ಹೊಸ ವರ್ಷದ ಆಚರಣೆ ವೇಳೆ ತುರ್ತು ಸ್ಪಂದನೆಗೆ 108 ವಿಶೇಷ ಆಂಬ್ಯುಲೆನ್ಸ್ ಸೇವೆ!
ಬೆಂಗಳೂರು, ಡಿ. 31: ನೂತನ ವರ್ಷ ಆಚರಣೆ ಹಿನ್ನೆಲೆಯಲ್ಲಿ ತುರ್ತು ಪ್ರತಿ ಸ್ಪಂದನೆಗಾಗಿ ಆರೋಗ್ಯ ಕವಚ 108 ನಿಂದ ವಿಶೇಷ ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ಹೊಸ ವರ್ಷದ ಆಚರಣೆ ವೇಳೆ ರಸ್ತೆ ಅಪಘಾತ ಸೇರಿದಂತೆ ಜೀವಹಾನಿ ತಡೆಯುವ ಉದ್ದೇಶದಿಂದ 108 ಆರೋಗ್ಯ ಕವಚ ಆಂಬ್ಯುಲೆನ್ಸ್ ವಿನೂತನ ಸೇವೆಯನ್ನು ಆರಂಭಿಸಲಾಗಿದೆ. ಕರ್ನಾಟಕ ರಾಜ್ಯದಾದ್ಯಂತ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಹೊಸ ವರ್ಷ ದಿನ ಸಾಮಾನ್ಯವಾಗಿ ಶೇ. 30 ರಿಂದ 35 ರಷ್ಟು ಅಪಘಾತ ಪ್ರಕರಣಗಳು ವರ್ಷದ ಆಚರಣೆ ದಿನವೇ ಸಂಭವಿಸಿವೆ. ಹೀಗಾಗಿ ಪ್ರಸಕ್ತ ಸಾಲಿನಲ್ಲಿ ಎಷ್ಟೇ ನಿರ್ಬಂಧ ವಿಧಿಸಿದರೂ ಜನ ಸಾಮಾನ್ಯರು ಹೊರಗೆ ಪ್ರಯಾಣ ಹೋಗುತ್ತಾರೆ. ಹೀಗಾಗಿ ಅಪಘಾತಕ್ಕೆ ಈಡಾಗುವವರ ಜೀವ ರಕ್ಷಿಸುವ ಉದ್ದೇಶದಿಂದ ಹೊಸ ವರ್ಷದ ಆಚರಣೆ ದಿನ ವಿನೂತನ ಆಂಬ್ಯುಲೆನ್ಸ್ ಸೇವೆ ಒದಗಿಸಲಾಗುತ್ತದೆ.
ಹೆಚ್ಚುವರಿ ಆಂಬ್ಯುಲೆನ್ಸ್ ನಿಯೋಜನೆ:
108 ಅಂಬುಲೆನ್ಸ್ ಸೇವೆಯು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯೊಂದಿಗೆ ನಿಕಟ ಸಹಕಾರವನ್ನು ಹೊಂದಿರುತ್ತದೆ. ಹೆಚ್ಚಿನ ತುರ್ತುಪರಿಸ್ಥಿತಿಯನ್ನು ನಿರೀಕ್ಷಿಸುವ ಪ್ರದೇಶಗಳಲ್ಲಿ ಹೆಚ್ಚುವರಿ ಅಂಬುಲೆನ್ಸ್ ನಿಯೋಜಿಸಲಾಗುವುದು. ಹೆಚ್ಚುವರಿ ಸೇವೆಗಾಗಿ ಆಂಬುಲೆನ್ಸ್ ಸಿಬ್ಬಂದಿಯ ವಾರದ ರಜೆಯನ್ನು ರದ್ದುಗೊಳಿಸಲಾಗಿದೆ. ಮುಂಜಗೃತವಾಗಿ ಎಲ್ಲಾ ಆಂಬ್ಯುಲೆನ್ಸ್‌ಗಳಿಗೆ ಇಂಧನ ತುಂಬಿಸಲಾಗಿದೆ. ಆಮ್ಲಜನಕ ಉಪಕರಣಗಳನ್ನು ಅಳವಡಿಸಲಾಗಿದೆ.

ಬೆಂಗಳೂರು ನಗರ ಜಿಲ್ಲೆಗೆ ಬರೋಬ್ಬರಿ 72 ಆಂಬ್ಯುಲೆನ್ಸ್ ಗಳನ್ನು ತಜ್ಞ ಸಿಬ್ಬದಿಯೊಂದಿಗೆ ನಿಯೋಜಿಸಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ 108 ಗೆ ಕರೆ ಮಾಡಿದರೆ ಸಾಕು ಆಂಬ್ಯುಲೆನ್ಸ್ ಸೇವೆ ಲಭ್ಯವಾಗಲಿದೆ. ಜೀವನ್ಮರಣದ ಗಾಯಗಳಿಂದ ನರಳುತ್ತಿರುವ ಗಾಯಳುಗಳನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ರವಾನಿಸಲಾಗುತ್ತದೆ.












Click it and Unblock the Notifications