Breaking; ಕರ್ನಾಟಕದಲ್ಲಿ 23 ಹೊಸ ಓಮಿಕ್ರಾನ್ ಪ್ರಕರಣ ಪತ್ತೆ

ಬೆಂಗಳೂರು, ಡಿಸೆಂಬರ್ 31; ಕರ್ನಾಟಕದಲ್ಲಿ 23 ಹೊಸ ಕೋವಿಡ್ ರೂಪಾಂತರಿ ಓಮಿಕ್ರಾನ್ ಪ್ರಕರಣ ಖಚಿತವಾಗಿದೆ. ಹೊಸ ಪ್ರಕರಣಗಳ ಪೈಕಿ 19 ಜನರು ಅಂತರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ.

ಶುಕ್ರವಾರ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಈ ಕುರಿತು ಟ್ವೀಟ್‌ನಲ್ಲಿ ಮಾಹಿತಿ ನೀಡಿದ್ದಾರೆ. ಕರ್ನಾಟಕದ ಒಟ್ಟು ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 66ಕ್ಕೆ ಏರಿಕೆಯಾಗಿದೆ.

ಕಳೆದ ಎರಡು ದಿನಗಳಿಂದ ಬೆಂಗಳೂರು ನಗರ ಮತ್ತು ರಾಜ್ಯದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿಯೇ 23 ಹೊಸ ಓಮಿಕ್ರಾನ್ ಪ್ರಕರಣ ಪತ್ತೆಯಾಗಿದೆ.

23 New Omicron Cases Reported in Karnataka today, Tally rise to 66

23 ಹೊಸ ಓಮಿಕ್ರಾನ್ ಪ್ರಕರಣಗಳು ಇಂದು ಕರ್ನಾಟಕದಲ್ಲಿ ಖಚಿತವಾಗಿವೆ. ಇವುಗಳಲ್ಲಿ 19 ಅಂತರಾಷ್ಟ್ರೀಯ ಪ್ರಯಾಣಿಕರು ಅಮೆರಿಕ, ಯುರೋಪ್, ಆಫ್ರಿಕಾದಿಂದ ಪ್ರಯಾಣಿಸಿದವರು ಎಂದು ಆರೋಗ್ಯ ಸಚಿವರು ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದಾರೆ.

ಸೋಂಕಿತರ ವಿವರ

* 15 ವರ್ಷದ ಬಾಲಕ. ಅಮೆರಿಕದಿಂದ ಬೆಂಗಳೂರಿಗೆ ಆಗಮನ
* 47 ವರ್ಷದ ಪುರುಷ. ಅಂತರಾಷ್ಟ್ರೀಯ ಪ್ರಯಾಣಿಕ
* 33 ವರ್ಷದ ಪುರುಷ. ಡೆನ್ಮಾರ್ಕ್‌ನಿಂದ ಆಗಮನ (ಮೂಲತಃ ಆಂಧ್ರಪ್ರದೇಶ)
* 25 ವರ್ಷದ ಯುವತಿ. ಅಮೆರಿಕದಿಂದ ಬೆಂಗಳೂರಿಗೆ ಆಗಮನ
* 10 ವರ್ಷದ ಬಾಲಕಿ. ದಕ್ಷಿಣ ಆಫ್ರಿಕಾದಿಂದ ಆಗಮನ (ಮೂಲತಃ ಮಂಗಳೂರು)
* 35 ವರ್ಷದ ಮಹಿಳೆ. ದಕ್ಷಿಣ ಆಫ್ರಿಕಾದಿಂದ ಆಗಮನ (ಮೂಲತಃ ಮಂಗಳೂರು)
* 29 ವರ್ಷದ ಪುರುಷ. ಅಮೆರಿಕದಿಂದ ಬೆಂಗಳೂರಿಗೆ ಆಗಮನ
* 19 ವರ್ಷದ ಪುರುಷ. ದುಬೈನಿಂದ ಬೆಂಗಳೂರಿಗೆ ಆಗಮನ
* 49 ವರ್ಷದ ಪುರುಷ. ಕಾಂಗೋದಿಂದ ಬೆಂಗಳೂರಿಗೆ ಆಗಮನ
* 12 ವರ್ಷದ ಬಾಲಕಿ. ಅಮೆರಿಕದಿಂದ ಬೆಂಗಳೂರಿಗೆ ಆಗಮನ
* 42 ವರ್ಷದ ಮಹಿಳೆ. ಯುಎಇಯಿಂದ ಆಗಮನ
* 45 ವರ್ಷದ ಪುರುಷ. ಅಮೆರಿಕದಿಂದ ಬೆಂಗಳೂರಿಗೆ ಆಗಮನ
* 2 ವರ್ಷಷ ಬಾಲಕ. ತಾಂಜೇನಿಯಾದಿಂದ ಆಗಮನ
* 33 ವರ್ಷದ ಮಹಿಳೆ. ತಾಂಜೇನಿಯಾದಿಂದ ಆಗಮನ
* 10 ವರ್ಷದ ಬಾಲಕಿ. ತಾಂಜೇನಿಯಾದಿಂದ ಆಗಮನ
* 18 ವರ್ಷದ ಬಾಲಕ. ಯುಕೆಯಿಂದ ಬೆಂಗಳೂರಿಗೆ ಆಗಮನ (ತಮಿಳುನಾಡು)
* 22 ವರ್ಷದ ಪುರುಷ. ದುಬೈನಿಂದ ಆಗಮನ
* 25 ವರ್ಷದ ಪುರುಷ. ಅಂತರಾಷ್ಟ್ರೀಯ ಪ್ರಯಾಣಿಕ
* 33 ವರ್ಷದ ಪುರುಷ. ಅಮೆರಿಕದಿಂದ ಬೆಂಗಳೂರಿಗೆ ಆಗಮನ
* 12 ವರ್ಷದ ಬಾಲಕಿ. ಸೋಂಕಿತರ ಜೊತೆ ನೈಜೀರಿಯಾದಿಂದ ಪ್ರಯಾಣ
* 45 ವರ್ಷದ ಮಹಿಳೆ. ಸೋಂಕಿತನ ಜೊತೆ ಪ್ರಯಾಣ
* 28 ವರ್ಷದ ಪುರುಷ. ಸೋಂಕಿತನ ಜೊತೆ ಪ್ರಯಾಣ
* 25 ವರ್ಷದ ಪುರುಷ. ಸೋಂಕಿತನ ಜೊತೆ ಪ್ರಯಾಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+