ಕರ್ನಾಟಕದಲ್ಲಿ ಒಂದೇ ದಿನ 2743 ಮಂದಿಗೆ ಕೊರೊನಾವೈರಸ್

ಬೆಂಗಳೂರು, ಜುಲೈ 07: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಸ್ಥಿರತೆ ಕಂಡು ಬಂದಿದೆ. ರಾಜ್ಯದಲ್ಲಿ ಶೇಕಡಾವಾರು ಹೊಸ ಸೋಂಕಿತ ಪ್ರಕರಣಗಳ ಪ್ರಮಾಣ ಶೇ.1.64ರಷ್ಟಿದ್ದು, ಸಾವಿನ ಸಂಖ್ಯೆ ಪ್ರಮಾಣ ಶೇ.2.73ರಷ್ಟಿದೆ.

ಕಳೆದ 24 ಗಂಟೆಗಳಲ್ಲಿ 2743 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 3081 ಸೋಂಕಿತರು ಗುಣಮುಖರಾಗಿದ್ದು, 75 ಮಂದಿ ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ.

ಬುಧವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 28,62,338ಕ್ಕೆ ಏರಿಕೆಯಾಗಿದೆ. ಈವರೆಗೂ 27,87,111 ಸೋಂಕಿತರು ಗುಣಮುಖರಾಗಿದ್ದು, 35601 ಸೋಂಕಿತರು ಮಹಾಮಾರಿಗೆ ಬಲಿಯಾಗಿದ್ದಾರೆ. ಇದರ ಹೊರತಾಗಿ 39,603 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

2743 New Coronavirus Cases Reported in Karnataka Today, State Tally Rise to 2862338

ಸಿಲಿಕಾನ್ ಸಿಟಿಯಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆ:

ಬೆಂಗಳೂರಿನಲ್ಲಿ ಕಳೆದ ಒಂದು ದಿನದಲ್ಲಿ 611 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 12,17,507ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 12 ಮಂದಿ ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆ 15,702ಕ್ಕೆ ಏರಿಕೆಯಾಗಿದೆ. ಇದರ ಹೊರತಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ 14,138 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾವಾರು ಕೊರೊನಾವೈರಸ್ ಸೋಂಕಿತರ ಸಂಖ್ಯೆ:

ರಾಜ್ಯದಲ್ಲಿ ಒಟ್ಟು 2743 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 2, ಬಳ್ಳಾರಿ 22, ಬೆಳಗಾವಿ 120, ಬೆಂಗಳೂರು ಗ್ರಾಮಾಂತರ 70, ಬೆಂಗಳೂರು 611, ಬೀದರ್ 6, ಚಾಮರಾಜನಗರ 47, ಚಿಕ್ಕಬಳ್ಳಾಪುರ 28, ಚಿಕ್ಕಮಗಳೂರು 151, ಚಿತ್ರದುರ್ಗ 29, ದಕ್ಷಿಣ ಕನ್ನಡ 304, ದಾವಣಗೆರೆ 46, ಧಾರವಾಡ 20, ಗದಗ 6, ಹಾಸನ 220, ಹಾವೇರಿ 15, ಕಲಬುರಗಿ 14, ಕೊಡಗು 148, ಕೋಲಾರ 73, ಕೊಪ್ಪಳ 15, ಮಂಡ್ಯ 95, ಮೈಸೂರು 248, ರಾಯಚೂರು 7, ರಾಮನಗರ 34, ಶಿವಮೊಗ್ಗ 149, ತುಮಕೂರು 112, ಉಡುಪಿ 101, ಉತ್ತರ ಕನ್ನಡ 40, ವಿಜಯಪುರ 3, ಯಾದಗಿರಿ 7 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+