ಶತಕ ಬಾರಿಸಿದ ಕರ್ನಾಟಕದ ಹೆಮ್ಮೆಯ ಮೈಸೂರ್ ಸ್ಯಾಂಡಲ್ ಸೋಪ್

Subscribe to Oneindia Kannada

"ನಾವಾಡುವ ನುಡಿಯೇ ಕನ್ನಡ ನುಡಿ ಚಿನ್ನದ ನುಡಿ ಸಿರಿಗನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ ಅಂದದ ಗುಡಿ ಚೆಂದದ ಗುಡಿ
ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ ಚೆಂದದ ಗುಡಿ ಶ್ರೀಗಂಧದ ಗುಡಿ
ಆಹಹಾ ಆಹಹಾ ಆಹಹಾ..ಆಹಹಾ ಆಹಹಾ ಆಹಹಾ"

ಗಂಧದಗುಡಿ ಪೂರ್ಣ ಹಾಡು

ಈ ಹಾಡು ಕೇಳಿದಾಗಲೆಲ್ಲ ಪ್ರತಿಯೊಬ್ಬ ಕನ್ನಡಿಗನ ಮೈ ರೋಮಾಂಚನವಾಗುತ್ತದೆ...ಅಂತೆಯೇ ಶ್ರೀಗಂಧದ ಪರಿಮಳವನ್ನು ಜಗತ್ತಿಗೆ ಪಸರಿಸಿದ ಮೈಸೂರು ಸ್ಯಾಂಡಲ್ ಸೋಪ್ ಬಗ್ಗೆಯೂ ತಿಳಿದುಕೊಳ್ಳಬೇಕಾಗುತ್ತದೆ. ಕರ್ನಾಟಕ ಸೋಪ್ಸ್ ಅಂಡ್‌ ಡಿಟರ್ಜಂಟ್‌ (ಕೆಎಸ್‌ಡಿಎಲ್) ಮೈಸೂರು ಸ್ಯಾಂಡಲ್ ಗೆ ಈ ವರ್ಷ ಶತಮಾನದ ಸಂಭ್ರಮ. ನೂರು ವರ್ಷ ಪ್ರಾಯ ಕಂಡಿರುವ ನಮ್ಮ ರಾಜ್ಯದ ಹೆಮ್ಮೆಯ ಬಗ್ಗೆ ಎಷ್ಟು ತಿಳಿದುಕೊಂಡರೂ ಕಡಿಮೆಯೇ.[ಮೈಸೂರು ಯದುವಂಶ ಒಡೆಯರ್ ವಂಶಾವಳಿ]

1916 ರಲ್ಲಿ ಸಂಸ್ಥೆ ಸ್ಥಾಪನೆಯಾಯಿತು. ಇದೀಗ 2016 ರ ಮೇ ತಿಂಗಳಲ್ಲಿ ನೂರನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌, ದಿವಾನ್‌ ಸರ್‌ ಎಂ.ವಿಶ್ವೇಶ್ವರಯ್ಯ ಕಾರ್ಖಾನೆಗೆ ಚಾಲನೆ ನೀಡಿದ್ದರು.

ಶೇಕಡಾ ನೂರಕ್ಕೆ ನೂರು ನಿಸರ್ಗದ ವಸ್ತುಗಳಿಂದಲೇ ತಯಾರಾಗುವ ಮೈಸೂರು ಸ್ಯಾಂಡಲ್ ನಮ್ಮ ಹೆಮ್ಮೆ. ಮೈಸೂರು ಸ್ಯಾಂಡಲ್ ನಡೆದು ಬಂದ ದಾರಿ, ಇತಿಹಾಸ, ಬೆಳವಣಿಗೆ, ಶ್ರೇಷ್ಠತೆ ಎಲ್ಲದರ ಮೇಲೆ ಬೆಳಕು ಚೆಲ್ಲುವ ಚಿಕ್ಕ ಪ್ರಯತ್ನ ಇಲ್ಲಿದೆ.[ಚಿತ್ರಗಳು]

ಯೋಚನೆ ಬಂದಿದ್ದು ಹೇಗೆ?

ಯೋಚನೆ ಬಂದಿದ್ದು ಹೇಗೆ?

ಮೈಸೂರು ಮಹಾರಾಜರಿಗೆ ಯಾರೋ ಶ್ರೀಗಂಧದಿಂದ ತಯಾರು ಮಾಡಿದ್ದ ಶ್ರೀಗಂಧದ ಅಪರೂಪದ ಸೋಪ್ ಗಳನ್ನು ಕೊಡುಗೆಯಾಗಿ ನೀಡಿದ್ದರಂತೆ. ಇದಾಗಿ ಎರಡು ವರ್ಷಗಳ ನಂತರ ಸೋಪಿನ ಕಾರ್ಖಾನೆ ನಿರ್ಮಾಣದ ಆಲೋಚನೆ ಬಂತಿತು.

1918ಕ್ಕೆ ಮಾರುಕಟ್ಟೆಗೆ

1918ಕ್ಕೆ ಮಾರುಕಟ್ಟೆಗೆ

ಬೆಂಗಳೂರಿನಲ್ಲಿ ಕಂಪನಿ ಆರಂಭವಾಯಿತು. ಎಸ್ ಜಿ ಶಾಸ್ತ್ರಿ ಎಂಬುವರ ಮುಂದಾಳತ್ವದಲ್ಲಿ ಕಂಪನಿ ಆರಂಭ ಪಡೆದುಕೊಂಡು 1918ರಲ್ಲಿ ಪ್ರಥಮ ಸೋಪನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.

ಪಬ್ಲಿಕ್ ಸೆಕ್ಟರ್ ಗೆ

ಪಬ್ಲಿಕ್ ಸೆಕ್ಟರ್ ಗೆ

1980ರಲ್ಲಿ ಕಂಪನಿಯನ್ನು ಸಂಪೂರ್ಣವಾಗಿ ಸಾರ್ವಜನಿಕ ಸ್ವಾಮ್ಯದ ಕಂಪನಿಯನ್ನಾಗಿ ಮಾಡಲಾಯಿತು. 1980ರಲ್ಲಿ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜಂಟ್ ಲಿಮಿಟೆಡ್ ಎಂಬುದಾಗಿ ಮರು ನಾಮಕರಣ ಮಾಡಲಾಯಿತು.

 ಕರ್ನಾಟಕಕ್ಕೆ ಹೊಸ ಗರಿ

ಕರ್ನಾಟಕಕ್ಕೆ ಹೊಸ ಗರಿ

ನಿಸರ್ಗದ ಮೂಲಗಳನ್ನೇ ಬಳಸಿಕೊಂಡು ತಯಾರು ಮಾಡುವ ಪ್ರಪಂಚದ ಏಕೈಕ ಸೋಪ್ ಎಂಬ ಹೆಗ್ಗಳಿಕೆಗೆ 2006 ರಲ್ಲಿ ಮೈಸೂರು ಸ್ಯಾಂಡಲ್ ಪಾತ್ರವಾಯಿತು.

 ಧೋನಿ ಅಂಬಾಸಿಡರ್

ಧೋನಿ ಅಂಬಾಸಿಡರ್

ಭಾರತ ಕ್ರಿಕೆಟ್ ತಂಡದ ನಾಯಕ ಎಂ ಎಸ್ ಧೋನಿ ಮೈಸೂರು ಸ್ಯಾಂಡಲ್ ರಾಯಭಾರಿಯಾಗಿ ಕಾಣಿಸಿಕೊಂಡರು. ಇದೇ ಮೊದಲ ಸಾರಿ ಮೈಸೂರು ಸ್ಯಾಂಡಲ್ ಸೆಲೆಬ್ರಿಟಿ ಒಬ್ಬರನ್ನು ತನ್ನ ರಾಯಭಾರಿಯಾಗಿ ಮಾಡಿಕೊಂಡಿತು.

 ಅದ್ದೂರಿ ಶತಮಾನೋತ್ಸವ

ಅದ್ದೂರಿ ಶತಮಾನೋತ್ಸವ

ಕಾರ್ಖಾನೆಗೆ 100 ವರ್ಷ ತುಂಬಿದ ಪ್ರಯುಕ್ತ ಅದ್ದೂರಿಯಿಂದ ಶತಮಾನೋತ್ಸವ ಆಚರಿಸಲು ತೀರ್ಮಾನಿಸಲಾಗಿದೆ. ಈ ವೇಳೆ ಹೊಸ ‘ಮೈಸೂರು ಸ್ಯಾಂಡಲ್‌ ಸೆಂಟೆನಿಯಲ್‌' ಸೋಪ್‌ ಸೇರಿದಂತೆ ಹಲವು ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, ನೂತನ ಅಂತರ್ಜಾಲ ತಾಣಕ್ಕೂ ಚಾಲನೆ ನೀಡಲಾಗುತ್ತಿದೆ.

ಪ್ರಮುಖ 5 ಉತ್ಪನ್ನಗಳು

ಪ್ರಮುಖ 5 ಉತ್ಪನ್ನಗಳು

1918ರಲ್ಲಿ ‘ಮೈಸೂರು ಸ್ಯಾಂಡಲ್ ಸೋಪ್‌' ಬ್ರ್ಯಾಂಡ್‌ ಹೆಸರಿನಲ್ಲಿ ಸೋಪ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡ ಲಾಯಿತು. ಕೆಎಸ್‌ಡಿಎಲ್‌ ಮುಖ್ಯವಾಗಿ 5 ರೀತಿಯ ಉತ್ಪನ್ನಗಳಿಗೆ ಹೆಸರಾಗಿದೆ. ಪ್ರೀಮಿಯಂ ಸೋಪ್‌, ಪಾಪ್ಯುಲರ್ ಸೋಪ್‌, ಡಿಟರ್ಜಂಟ್‌, ಸೌಂದರ್ಯವರ್ಧಕ ಹಾಗೂ ಅಗರಬತ್ತಿಗಳಿಗೆ ಬ್ರ್ಯಾಂಡ್ ಆಗಿದೆ.

6 ಮಾರುಕಟ್ಟೆ ಶಾಖೆಗಳು

6 ಮಾರುಕಟ್ಟೆ ಶಾಖೆಗಳು

ಕಾರ್ಖಾನೆ ತನ್ನ ಮಾರಾಟ ಮತ್ತು ಉತ್ಪನ್ನಗಳ ಪ್ರಚಾರಕ್ಕಾಗಿ ದೇಶದ ಆರು ಕಡೆ ಮಾರುಕಟ್ಟೆ ಶಾಖೆಗಳನ್ನು ಹೊಂದಿದೆ. ಬೆಂಗಳೂರು, ಚೆನ್ನೈ, ಹೈದರಾಬಾದ್‌, ಮುಂಬೈ, ಕೋಲ್ಕತಾ ಹಾಗೂ ದೆಹಲಿಗಳಲ್ಲಿ ಶಾಖೆಗಳಿವೆ. ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಎರಡು ವಿಭಾಗಗಳಿವೆ. ಬೆಂಗಳೂರಿನಲ್ಲಿ ಆಡಳಿತ ಕಚೇರಿ ಹೊಂದಿದೆ.

ವಿದೇಶಗಳಿಗೆ ರಫ್ತು

ವಿದೇಶಗಳಿಗೆ ರಫ್ತು

ಮೈಸೂರು ಸ್ಯಾಂಡಲ್ ಉತ್ಪನ್ನಗಳು ಪ್ರಪಂಚದ 18 ದೇಶಗಳಲ್ಲಿ ಗ್ರಾಹಕರನ್ನು ತಲುಪುತ್ತಿವೆ. ಅಮೆರಿಕ, ಯುಎಇ, ಸೌದಿ ಅರೇಬಿಯಾ, ಕೆನಡಾ, ಕುವೈತ್‌, ಬೆಹರಿನ್‌, ಕತಾರ್‌, ಮಲೇಷ್ಯಾ, ಸಿಂಗಪುರ, ಇಂಗ್ಲೆಂಡ್ ಪ್ರಮುಖ ಗ್ರಾಹಕ ದೇಶಗಳು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Karnataka state-owned Karnataka Soaps and Detergents Limited (KSDL), the company that manufactures the iconic Mysore Sandal Soaps, completed 100 years on May 10. The soap was first launched in the market in 1918. Here is the brief history of Mysore Sandal soaps.
Please Wait while comments are loading...