ದ್ವಿತೀಯ ಪಿಯುಸಿ ಪರೀಕ್ಷೆ ಕರಡು ವೇಳಾಪಟ್ಟಿ ಪ್ರಕಟ
ಬೆಂಗಳೂರು, ಅಕ್ಟೋಬರ್ 26 : ಪದವಿ ಪೂರ್ವ ಶಿಕ್ಷಣ ಇಲಾಖೆ 2016ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಕರಡು ವೇಳಾಪಟ್ಟಿಯನ್ನು ಪ್ರಕಟಿಸಿದೆ. ವೇಳಾಪಟ್ಟಿ ಬಗ್ಗೆ ಆಕ್ಷೇಪಣೆಗಳಿದ್ದರೆ ನವೆಂಬರ್ 20ರೊಳಗೆ ಸಲ್ಲಿಸಬಹುದಾಗಿದೆ. ಮಾರ್ಚ್ 10 ರಿಂದ 26 ತನಕ ಪರೀಕ್ಷೆಗಳುನಡೆಯಲಿವೆ.
ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಡಿ.ಎಸ್. ರಮೇಶ್ ಅವರ ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ. ಕರಡು ವೇಳಾಪಟ್ಟಿಯ ಪ್ರಕಾರ 2016ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಮಾರ್ಚ್ 10ರಿಂದ 26ರವರೆಗೆ ನಡೆಯಲಿದೆ. ಎಲ್ಲಾ ಪರೀಕ್ಷೆಗಳು ಬೆಳಗ್ಗೆ 9 ರಿಂದ 12.15ರ ತನಕ ನಡೆಯಲಿವೆ. [ಮನೆ ಕೆಲಸ ಮಾಡುವ ಶಾಲಿನಿ ಮೇರು ಸಾಧನೆಗಿಲ್ಲ ಸಾಟಿ]

ಆದರೆ, ಮಾರ್ಚ್ 17ರಂದು ನಡೆಯುವ ಪರೀಕ್ಷೆಗಳ ಪೈಕಿ ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತ ವಿಷಯಗಳ ಪರೀಕ್ಷೆಗಳು ಮಧ್ಯಾಹ್ನ 2ರಿಂದ 5.15ರವರೆಗೆ ನಡೆಯಲಿದೆ ಎಂದು ಕರಡು ವೇಳಾಪಟ್ಟಿಯಲ್ಲಿ ತಿಳಿಸಲಾಗಿದೆ. [ದ್ವಿತೀಯ ಪಿಯು ಫಲಿತಾಂಶ : ವಿದ್ಯಾರ್ಥಿಗಳ ಯಶಸ್ಸಿನ ಕಥೆ]
ಆಕ್ಷೇಪಣೆಗಳನ್ನು ಸಲ್ಲಿಸಬೇಕಾದ ವಿಳಾಸ : ಜಂಟಿ ನಿರ್ದೇಶಕರು (ಪರೀಕ್ಷೆ), ಪದವಿ ಪೂರ್ವ ಶಿಕ್ಷಣ ಇಲಾಖೆ, ಸಂಪಿಗೆ ರಸ್ತೆ, 18ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-560012. [ದ್ವಿತೀಯ ಪಿಯುಸಿ ಫಲಿತಾಂಶ 2015: ಹೈಲೈಟ್ಸ್]
ಪರೀಕ್ಷೆ ವೇಳಾಪಟ್ಟಿ
* ಮಾರ್ಚ್ 10 : ಇತಿಹಾಸ, ಗಣಕ ವಿಜ್ಞಾನ
* ಮಾರ್ಚ್ 11 : ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್
* ಮಾರ್ಚ್ 12 : ರಾಜ್ಯಶಾಸ್ತ್ರ, ಬೇಸಿಕ್ ಮ್ಯಾಥ್ಸ್
* ಮಾರ್ಚ್ 14 : ಅರ್ಥಶಾಸ್ತ್ರ, ಭೂಗರ್ಭಶಾಸ್ತ್ರ
* ಮಾರ್ಚ್ 15 : ಭೂಗೋಳ ವಿಜ್ಞಾನ, ಗಣಿತ
* ಮಾರ್ಚ್ 16 : ಸಮಾಜ ವಿಜ್ಞಾನ, ಲೆಕ್ಕಶಾಸ್ತ್ರ
* ಮಾರ್ಚ್ 17 : ಮನಶಾಸ್ತ್ರ, ಭೌತವಿಜ್ಞಾನ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ
* ಮಾರ್ಚ್ 18 : ಐಚ್ಛಿಕ ಕನ್ನಡ
* ಮಾರ್ಚ್ 19 : ತರ್ಕಶಾಸ್ತ್ರ, ಶಿಕ್ಷಣ
* ಮಾರ್ಚ್ 21 : ಇಂಗ್ಲಿಶ್
* ಮಾರ್ಚ್ 22 : ಮರಾಠಿ, ಉರ್ದು, ಸಂಸ್ಕೃತ
* ಮಾರ್ಚ್ 23 : ವ್ಯವಹಾರ ಅಧ್ಯಯನ, ರಸಾಯನ ವಿಜ್ಞಾನ
* ಮಾರ್ಚ್ 24 : ಹಿಂದಿ, ತೆಲುಗು
* ಮಾರ್ಚ್ 26 : ಕನ್ನಡ, ತಮಿಳು, ಮಲಯಾಳಂ, ಅರೇಬಿಕ್












Click it and Unblock the Notifications