ಬಸ್ಸಿನಲ್ಲಿ 1.30 ಕೋಟಿ ರು ಸಾಗಿಸುತ್ತಿದ್ದ ಮೂವರು ಮಹಿಳೆಯರ ಬಂಧನ
ಕಾರವಾರ, ಏಪ್ರಿಲ್ 23 : ಬಸ್ಸಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1 ಕೋಟಿ 30 ಲಕ್ಷ ರು. ಮೌಲ್ಯದ ನಿಷೇಧಿತ 500 ಮತ್ತು ಒಂದು ಸಾವಿರ ಮುಖಬೆಲೆಯ ನೋಟುಗಳನ್ನು ಹಣ ಸಾಗಿಸುತ್ತಿದ್ದ ಮೂವರು ಮಹಿಳೆಯರನ್ನು ಕಾರವಾರದ ಮಾಜಾಳಿ ಚೆಕ್ ಪೋಸ್ಟ್ ಬಳಿ ಪೊಲೀಸರು ಬಂಧಿಸಿದ್ದಾರೆ.
ಮುಂಡಗೋಡು ಮೂಲದ ಜಯಶ್ರೀ ಹನುಮಂತಗೌಳಿ, ಭವಾನಿ ಹಾಗೂ ಮೀನಾಕ್ಷಿ ಅಕ್ರಮವಾಗಿ ಹಣ ಸಾಗಿಸುತ್ತಿದ್ದವರು. ಗೋವಾದ ಮಡಗಾಂನಿಂದ ಮುಂಡಗೋಡಿಗೆ ಹಣ ಸಾಗಿಸುತ್ತಿರುವಾಗ ಕಾರವಾರದ ಮಾಜಾಳಿ ಚೆಕ್ ಪೋಸ್ಟ್ ಬಳಿ ಚಿತ್ತಾಕುಲ ಪೊಲೀಸರು ಹಣ ಜಪ್ತಿ ಮಾಡಿ ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ.

ಮುಂಡಗೋಡು ಪಟ್ಟಣದ ವಾಣಿ ಪ್ರಭು ಎಂಬ ವೈದ್ಯೆಗೆ ಸೇರಿದ ಹಣವಿದು ಎಂದು ಮಹಿಳೆಯರು ಪೊಲೀಸರಿಗೆ ತಿಳಿಸಿದ್ದಾರೆ. ಈ ಸಂಬಂಧ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications