ಕರ್ನಾಟಕದಲ್ಲಿ ಒಂದೇ ದಿನ 1,509 ಮಂದಿಗೆ ಕೊವಿಡ್-19
ಬೆಂಗಳೂರು, ನವೆಂಬರ್.23: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ತಗ್ಗಿದೆ. ಒಂದು ದಿನದಲ್ಲಿ 1509 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.
ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯೂ ಕಡಿಮೆಯಾಗಿದೆ. ಕಳೆದ 24 ಗಂಟೆಗಳಲ್ಲೇ 24 ಜನರು ಮಹಾಮಾರಿಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 11,678ಕ್ಕೆ ಏರಿಕೆಯಾಗಿದೆ. ಕೊವಿಡ್-19 ಸೋಂಕಿತ ಪ್ರಕರಣ ಸಂಬಂಧ ರಾಜ್ಯ ಆರೋಗ್ಯ ಮತ್ತು ಕುಟುಂಬ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ.
ಕೊರೊನಾವೈರಸ್ ಒಟ್ಟು 874555 ಸೋಂಕಿತ ಪ್ರಕರಣಗಳ ಪೈಕಿ 838150 ಸೋಂಕಿತರು ಈಗಾಗಲೇ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಂದು ದಿನದಲ್ಲೇ 1645 ಸೋಂಕಿತರು ಗುಣಮುಖರಾಗಿದ್ದು, ಉಳಿದಂತೆ ರಾಜ್ಯದಲ್ಲಿ 24708 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ತಿಳಿದು ಬಂದಿದೆ.

ಜಿಲ್ಲೆವಾರು ಕೊರೊನಾವೈರಸ್ ಕೇಸ್?:
ರಾಜ್ಯದಲ್ಲಿ ಒಟ್ಟು 1509 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 17, ಬಳ್ಳಾರಿ 34, ಬೆಳಗಾವಿ 16, ಬೆಂಗಳೂರು ಗ್ರಾಮಾಂತರ 34, ಬೆಂಗಳೂರು 725 ಬೀದರ್ 4, ಚಾಮರಾಜನಗರ 13, ಚಿಕ್ಕಬಳ್ಳಾಪುರ 19, ಚಿಕ್ಕಮಗಳೂರು 21, ಚಿತ್ರದುರ್ಗ 27, ದಕ್ಷಿಣ ಕನ್ನಡ 28, ದಾವಣಗೆರೆ 18, ಧಾರವಾಡ 12, ಗದಗ 21, ಹಾಸನ 39, ಹಾವೇರಿ 9, ಕಲಬುರಗಿ 56, ಕೊಡಗು 6, ಕೋಲಾರ 35, ಕೊಪ್ಪಳ 6, ಮಂಡ್ಯ 58, ಮೈಸೂರು 104, ರಾಯಚೂರು 8, ರಾಮನಗರ 10, ಶಿವಮೊಗ್ಗ 20, ತುಮಕೂರು 89, ಉಡುಪಿ 21, ಉತ್ತರ ಕನ್ನಡ 30, ವಿಜಯಪುರ 17, ಯಾದಗಿರಿ 12, ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.












Click it and Unblock the Notifications