ಕರ್ನಾಟಕ; 1630 ಹೊಸ ಕೋವಿಡ್ ಪ್ರಕರಣಗಳು ದಾಖಲು
ಬೆಂಗಳೂರು, ನವೆಂಬರ್ 25 : ಕರ್ನಾಟಕದಲ್ಲಿ 1,630 ಹೊಸ ಕೋವಿಡ್ 19 ಪ್ರಕರಣಗಳು ದಾಖಲಾಗಿವೆ. 1,333 ಜನರು ಗುಣಮುಖಗೊಂಡು ಡಿಸ್ಚಾರ್ಜ್ ಆಗಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬುಧವಾರದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ರಾಜ್ಯದಲ್ಲಿನ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 8,78,055ಕ್ಕೆ ಏರಿಕೆಯಾಗಿದೆ.
ಕರ್ನಾಟಕದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 24,890. ಇದರಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿಯೇ 18,360 ಸಕ್ರಿಯ ಪ್ರಕರಣಗಳು ಇವೆ. ಬುಧವಾರ ರಾಜ್ಯದಲ್ಲಿ 19 ಜನರು ಮೃತಪಟ್ಟಿದ್ದಾರೆ.

ರಾಜ್ಯದ ವಿವಿ ಆಸ್ಪತ್ರೆಗಳ ಐಸಿಯುನಲ್ಲಿ 405 ಜನರು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಬುಧವಾರ 1,333 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ಒಟ್ಟು ಗುಣಮುಖಗೊಂಡವರ ಸಂಖ್ಯೆ 8,41,432.
19,974 ಆಂಟಿಜೆನ್, 102480 ಆರ್‌ಟಿಪಿಸಿಆರ್ ಪರೀಕ್ಷೆಗಳನ್ನು ಸೇರಿಸಿ 1,22,454 ಮಾದರಿಗಳ ಕೋವಿಡ್ ಪರೀಕ್ಷೆ ನಡೆಸಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಇದುವರೆಗೂ 10570159 ಮಾದರಿಗಳ ಪರೀಕ್ಷೆಗಳನ್ನು ಮಾಡಲಾಗಿದೆ.
ಯಾವ ಜಿಲ್ಲೆ ಎಷ್ಟು? : ಬುಧವಾರ ಬೆಂಗಳೂರು ನಗರದಲ್ಲಿ 916 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ನಗರದಲ್ಲಿನ ಒಟ್ಟು ಪ್ರಕರಣಗಳು 3,66.233. ಒಟ್ಟು ಸಕ್ರಿಯ ಪ್ರಕರಣಗಳು 18,360. ಇಂದು 11 ಜನರು ಮೃತಪಟ್ಟಿದ್ದು, 602 ಜನರು ಗುಣಮುಖರಾಗಿದ್ದಾರೆ.
ಚಿತ್ರದುರ್ಗ 70, ದಕ್ಷಿಣ ಕನ್ನಡ 39, ದಾವಣಗೆರೆ 38, ಧಾರವಾಡ 24, ಮೈಸೂರು 61, ತುಮಕೂರು 44, ವಿಜಯಪುರ 19, ಬಳ್ಳಾರಿ 24, ಬೆಂಗಳೂರು ಗ್ರಾಮಾಂತರದಲ್ಲಿ 51 ಹೊಸ ಕೋವಿಡ್ ಪ್ರಕರಣಗಳು ಬುಧವಾರ ದಾಖಲಾಗಿವೆ.












Click it and Unblock the Notifications