ಕರ್ನಾಟಕದಲ್ಲಿ ಹೊಸದಾಗಿ 2984 ಕೊರೊನಾ ಸೋಂಕಿತರು ಪತ್ತೆ
ಬೆಂಗಳೂರು, ಜುಲೈ 02: ಕರ್ನಾಟಕದಲ್ಲಿ ಕಳೆದ 24 ಗಂಟೆಯಲ್ಲಿ 2984 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
ಒಂದೇ ದಿನ 14337 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ, ಇದುವರೆಗೆ 2760881 ಮಂದಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ. 53871 ಸಕ್ರಿಯ ಪ್ರಕರಣಗಳಿವೆ, 88 ಮಂದಿ ಮೃತಪಟ್ಟಿದ್ದಾರೆ. ಇದುವರೆಗೆ 35222 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ, ಒಟ್ಟು 2849997 ಪ್ರಕರಣಗಳಿವೆ.
ಬಾಗಲಕೋಟೆಯಲ್ಲಿ 12, ಬಳ್ಳಾರಿ 30, ಬೆಳಗಾವಿ 97, ಬೆಂಗಳೂರು ಗ್ರಾಮಾಂತರ 73, ಬೆಂಗಳೂರು ನಗರ 593, ಬೀದರ್ 4, ಚಾಮರಾಜನಗರ 43, ಚಿಕ್ಕಬಳ್ಳಾಪುರ 17, ಚಿಕ್ಕಮಗಳೂರು 107, ಚಿತ್ರದುರ್ಗ 31, ದಕ್ಷಿಣ ಕನ್ನಡ 302, ದಾವಣಗೆರೆ 63, ಧಾರವಾಡ 33, ಗದಗ 9, ಹಾಸನ 271, ಹಾವೇರಿ 6, ಕಲಬುರಗಿ 3, ಕೊಡಗು 170, ಕೋಲಾರ 87, ಕೊಪ್ಪಳ 18, ಮಂಡ್ಯ 109, ಮೈಸೂರು 457, ರಾಯಚೂರು 6, ರಾಮನಗರ 13, ಶಿವಮೊಗ್ಗ 145, ತುಮಕೂರು 131, ಉಡುಪಿ 91, ಉತ್ತರ ಕನ್ನಡ 53, ವಿಜಯಪುರ 8, ಯಾದಗಿರಿಯಲ್ಲಿ 02 ಪ್ರಕರಣಗಳು ಪತ್ತೆಯಾಗಿವೆ.

ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಕೋಲ್ಕತ್ತಾ, ಪುಣೆ, ಅಹ್ಮದಾಬಾದ್, ವಾರಾಣಸಿ, ಸೂರತ್ ಸೇರಿದಂತೆ 16 ಪ್ರಮುಖ ನಗರಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಿದ್ದು, ಪಳೆಯುಳಿಕೆ ಇಂಧನ ಆಧಾರಿತ ಮಾನವಜನ್ಯ ಚಟುವಟಿಕೆಗಳಿಂದಾಗಿ ಪಿಎಂ 2.5 ಎಮಿಷನ್ ಪ್ರಮಾಣವೂ ಹೆಚ್ಚಾಗಿದೆ ಎಂದು ಪ್ಯಾನ್ ಇಂಡಿಯಾ ಅಧ್ಯಯನ ವರದಿ ತಿಳಿಸಿದೆ.
ದೇಹದೊಳಗೆ ಪ್ರವೇಶಿಸುವ ಹಾಗೂ ಶ್ವಾಸಕೋಶದಲ್ಲಿ ಉರಿಯೂತ ಉಂಟುಮಾಡಬಲ್ಲ ಸೂಕ್ಷ್ಮ ಕಣಗಳಿಗೆ ಪಿಎಂ2.5 ಎಂದು ಹೇಳಲಾಗುತ್ತದೆ. ಇದರಿಂದಾಗಿ ಹೃದಯ, ಶ್ವಾಸಕೋಶ ಸಂಬಂಧಿತ ಸಮಸ್ಯೆಗಳು ಹೆಚ್ಚಾಗಲಿದ್ದು ರೋಗ ನಿರೋಧಕ ವ್ಯವಸ್ಥೆ ಕುಗ್ಗಲಿದೆ.











Click it and Unblock the Notifications