ಚಿಕ್ಕಮಗಳೂರು 104, ರಾಮನಗರದಲ್ಲಿ 76 ಕೋವಿಡ್ ಪಾಸಿಟಿವ್ ಪ್ರಕರಣ ದೃಢ

ಚಿಕ್ಕಮಗಳೂರು, ಆಗಸ್ಟ್ 14: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ 104 ಮಂದಿಗೆ ಕೊರೊನಾ ಸೋಂಕು ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 2033 ಕ್ಕೆ ಏರಿಕೆಯಾಗಿದೆ.

ಇಂದು ಚಿಕ್ಕಮಗಳೂರು 37, ತರೀಕೆರೆ 26, ಕಡೂರು 28, ಮೂಡಿಗೆರೆ 6, ಎನ್.ಆರ್ ಪುರ 6, ಕೊಪ್ಪದಲ್ಲಿ 1 ಕೇಸ್ ಪತ್ತೆಯಾಗಿದ್ದು, ಇಂದು 10 ಮಂದಿ ಕೊರೊನಾ ವೈರಸ್ ನಿಂದ ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಲ್ಲಿಯವರೆಗೆ 1314 ಜನ ಗುಣಮುಖರಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಲ್ಲಿಯವರೆಗೆ 38 ಜನ ಮೃತಪಟ್ಟಿದ್ದು, 681 ಸಕ್ರಿಯ ಪ್ರಕರಣಗಳಿವೆ.

ರಾಮನಗರ ಜಿಲ್ಲೆಯಲ್ಲಿ ಇಂದು 76 ಕೊರೊನಾ ಸೋಂಕು ಪತ್ತೆ

ರಾಮನಗರ ಜಿಲ್ಲೆಯಲ್ಲಿ ಇಂದು 76 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2050ಕ್ಕೆ ಏರಿಕೆಯಾಗಿದೆ.

104 New Coronavirus Infection Cases Reported In Chikkamagaluru District

ಚನ್ನಪಟ್ಟಣ ತಾಲ್ಲೂಕಿನಲ್ಲಿ 30 ಪ್ರಕರಣ, ಮಾಗಡಿ ತಾಲ್ಲೂಕಿನಲ್ಲಿ 4 ಪ್ರಕರಣ, ಕನಕಪುರ ತಾಲ್ಲೂಕಿನಲ್ಲಿ 20 ಪ್ರಕರಣ, ರಾಮನಗರ ತಾಲ್ಲೂಕಿನಲ್ಲಿ 22 ಪ್ರಕರಣ ವರದಿಯಾಗಿದ್ದು, ಇವರನ್ನು ಚಿಕಿತ್ಸೆಗಾಗಿ ಕೋವಿಡ್ ಆಸ್ಪತ್ರೆಗೆ ದಾಖಲಿಸಿದೆ.

ಇಂದು 63 ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಒಟ್ಟು 1394 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುತ್ತಾರೆ. 632 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಚನ್ನಪಟ್ಟಣ ತಾಲ್ಲೂಕಿನ 70 ವರ್ಷದ ಮಹಿಳೆ ಹಾಗೂ ರಾಮನಗರ ತಾಲ್ಲೂಕಿನ 56 ವರ್ಷದ ಮಹಿಳೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+