ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಬೆಂಗಳೂರು, ಏಪ್ರಿಲ್ 16 : ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಏಪ್ರಿಲ್ 15ರಂದು 2019ರ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿತ್ತು.

ಮಂಗಳವಾರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟಗೊಂಡಿದೆ. ಜೂನ್ 7 ರಿಂದ 18ರ ತನಕ ಪೂರಕ ಪರೀಕ್ಷೆಗಳು ನಡೆಯಲಿವೆ. ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆ ಬರೆಯಬಹುದಾಗಿದೆ.

ಪೂರಕ ಪರೀಕ್ಷೆಯ ಒಂದು ವಿಷಯಕ್ಕೆ 140 ರೂ., 2 ವಿಷಯಕ್ಕೆ 270 ರೂ., ಮೂರು ಅಥವ ಹೆಚ್ಚಿನ ವಿಷಯಗಳಿಗೆ 400 ರೂ. ಶುಲ್ಕಗಳನ್ನು ನಿಗದಿ ಮಾಡಲಾಗಿದೆ.

puc

ಪೂರಕ ಪರೀಕ್ಷೆ ವೇಳಾಪಟ್ಟಿ

* ಜೂನ್ 7 : ಸಮಾಜ ಶಾಸ್ತ್ರ, ಲೆಕ್ಕಶಾಸ್ತ್ರ, ಗಣಿತ
* ಜೂನ್ 8 : ಇಂಗ್ಲಿಶ್ (ಬೆಳಗ್ಗೆ), ಮಾಹಿತಿ ತಂತ್ರಜ್ಞಾನ ರೀಟೇಲ್, ಆಟೋ ಮೊಬೈಲ್, ಹೆಲ್ತ್ ಕೇರ್ ಬ್ಯೂಟಿ ಮತ್ತು ವೆಲ್‌ನೆಸ್ (ಮಧ್ಯಾಹ್ಮ)
* ಜೂನ್ 10 : ಅರ್ಥಶಾಸ್ತ್ರ, ಬೌತಶಾಸ್ತ್ರ
* ಜೂನ್ 11 : ಹಿಂದಿ (ಬೆಳಗ್ಗೆ), ತಮಿಳು, ತೆಲಗು, ಮಲಯಾಳಂ, ಮರಾಠಿ, ಅರೆಕ್ಕ್, ಫ್ರೆಂಚ್ (ಮಧ್ಯಾಹ್ನ)
* ಜೂನ್ 12 : ಕನ್ನಡ ( ಬೆಳಗ್ಗೆ), ಭೂಗೋಳಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಭೂಗರ್ಭ ಶಾಸ್ತ್ರ (ಮಧ್ಯಾಹ್ನ)
* ಜೂನ್ 13 : ರಾಜ್ಯಶಾಸ್ತ್ರ
* ಜೂನ್ 14 : ಇತಿಹಾಸ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ
* ಜೂನ್ 15 : ವ್ಯವಹಾರ ಅಧ್ಯಯನ, ರಸಾಯನ ಶಾಸ್ತ್ರ, ಶಿಕ್ಷಣ
* ಜೂನ್ 17 : ಉರ್ದು, ಸಂಸ್ಕೃತ (ಬೆಳಗ್ಗೆ), ಐಚ್ಚಿಕ ಕನ್ನಡ (ಮಧ್ಯಾಹ್ನ)
* ಜೂನ್ 18 : ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ (ಬೆಳಗ್ಗೆ), ತರ್ಕಶಾಸ್ತ್ರ, ಮನಃಶಾಸ್ತ್ರ, ಗೃಹ ವಿಜ್ಞಾನ, ಬೇಸಿಕ್ ಮ್ಯಾಥ್ಸ್ (ಮಧ್ಯಾಹ್ನ).

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+