ರಮೇಶ್ ವೈ ಕಾಂಬ್ಳೆ - ಕರ್ನಾಟಕ ಲೋಕಾಯುಕ್ತ
27. ಇಮ್ರಾನ್ ಬೇಗ್ - ತೀರ್ಥಹಳ್ಳಿ ಪೊಲೀಸ್ ಠಾಣೆ, ಶಿವಮೊಗ್ಗ ಜಿಲ್ಲೆ
28. ರಾಷ್ಟ್ರಪತಿ ಹೆಚ್‌.ಎಸ್‌ - ಜನಗಳೂರು ಪೊಲೀಸ್‌ ಠಾಣೆ, ದಾವಣಗೆರೆ ಜಿಲ್ಲೆ
29. ರಫೀಕ್‌ ಕೆ.ಎಂ - ಸಿ.ಸಿ.ಬಿ., ಮಂಗಳೂರು ನಗರ
30. ಕಾಶೀನಾಥ ಜಿ - ಹರಿಹರ ಟೌನ್‌ ಪೊಲೀಸ್ ಠಾಣೆ, ದಾವಣಗೆರೆ ಜಿಲ್ಲೆ
31. ಚಂದ್ರಪ್ಪ ಚಿಕ್ಕೋಡಿ - ಮಹಿಳಾ ಪೊಲೀಸ್ ಠಾಣೆ, ಬಾಗಲಕೋಟೆ ಜಿಲ್ಲೆ
32. ರವೀಂದ್ರ ನಾಯ್ಕೋಡಿ - ಹೆಸ್ಕಾಂ ಜಾಗೃತ ದಳ, ಬಾಗಲಕೋಟೆ
33. ಕೃಷ್ಣ ನಾಯ್ಕ್ ಎ - ರೈಲ್ವೇ ಪೊಲೀಸ್‌ ಠಾಣೆ, ದಾವಣಗೆರೆ
34. ರವೀಂದ್ರನಾಥ್ - ಐ.ಜಿ.ಪಿ ಕಛೇರಿ, ಈಶಾನ್ಯ ವಲಯ, ಕಲಬುರಗಿ
35. ರಾಮ್‌ಕುಮಾರ್ ಸುಣಗಾರ್ ಎಂ - ಚೆಸ್ಕಾಂ ಜಾಗೃತ ದಳ, ಮಡಿಕೇರಿ
36. ಪ್ರಕಾಶ್ ಆರ್ - ಐ.ಜಿ.ಪಿ ಕಛೇರಿ, ಕೇಂದ್ರ ವಲಯ, ಬೆಂಗಳೂರು
37. ವೆಂಕಟೇಶ್ ಎಸ್ ಮುರನಾಳ್ - ಹೆಸ್ಕಾಂ ಜಾಗೃತ ದಳ, ವಿಜಯಪುರ
38. ಮೆಲ್ವಿನ್ ಫ್ರಾನ್ಸಿಸ್‌ - ಸಿ.ಸಿ.ಬಿ ಬೆಂಗಳೂರು ನಗರಕ್ಕೆ ಆದ ವರ್ಗಾವಣೆ ಆದೇಶವನ್ನು ರದ್ದುಪಡಿಸಿ ಬೆಸ್ಕಾಂ ಜಾಗೃತ ದಳ, ಹೊಸಕೋಟೆಯಲ್ಲಿಯೇ ಮುಂದುವರೆಸಿದೆ.
39. ವೀಣಾ ಎಸ್‌.ಎಂ - ಚೆಸ್ಕಾಂ ಜಾಗೃತ ದಳ, ಹಾಸನ
40. ರಾಘವೇಂದ್ರ ಎಂ ಬೈಂದೂರು - ಕಾವೂರು ಪೊಲೀಸ್‌ ಠಾಣೆ, ಮಂಗಳೂರು ನಗರದಲ್ಲಿಯೇ ಮುಂದುವರೆಸಿದೆ.
41. ಪ್ರಶಾಂತ್ ಎಂ - ಕರ್ನಾಟಕ ಲೋಕಾಯುಕ್ತ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+