108 Ambulance Service: 108 ಸೇವೆಗೆ 3 ತಿಂಗಳಲ್ಲಿ ಹೊಸ ರೂಪ!

ಬೆಂಗಳೂರು: ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಹಲವು ಬದಲಾವಣೆ ತರಲು ಮುಂದಾಗಿದೆ. ಆಡಳಿತ ಯಂತ್ರ ಚುರುಕುಗೊಳಸಿ, ಜನರ ಸೇವೆಗೆ ಮುಂದಾಗಿದೆ. ಈ ಹೊತ್ತಲ್ಲೇ ಆರೋಗ್ಯ ಇಲಾಖೆಯಲ್ಲೂ ಭಾರಿ ಬದಲಾವಣೆ ಬರಲಿದ್ದು, 108 ಆರೋಗ್ಯ ಸೇವೆಗೆ ಹೊಸ ರೂಪ ನೀಡುವ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಆರೋಗ್ಯ ಸೇವೆ ಸುಧಾರಣೆಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕ್ರಮಗಳನ್ನ ಕೈಗೊಳ್ಳಲು ಮುಂದಾಗಿದೆ. ಹೀಗಾಗಿ 108 ಆರೋಗ್ಯ ಸೇವೆಯನ್ನ ಬರುವ 3 ತಿಂಗಳ ಒಳಗಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ 108 ಸೇವೆ ಕುರಿತಂತೆ ಆರೋಗ್ಯ ವಿಧಾನಸೌಧದಲ್ಲಿ ಆರೋಗ್ಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವರು, ಸಮರ್ಪಕವಾಗಿ 108 ಸೇವೆ ಜನರಿಗೆ ದೊರಕುವಂತೆ ಮಾಡುವ ನಿಟ್ಟಿನಲ್ಲಿ ಇರುವ ಸಮಸ್ಯೆಗಳನ್ನ ಬಗೆಹರಿಸುವ ಕುರಿತಂತೆ ಚರ್ಚೆ ನಡೆಸಿದರು.

108 Ambulance service in Karnataka

ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ

ಹಾಗೇ ಈ ಸಭೆಗೂ ಮುನ್ನ ಇಎಂಆರ್‌ಐ ಗ್ರೀನ್ ಹೆಲ್ತ್ ಸರ್ವೀಸ್ ಸೆಂಟರ್‌ಗೆ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸರ್ವೀಸ್ ಸೆಂಟರ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಜೊತೆಗೆ ಚರ್ಚಿಸಿ ಸಮಸ್ಯೆ ಆಲಿಸಿದರು. ಅಲ್ಲದೆ ಕಾಲ್ ಸೆಂಟರ್ ತಂತ್ರಜ್ಞಾನ ಕುರಿತು ಮಾಹಿತಿ ಪಡೆದು ಪರಿಶೀಲನೆ ನಡೆಸಿದ ಸಚಿವರು, ಇದೇ ವೇಳೆ ತಂತ್ರಜ್ಞಾನದಲ್ಲಿ ಬದಲಾವಣೆ ತರುವಂತೆಯೂ ಸೂಚಿಸಿದರು. 108 ಸೇವೆ ಪಡೆಯಲು ಸಾರ್ವಜನಿಕರ ಕರೆಗಳಿಗೆ ಸೂಕ್ತ ಸ್ಪಂದನೆ ಏಕೆ ಸಿಗ್ತಿಲ್ಲ? ಎಂದು ಅಧಿಕಾರಿಗಳನ್ನ ಪ್ರಶ್ನಿಸಿದ ಸಚಿವ ಗುಂಡೂರಾವ್, ಶೀಘ್ರದಲ್ಲಿ ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಸಚಿವ ದಿನೇಶ್ ಗುಂಡೂರಾವ್ ಗರಂ!

ಇನ್ನು 2017 ರಿಂದ 108 ಆರೋಗ್ಯವಾಹಿನಿ ಹೊಸ ಟೆಂಡರ್ ಕರೆದಿಲ್ಲ. ಈ ಹಿಂದೆಯೇ ಗುತ್ತಿಗೆ ಪಡೆದವರು ತಮ್ಮ ಮನಸೋ ಇಚ್ಚೆ ಕಾರ್ಯನಿರ್ವಹಿಸುತ್ತಿರುವ ಬಗ್ಗೆಯು ಗರಂ ಆದ ಸಚಿವರು ಸಮರ್ಪಕವಾಗಿ 108 ಆರೋಗ್ಯ ವಾಹಿನಿ ಸೇವೆ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಹೆಚ್ಚು ಗಮನ ವಹಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮುಂಬರುವ ಮೂರು ತಿಂಗಳ ಒಳಗಾಗಿ ನನಗೆ ಉತ್ತಮ ಫಲಿತಾಂಶ ಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಜನರು 108 ಆರೋಗ್ಯ ಸೇವೆ ಪಡೆಯಲು ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾದರೆ ಸಹಿಸಲ್ಲ ಎಂದು ಎಚ್ಚರಿಕೆ ನೀಡಿದರು.

ಒಟ್ನಲ್ಲಿ ಆರೋಗ್ಯ ಇಲಾಖೆಯಲ್ಲೂ ಮೇಜರ್ ಸರ್ಜರಿಗೆ ಹೊಸ ಸರ್ಕಾರ ಮುಂದಾಗಿದೆ. ಈಗ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಹೇಳಿಕೆಯಿಂದ ಇದು ಸ್ಪಷ್ಟವಾಗಿದೆ ಎನ್ನಬಹುದು. ಹಾಗೇ ಜನ ಕೂಡ ಆರೋಗ್ಯ ಇಲಾಖೆಯಲ್ಲಿ ಸೂಕ್ತ ಮಾರ್ಪಾಡಿನ ಬಗ್ಗೆ ಆಗ್ರಹಿಸುತ್ತಿದ್ದರು. ಇದೀಗ ಹೊಸ ಸರ್ಕಾರ ಅದೇ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದೆ ಎನ್ನಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+