ರಾಜ್ಯದಲ್ಲಿ ಇಂದು 10 ಸಾವಿರಕ್ಕೂ ಅಧಿಕ ಕೊರೊನಾ ವೈರಸ್ ಪ್ರಕರಣ

ಬೆಂಗಳೂರು, ಸೆಪ್ಟೆಂಬರ್ 29: ರಾಜ್ಯದಲ್ಲಿ ಮಂಗಳವಾರ 10,453 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ. 24 ಗಂಟೆಗಳಲ್ಲಿ 136 ಮಂದಿ ಮೃತಪಟ್ಟಿದ್ದು, 6628 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಇದರಿಂದ ರಾಜ್ಯದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 5,92,911ಕ್ಕೆ ಏರಿದೆ. 1,07,737 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಇದುವರೆಗೂ 8,777 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. 815 ಮಂದಿ ಐಸಿಯುದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಒಟ್ಟು 87,475 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು 4,868 ಪ್ರಕರಣಗಳು ಪತ್ತೆಯಾಗಿವೆ. 2373 ಮಂದಿ ಬಿಡುಗಡೆಯಾಗಿದ್ದಾರೆ. 67 ಮಂದಿ ಮೃತಪಟ್ಟಿರುವುದು ವರದಿಯಾಗಿದೆ. ಇದರಿಂದ ಬೆಂಗಳೂರು ನಗರದಲ್ಲಿನ ಒಟ್ಟು ಪ್ರಕರಣಗಳು 228437ಕ್ಕೆ ತಲುಪಿದ್ದು, 178914 ಮಂದಿ ಬಿಡುಗಡೆಯಾಗಿದ್ದಾರೆ. ಬೆಂಗಳೂರಿನ ನಂತರ ಅತ್ಯಧಿಕ ಪ್ರಕರಣಗಳು ಹಾಸನದಲ್ಲಿ (475) ವರದಿಯಾಗಿವೆ.

10,453 Coronavirus Cases Registered In Karnataka Today

ಮೈಸೂರು 414, ದಕ್ಷಿಣ ಕನ್ನಡ 362, ಬೆಂಗಳೂರು ಗ್ರಾಮಾಂತರ 305, ಬಳ್ಳಾರಿ 313, ಶಿವಮೊಗ್ಗ 347, ತುಮಕೂರು 297, ಮಂಡ್ಯ 259, ಉಡುಪಿ 319, ದಾವಣಗೆರೆ 288, ಕಲಬುರಗಿ 161, ವಿಜಯಪುರ 138, ಉತ್ತರ ಕನ್ನಡ 125, ಕೊಪ್ಪಳ 143, ಚಿತ್ರದುರ್ಗ 186, ಚಿಕ್ಕಮಗಳೂರು 177, ಬೆಳಗಾವಿ 128, ಚಿಕ್ಕಬಳ್ಳಾಪುರದಲ್ಲಿ 141 ಪ್ರಕರಣಗಳು ವರದಿಯಾಗಿವೆ.

ಅತಿ ಕಡಿಮೆ ಪ್ರಕರಣ ರಾಮನಗರದಲ್ಲಿ-10 ದಾಖಲಾಗಿದೆ. ಕೊಡಗು 57, ಕೋಲಾರ 72, ಹಾವೇರಿ 75, ಬೀದರ್ 70 ಪ್ರಕರಣಗಳು ದಾಖಲಾಗಿವೆ. ಚಾಮರಾಜನಗರ 122, ಗದಗ 111, ರಾಯಚೂರು 100, ಯಾದಗಿರಿ 117 ಪ್ರಕರಣಗಳು ಪತ್ತೆಯಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+