ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 2162 ಕೊರೊನಾ ಪ್ರಕರಣ ದಾಖಲು
ಬೆಂಗಳೂರು, ಜುಲೈ 10: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 2162 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.
ಈ ಅವಧಿಯಲ್ಲಿ 2879 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಒಂದು ದಿನದಲ್ಲಿ 48 ಮಂದಿ ಸಾವನ್ನಪ್ಪಿರುವುದಾಗಿ ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರಿನಲ್ಲಿ 452 ಪ್ರಕರಣಗಳು ದಾಖಲಾಗಿವೆ.
ಶನಿವಾರದ ಅಂಕಿ ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 2869320ಕ್ಕೆ ಏರಿಕೆಯಾಗಿದೆ. ಈವರೆಗೂ 2796377 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಒಟ್ಟಾರೆ 35779 ಮಂದಿ ಸಾವನ್ನಪ್ಪಿದ್ದು, ಸದ್ಯಕ್ಕೆ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 37141 ಆಗಿದೆ. ರಾಜ್ಯದಲ್ಲಿ ಒಟ್ಟು 145666 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ.

Recommended Video
ಜಿಲ್ಲಾವಾರು ಕೊರೊನಾವೈರಸ್ ಸೋಂಕಿತರ ಸಂಖ್ಯೆ: ರಾಜ್ಯದಲ್ಲಿ ಶನಿವಾರ ಒಟ್ಟು 2162 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಪೈಕಿ ಬಾಗಲಕೋಟೆ 1, ಬಳ್ಳಾರಿ 27, ಬೆಳಗಾವಿ 106, ಬೆಂಗಳೂರು ಗ್ರಾಮಾಂತರ 12, ಬೆಂಗಳೂರು 452, ಬೀದರ್ 4, ಚಾಮರಾಜನಗರ 37, ಚಿಕ್ಕಬಳ್ಳಾಪುರ 22, ಚಿಕ್ಕಮಗಳೂರು 109, ಚಿತ್ರದುರ್ಗ 34, ದಕ್ಷಿಣ ಕನ್ನಡ 218, ದಾವಣಗೆರೆ 36, ಧಾರವಾಡ 25, ಗದಗ 9, ಹಾಸನ 178, ಹಾವೇರಿ 9, ಕಲಬುರಗಿ 9, ಕೊಡಗು 108, ಕೋಲಾರ 73, ಕೊಪ್ಪಳ 10, ಮಂಡ್ಯ 63, ಮೈಸೂರು 211, ರಾಯಚೂರು 2, ರಾಮನಗರ 23, ಶಿವಮೊಗ್ಗ 110, ತುಮಕೂರು 98, ಉಡುಪಿ 113, ಉತ್ತರ ಕನ್ನಡ 56, ವಿಜಯಪುರ 1, ಯಾದಗಿರಿ 6 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.












Click it and Unblock the Notifications