ಕರ್ನಾಟಕ; 1280 ಹೊಸ ಪ್ರಕರಣಗಳು ದಾಖಲು
ಬೆಂಗಳೂರು, ಡಿಸೆಂಬರ್ 08; ಕರ್ನಾಟಕದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತೆ ಏರಿಯಾಗಿದೆ. 1,280 ಹೊಸ ಪ್ರಕರಣಗಳು ದಾಖಲಾಗಿದ್ದು, ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 8,95,284ಕ್ಕೆ ಏರಿಕೆಯಾಗಿದೆ.
ಆರೋಗ್ಯ ಇಲಾಖೆ ಮಂಗಳವಾರದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಇಂದು ಆಸ್ಪತ್ರೆಯಿಂದ 1060 ಜನರು ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿನ ಇದುವರೆಗೂ ಒಟ್ಟು ಗುಣಮುಖರಾದವರು 8,58,370 ಜನ.
ಮಂಗಳವಾರ ಮೃತಪಟ್ಟವರ ಸಂಖ್ಯೆ 13. ಇದುವರೆಗೂ 11,880 ಜನರು ರಾಜ್ಯದಲ್ಲಿ ಮೃತಪಟ್ಟಿದ್ದಾರೆ. 275 ಜನರು ರಾಜ್ಯದ ವಿವಿಧ ಆಸ್ಪತ್ರೆಗಳ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಸಾವನ್ನಪ್ಪುವವರ ಪ್ರಮಾಣ ಶೇ 1.01ರಷ್ಟಿದೆ.

ಇಂದು 18103 ಆಂಟಿಜೆನ್, 70595 ಆರ್‌ಟಿಪಿಸಿಆರ್ ಪರೀಕ್ಷೆಗಳನ್ನು ಮಾಡಲಾಗಿದೆ. ಇಂದು ಒಟ್ಟು 88696 ಮಾದರಿಗಳ ಪರೀಕ್ಷೆಗಳನ್ನು ಮಾಡಲಾಗಿದೆ. ಇದುವರೆಗೂ ರಾಜ್ಯದಲ್ಲಿ 11878413 ಮಾದರಿಗಳ ಪರೀಕ್ಷೆಗಳನ್ನು ಮಾಡಲಾಗಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು? : ಬೆಂಗಳೂರು ನಗರದಲ್ಲಿ ಮಂಗಳವಾರ 638 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 3,75,163ಕ್ಕೆ ಏರಿಕೆಯಾಗಿದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 19,468.
ಮಂಗಳವಾರ ಬಳ್ಳಾರಿ 22, ಚಿಕ್ಕಬಳ್ಳಾಪುರ 50, ಚಿಕ್ಕಮಗಳೂರು 46, ಚಿತ್ರದುರ್ಗ 52, ದಕ್ಷಿಣ ಕನ್ನಡ 29, ಹಾಸನ 49, ಕೋಲಾರ 32, ಮೈಸೂರು 65, ತುಮಕೂರು 46 ಹೊಸ ಪ್ರಕರಣಗಳು ದಾಖಲಾಗಿವೆ.
ವಿಜಯಪುರ 6, ರಾಮನಗರ 6, ಕೊಪ್ಪಳ 5, ಕೊಡಗು 5, ಹಾವೇರಿ 4, ಗದಗ 7, ಬೀದರ್ 3, ಬಾಗಲಕೋಟೆ 4 ಹೊಸ ಪ್ರಕರಣಗಳು ದಾಖಲಾಗಿವೆ.
ರಾಜ್ಯದಲ್ಲಿ ಚಿಕ್ಕಬಳ್ಳಾಪುರ 194, ಚಿಕ್ಕಮಗಳೂರು 229, ಚಿತ್ರದುರ್ಗ 248, ದಕ್ಷಿಣ ಕನ್ನಡ 408, ಹಾಸನ 398 ಸಕ್ರಿಯ ಪ್ರಕರಣಗಳಿವೆ.












Click it and Unblock the Notifications