ಹಣಕ್ಕಾಗಿ ಬೆದರಿಕೆ, ಸುಳ್ಳು ಸುದ್ದಿ: ವರ್ಷದಲ್ಲಿ ರಾಜ್ಯದ 16 ಪತ್ರಕರ್ತರ ಬಂಧನ
ಬೆಂಗಳೂರು, ಮೇ 11: ಹಣಕ್ಕಾಗಿ ಬೆದರಿಕೆ, ಸುಳ್ಳು ಸುದ್ದಿಗಳ ಪ್ರಸಾರ, ಪ್ರಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕದ 16 ಪತ್ರಕರ್ತರ ಮೇಲೆ ಪ್ರಕರಣ ದಾಖಲಾಗಿದೆ ಅದೂ ಕೇವಲ ಒಂದು ವರ್ಷದ ಅವಧಿಯಲ್ಲಿ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಅದೂ ಇತ್ತೀಚಿನ ಕೆಲವು ತಿಂಗಳುಗಳಲ್ಲಂತೂ ಈ ರೀತಿಯ ಪ್ರಕರಣಗಳು ಹೆಚ್ಚಾಗಿವೆ. ಕೆಲವು ದಿನಗಳ ಹಿಂದಷ್ಟೆ ಸುದ್ದಿ ಮಾಧ್ಯಮದ ನಿರೂಪಕ ಮತ್ತು ವ್ಯವಸ್ಥಾಪಕ ನಿರ್ದೇಶಕನಾಗಿದ್ದ ಪತ್ರಕರ್ತನೊಬ್ಬನನ್ನು ಶಾಸಕ ಅರವಿಂದ ಲಿಂಬಾವಳಿಗೆ ಬೆದರಿಕೆ ಹಾಕಿ ಐವತ್ತು ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ಬಂಧಿಸಲಾಗಿದೆ.
ಹೆಚ್ಚು ಸುದ್ದಿ ಮಾಡಿದ್ದೆಂದರೆ, ಕೆಲವು ದಿನಗಳ ಹಿಂದಷ್ಟೆ, ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಪ್ರತ್ಯೇಕ ಧರ್ಮ ವಿಚಾರವಾಗಿ ಸೋನಿಯಾ ಗಾಂಧಿ ಅವರಿಗೆ ಬರೆದಿದ್ದಾರೆ ಎಂದು ಸುಳ್ಳು ಪತ್ರವನ್ನು ಸೃಷ್ಠಿಸಿ ವೈರಲ್ ಮಾಡಿದ ಬಗ್ಗೆ ಸಹ ಪತ್ರಕರ್ತರೊಬ್ಬರನ್ನು ಬಂಧಿಸಲಾಗಿದೆ, ಅವರು ಬಿಜೆಪಿಯ ಸಮೀಪವರ್ತಿಯೂ ಆಗಿದ್ದರು.

ತಿಂಗಳ ಹಿಂದೆ ಬಿಜೆಪಿ ಶಾಸಕ ರಾಮದಾಸ್ ಅವರಿಗೆ ಬೆದರಿಕೆ ಹಾಕಿ ಹಣ ವಸೂಲಿಗೆ ಇಳಿದಿದ್ದ ಸ್ಥಳೀಯ ಪತ್ರಿಕೆಗಳ ಪರ್ತಕರ್ತರನ್ನು ಅವರೇ ಸ್ಟ್ರಿಂಗ್ ಆಪರೇಷನ್ ಮಾಡಿ, ವಿಡಿಯೋ ಸಮೇತ ಪೊಲೀಸರಿಗೆ ಹಿಡಿದು ಕೊಟ್ಟಿದ್ದರು.
ಪ್ರಖ್ಯಾತ ವೈದ್ಯರೊಬ್ಬರಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡಿ, ಮತ್ತೆ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ ಹೆಸರಾಂತ ಚಾನೆಲ್ ಒಂದರ ಪತ್ರಕರ್ತನ ಮೇಲೆ ಪ್ರಕರಣ ದಾಖಲಾಗಿ ಬಂಧನವಾಗಿತ್ತು, ಆತನನ್ನು ಟಿವಿಯಿಂದ ಆ ಸಂಸ್ಥೆಯ ಮುಖ್ಯಸ್ಥರು ಹೊರಹಾಕಿದರು.
ಇನ್ನು ವೆಬ್‌ಪೋರ್ಟ್‌ಲ್ ಒಂದರ ಸಂಸ್ಥಾಪಕನನ್ನು ಸುಳ್ಳು ಸುದ್ದಿ ಪ್ರಕಟಿಸಿದ್ದಕ್ಕೆಂದು ಈ ವರೆಗೆ ಎರಡು ಬಾರಿ ಪೊಲೀಸರು ಬಂಧಿಸಿದ್ದಾರೆ. ಮೊದಲ ಬಾರಿ ಬೌದ್ಧ ಭಿಕ್ಷು ಒಬ್ಬರು ಮುಸ್ಲಿಂ ಯುಕವನಿಂದ ದಾಳಿಗೆ ಒಳಗಾಗಿದ್ದಾರೆ ಎಂದು ಸುಳ್ಳು ಸುದ್ದಿ ಪ್ರಕಟಿಸಿ ಬಂಧನಕ್ಕೊಳಗಾಗಿದ್ದರು, ಎರಡನೇ ಬಾರಿ ಎಂ.ಬಿ.ಪಾಟೀಲ್ ಅವರು ಬರೆದಿದ್ದಾರೆನ್ನಲಾಗಿದ್ದ ಸುಳ್ಳು ಪತ್ರವನ್ನು ಪ್ರಕಟಿಸಿ ಬಂಧನಕ್ಕೆ ಒಳಗಾಗಿದ್ದರು.
ನಟಿ ರಮ್ಯಾ ವಿರುದ್ಧ ಸುಳ್ಳು ಸುದ್ದಿ ಪ್ರಕಟಿಸಿದ್ದ ಚಾನೆಲ್ ಒಂದು ಇತ್ತೀಚೆಗಷ್ಟೆ 50 ಲಕ್ಷ ದಂಡ ಕಟ್ಟಿಕೊಟ್ಟಿದೆ. ರಮ್ಯಾ ಅವರು ಐಪಿಎಲ್ ಬೆಟ್ಟಿಂಗ್ ನಡೆಸುವ ಮಧ್ಯವರ್ತಿ ಎಂದು ಸುಳ್ಳು ಸುದ್ದಿಯನ್ನು ಈ ಕನ್ನಡದ ಚಾನೆಲ್ ಪ್ರಸಾರ ಮಾಡಿತ್ತು.












Click it and Unblock the Notifications