ಕರ್ನಾಟಕದಲ್ಲಿ ತಗ್ಗಿದ ಕೊರೊನಾ ಹಾವಳಿ: 2756 ಪ್ರಕರಣಗಳು ಪತ್ತೆ
ಬೆಂಗಳೂರು, ನವೆಂಬರ್ 03: ಕರ್ನಾಟಕದಲ್ಲಿ ಇಂದು 2756 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆ ಬೆಂಗಳೂರೊಂದರಲ್ಲೇ ಇಷ್ಟು ಪ್ರಕರಣಗಳು ಪತ್ತೆಯಾಗುತ್ತಿದ್ದವು. ಅವುಗಳಿಗೆ ಹೋಲಿಸಿದರೆ ಹೊಸ ಪ್ರಕರಣಗಳ ಸಂಖ್ಯೆ ಸಾಕಷ್ಟು ಕಡಿಮೆಯಾಗಿದೆ.
ಒಂದೇ ದಿನ 26 ಮಂದಿ ಮೃತಪಟ್ಟಿದ್ದಾರೆ. ಆಸ್ಪತ್ರೆಯಿಂದ 7140 ಮಂದಿ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ 11247 ಮಂದಿ ಸಾವನ್ನಪ್ಪಿದ್ದಾರೆ, 780735 ಮಂದಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ.

40395 ಸಕ್ರಿಯ ಪ್ರಕರಣಗಳಿವೆ. ಒಟ್ಟು 832396 ಸೋಂಕಿತರಿದ್ದಾರೆ. 932 ಮಂದಿ ಐಸಿಯುನಲ್ಲಿದ್ದಾರೆ.
ಬಾಗಲಕೋಟೆ 22, ಬಳ್ಳಾರಿ 43, ಬೆಳಗಾವಿ 26, ಬೆಂಗಳೂರು ಗ್ರಾಮಾಂತರ 35, ಬೆಂಗಳೂರು ನಗರ 1479, ಬೀದರ್ 06, ಚಾಮರಾಜನಗರ 25, ಚಿಕ್ಕಬಳ್ಳಾಪುರ12, ಚಿಕ್ಕಮಗಳೂರು 55, ಚಿತ್ರದುರ್ಗ 35, ದಕ್ಷಿಣ ಕನ್ನಡ 123, ದಾವಣಗೆರೆ 39, ಧಾರವಾಡ 24, ಗದಗ05 , ಹಾಸನ 115, ಹಾವೇರಿ 09, ಕಲಬುರಗಿ 22, ಕೊಡಗು 09, ಕೋಲಾರ 85, ಕೊಪ್ಪಳ 15, ಮಂಡ್ಯ 89, ಮೈಸೂರು 125, ರಾಯಚೂರು 14, ರಾಮನಗರ 19, ಶಿವಮೊಗ್ಗ 94, ತುಮಕೂರು 108, ಉಡುಪಿ 20, ಉತ್ತರ ಕನ್ನಡ 46, ವಿಜಯಪುರ 50, ಯಾದಗಿರಿಯಲ್ಲಿ 07 ಪ್ರಕರಣಗಳು ಪತ್ತೆಯಾಗಿವೆ.












Click it and Unblock the Notifications