ಕರ್ನಾಟಕದಲ್ಲಿ 317 ಸೋಂಕಿತ ಪ್ರಕರಣ ದಾಖಲಾದರೂ ಚಿಂತೆಯಿಲ್ಲ!
ಬೆಂಗಳೂರು, ಜೂನ್.16: ಕರ್ನಾಟಕದಲ್ಲಿ ಮಂಗಳವಾರ ಕೊರೊನಾ ವೈರಸ್ ಮಹಾಸ್ಫೋಟ ಸಂಭವಿಸಿದೆ. ಒಂದೇ ದಿನ ಬರೋಬ್ಬರಿ 317 ಮಂದಿಗೆ ಕೊವಿಡ್-19 ಮಹಾಮಾರಿ ಅಂಟಿಕೊಂಡಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 7530ಕ್ಕೆ ಏರಿಕೆಯಾಗಿದೆ.
ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ಬೆಂಗಳೂರಿನ ಮಂದಿಗೆ ಬಿಗ್ ಶಾಕ್ ನೀಡಿದೆ. ಬೆಂಗಳೂರು ಮಹಾಮಾರಿಗೆ ಐವರು ಪ್ರಾಣ ಬಿಟ್ಟಿದ್ದು, 47 ಜನರಿಗೆ ಸೋಂಕು ಪತ್ತೆಯಾಗಿದೆ.
Breaking: ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ಗೆ ಕೊರೊನಾ ಇಲ್ಲ
ಕೊರೊನಾ ವೈರಸ್ ಸೋಂಕಿತರಿಗಿಂತಲೂ ಸೋಂಕಿನಿಂದ ಗುಣಮುಖರಾದವರ ಸಂಖ್ಯೆಯೇ ಹೆಚ್ಚಾಗಿರುವುದ ಕೊಂಚ ಸಮಾಧಾನ ತಂದಿದೆ. ಮಂಗಳವಾರ 317 ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, 322 ಸೋಂಕಿತರು ಗುಣಮುಖರಾಗಿದ್ದಾರೆ.
ಕರ್ನಾಟಕದಲ್ಲಿ ಜಿಲ್ಲಾವಾರು ಸೋಂಕಿತ ಪ್ರಕರಣ:
ಕರ್ನಾಟಕದಲ್ಲಿ ಒಟ್ಟು 317 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ದಕ್ಷಿಣ ಕನ್ನಡ -79, ಕಲಬುರಗಿ - 63, ಬಳ್ಳಾರಿ - 53, ಬೆಂಗಳೂರು ನಗರ - 47, ಧಾರವಾಡ - 8, ಉಡುಪಿ - 7, ಶಿವಮೊಗ್ಗ - 7, ಯಾದಗಿರಿ - 6, ರಾಯಚೂರು -6, ಉತ್ತರ ಕನ್ನಡ - 6, ಹಾಸನ - 5, ವಿಜಯಪುರ - 4, ಮೈಸೂರು - 4, ರಾಮನಗರ - 4, ಚಿಕ್ಕಮಗಳೂರು - 4, ಕೊಪ್ಪಳ - 4, ಬೆಳಗಾವಿ - 3, ಬೀದರ್ - 2, ತುಮಕೂರು - 1 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.
ಮಂಗಳವಾರ ಜಿಲ್ಲಾವಾರು ಗುಣಮುಖ ಪ್ರಕರಣಗಳು:
ಕರ್ನಾಟಕದಲ್ಲಿ ಒಟ್ಟು 317 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದರೆ ಒಂದೇ ದಿನ ಬರೋಬ್ಬರಿ 322 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಡುಪಿ -81, ಯಾದಗಿರಿ -50, ರಾಯಚೂರು -46, ಬೆಂಗಳೂರು ನಗರ -32, ಮಂಡ್ಯ -21, ವಿಜಯಪುರ -18, ಕಲಬುರಗಿ - 15, ದಕ್ಷಿಣ ಕನ್ನಡ - 11, ಮೈಸೂರು - 10, ದಾವಣಗೆರೆ - 10, ಬೆಳಗಾವಿ - 9, ಚಿಕ್ಕಬಳ್ಳಾಪುರ -8, ತುಮಕೂರು - 3, ಬಾಗಲಕೋಟೆ - 2, ಹಾಸನ - 2, ಗದಗ - 2, ಬೆಂಗಳೂರು ಗ್ರಾಮಾಂತರ - 1, ಬೀದರ್ -1 ಸೋಂಕಿತರು ಗುಣಮುಖರಾಗಿದ್ದಾರೆ.