ಗದಗ: ತೋಳಗಳ ದಾಳಿಗೆ 21 ಮಂದಿಗೆ ಗಾಯ, ಹಲವರ ಸ್ಥಿತಿ ಗಂಭೀರ
ಗದಗ, ಮೇ 14 : ಶನಿವಾರ ತಡರಾತ್ರಿ ತೋಳಗಳು ಗದಗ ಜಿಲ್ಲೆಯ ನಾಲ್ಕು ಗ್ರಾಮಗಳಿಗೆ ನುಗ್ಗಿ ಹಲವರ ಮೇಲೆ ದಾಳಿ ಮಾಡಿ ಗಾಯಗೊಳಿಸಿವೆ.
ಗದಗ ಹಾಗೂ ರೋಣ ತಾಲೂಕಿನ ಹುಯಿಲಗೋಳ, ಕುರುಡಗಿ, ಗುಜಮಾಗಡಿ, ಯರೇಬೇಲೆರಿ ಗ್ರಾಮಗಳಿಗೆ ಶನಿವಾರ ತಡರಾತ್ರಿ ತೋಳಗಳು ನುಗ್ಗಿದ್ದು, ಗ್ರಾಮದ ಜನರ ಮೇಲೆ ದಾಳಿ ನಡೆಸಿವೆ. ತೋಳಗಳ ದಾಳಿಯಲ್ಲಿ 21 ಜನರು ಗಾಯಗೊಂಡಿದ್ದು ಇವರಲ್ಲಿ ಓರ್ವ ಅಜ್ಜಿ ಸೇರಿ 6 ಜನರ ಸ್ಥಿತಿ ಗಂಭೀರವಾಗಿದೆ.

ಗದಗ ತಾಲೂಕಿನ ಹುಯಿಲಗೋಳದಲ್ಲಿ 3, ರೋಣ ತಾಲೂಕಿನ ಗುಜಮಾಗಡಿಯಲ್ಲಿ 9, ಯರೇಬೇಲೆರಿಯಲ್ಲಿ 8 ಹಾಗೂ ಕುರುಡಗಿಯಲ್ಲಿ 5 ಜನರ ಮೇಲೆ ತೋಳಗಳು ದಾಳಿ ನಡೆಸಿವೆ.
ಸದ್ಯ ಗಾಯಾಳು ಗದಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೋಳಗಳ ದಾಳಿಯಿಂದ ಭಯ ಭೀತರಾದ ಸ್ಥಳೀಯರು ತೋಳ ಹಿಡಿಯುವಂತೆ ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.












Click it and Unblock the Notifications