ಗುಡ್ ನ್ಯೂಸ್: ಕರ್ನಾಟಕದಲ್ಲಿ ಕೊರೊನಾ ಗುಣಮುಖರ ಸಂಖ್ಯೆ ಡಬಲ್!

ಬೆಂಗಳೂರು, ಮೇ 28: ಕರ್ನಾಟಕದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಸೋಂಕಿತ ಪ್ರಕರಣಗಳಲ್ಲಿ ಸ್ಥಿರತೆ ಕಂಡು ಬರುತ್ತಿದೆ. ಪ್ರತಿನಿತ್ಯ 20,00 ದಿಂದ 25,000 ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗುತ್ತಿವೆ. ರಾಜ್ಯದಲ್ಲಿ ಹೊಸ ಪ್ರಕರಣಗಳಿಗಿಂತ ಗುಣಮುಖರ ಸಂಖ್ಯೆ ಡಬಲ್ ಆಗಿದೆ.

ರಾಜ್ಯದಲ್ಲಿ ಒಂದೇ ದಿನ 22,823 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ 24 ಗಂಟೆಗಳ 401 ಮಂದಿ ಮಹಾಮಾರಿಗೆ ಬಲಿಯಾಗಿದ್ದು, ಇದೇ ಅವಧಿಯಲ್ಲಿ52,253 ಸೋಂಕಿತರು ಗುಣಮುಖರಾಗಿದ್ದಾರೆ.

ಶುಕ್ರವಾರದ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 25,46,821 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಈವರೆಗೂ 21,46,621 ಸೋಂಕಿತರು ಗುಣಮುಖರಾಗಿದ್ದು, 3,72,373 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

 22823 New Coronavirus Cases Reported in Karnataka Today, State Tally Rise to 2546821

ರಾಜ್ಯದ ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್?

ರಾಜ್ಯದಲ್ಲಿ ಒಟ್ಟು 22,823 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 252, ಬಳ್ಳಾರಿ 782, ಬೆಳಗಾವಿ 1319, ಬೆಂಗಳೂರು ಗ್ರಾಮಾಂತರ 514, ಬೆಂಗಳೂರು 5736, ಬೀದರ್ 64, ಚಾಮರಾಜನಗರ 318, ಚಿಕ್ಕಬಳ್ಳಾಪುರ 337, ಚಿಕ್ಕಮಗಳೂರು 559, ಚಿತ್ರದುರ್ಗ 489, ದಕ್ಷಿಣ ಕನ್ನಡ 799, ದಾವಣಗೆರೆ 522, ಧಾರವಾಡ 700, ಗದಗ 302, ಹಾಸನ 1170, ಹಾವೇರಿ 137, ಕಲಬುರಗಿ 91, ಕೊಡಗು 245, ಕೋಲಾರ 656, ಕೊಪ್ಪಳ 339, ಮಂಡ್ಯ 825, ಮೈಸೂರು 1677, ರಾಯಚೂರು 365, ರಾಮನಗರ 339, ಶಿವಮೊಗ್ಗ 1135, ತುಮಕೂರು 1326, ಉಡುಪಿ 766, ಉತ್ತರ ಕನ್ನಡ 692, ವಿಜಯಪುರ 183, ಯಾದಗಿರಿ 184 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.

Recommended Video

      China ಆರ್ಥಿಕತೆಯಲ್ಲಿ ಮೊದಲನೇ ಸ್ಥಾನ!! | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+