ಕೆಪಿಎಸ್‌ಸಿ ಮುಖ್ಯ ಪರೀಕ್ಷೆಗೆ ₹1 ಕೋಟಿ ರೇಟ್‌ ಫಿಕ್ಸ್‌ ಆಗಿದೆ: ಆರ್‌.ಅಶೋಕ್‌

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪರೀಕ್ಷೆಗಳಲ್ಲಿ ಅಕ್ರಮ ನಡೆಯುತ್ತಿದೆ ವಿಪಕ್ಷ ನಾಯಕ ಆರ್.ಅಶೋಕ್‌ ಅವರು ವಿಧಾನಸಭೆಯಲ್ಲಿ ಆರೋಪಿಸಿದ್ದಾರೆ. ಒಂದೆಡೆ ಕೆಪಿಎಸ್‌ಸಿ ಮರುಪರೀಕ್ಷೆಯಲ್ಲೂ ಕನ್ನಡ ಭಾಷೆಯಲ್ಲಿ ಲೋಪವಾಗಿದೆ ಎಂದು ಅಭ್ಯರ್ಥಿಗಳು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಹೊತ್ತಿನಲ್ಲೇ ಅಶೋಕ್‌ ಅವರು ಕೆಪಿಎಸ್‌ಸಿ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಕೆಪಿಎಸ್‌ಸಿಯಲ್ಲಿ ಪ್ರತಿಯೊಂದಕ್ಕೂ ರೇಟ್‌ ಫಿಕ್ಸ್‌ ಆಗಿದೆ ಎಂದು ದೂರಿದ್ದಾರೆ.

ಕೆಪಿಎಸ್‌ಸಿ ನಡೆಸುವ ಪೂರ್ವಭಾವಿ ಪರೀಕ್ಷೆಗೆ 60 ಲಕ್ಷ ರೂಪಾಯಿ ಹಾಗೂ ಮುಖ್ಯ ಪರೀಕ್ಷೆಗೆ 1 ಕೋಟಿ ರೂಪಾಯಿ ನಿಗದಿ ಮಾಡಲಾಗಿದೆ. ಸಂದರ್ಶನಕ್ಕೆ 40 ಲಕ್ಷ ರೂಪಾಯಿ ರೇಟ್‌ ಫಿಕ್ಸ್‌ ಆಗಿದೆ. ಇನ್ನು ಎಸಿ ಹುದ್ದೆಗೆ 2 ಕೋಟಿ ರೂಪಾಯಿ, ಡಿವೈಎಸ್‌ಪಿ ಹುದ್ದೆಗೆ 2 ಕೋಟಿ ರೂಪಾಯಿ, ವಾಣಿಜ್ಯ ತೆರಿಗೆ ಹುದ್ದೆಗೆ 1.50 ಕೋಟಿ ರೂಪಾಯಿ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗೆ 1.50 ಕೋಟಿ ರೂಪಾಯಿ ದರ ನಿಗದಿ ಮಾಡಲಾಗಿದೆ. ಈ ಸರ್ಕಾರದಲ್ಲಿ ಎಲ್ಲದಕ್ಕೂ ರೇಟ್‌ ಕಾರ್ಡ್‌ ಇದೆ ಎಂದು ಅಶೋಕ್‌ ಗಂಭೀರ ಆರೋಪ ಮಾಡಿದ್ದಾರೆ.

1 Crore Bribery Allegation In KPSC Main Exams BJP Leader R Ashoka

ಕೆಪಿಎಸ್‌ಸಿಯಲ್ಲಿ ಒಟ್ಟು 14 ಸದಸ್ಯರಿದ್ದು, ಪ್ರತಿಯೊಬ್ಬರಿಗೂ ಎರಡೂವರೆ ಲಕ್ಷ ರೂಪಾಯಿ ಸಂಬಳ ಇದೆ. ಉಳಿದ ಸೌಲಭ್ಯಗಳು ಸೇರಿ ಒಬ್ಬರಿಗೆ ನಾಲ್ಕು ಲಕ್ಷ ರೂಪಾಯಿ ಸೇರುತ್ತದೆ. ಇಲ್ಲಿ ಹಗಲು ದರೋಡೆ ನಡೆಯುತ್ತಿದೆ. ಕೆಪಿಎಸ್‌ಸಿ ನಡೆಸುವ ಪೂರ್ವಭಾವಿ ಪರೀಕ್ಷೆಗೆ 60 ಲಕ್ಷ ರೂಪಾಯಿ ಹಾಗು ಮುಖ್ಯ ಪರೀಕ್ಷೆಗೆ ಕೋಟಿ ರೂಪಾಯಿ ದರ ನಿಗದಿ ಮಾಡಲಾಗಿದೆ ಎಂದು ದರಪಟ್ಟಿ ಕೊಟ್ಟಿದ್ದಾರೆ.

ಒಎಂಆರ್‌ ಶೀಟ್‌ನಲ್ಲಿ ಇಷ್ಟೇ ಪ್ರಶ್ನೆಗಳಿಗೆ ಮಾತ್ರ ಟಿಕ್‌ ಮಾಡುವಂತೆ ಬ್ರೋಕರ್‌ ಹೇಳ್ತಾನೆ. ಅಭ್ಯರ್ಥಿ ಅದನ್ನೆ ಮಾಡುತ್ತಾನೆ. ಒಎಂಆರ್‌ ಶೀಟ್‌ ಹೋಗುವ ಕೊಠಡಿಗಳಲ್ಲಿ ಸಿಸಿಟಿವಿ ಕೂಡ ಇರುವುದಿಲ್ಲ. ಅಲ್ಲಿಯೇ ಉಳಿದ ಪ್ರಶ್ನೆಗಳಿಗೆ ಉತ್ತರವನ್ನು ಟಿಕ್‌ ಮಾಡಲಾಗುತ್ತದೆ. ಇದರಲ್ಲಿ ಕೆಪಿಎಸ್‌ಸಿ ಅಧಿಕಾರಿಗಳೇ ಶಾಮೀಲಾಗಿರುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

1 Crore Bribery Allegation In KPSC Main Exams BJP Leader R Ashoka

ವಿಧಿ ವಿಜ್ಞಾನ ಪ್ರಯೋಗಾಲಯದಲ್ಲೂ ಈ ಬಗ್ಗೆ ಸಾಬೀತಾಗಿದೆ. ಪರೀಕ್ಷೆ ಬರೆದ ಅಭ್ಯರ್ಥಿ ಮತ್ತು ಬ್ರೋಕರ್‌ ಬಳಸಿರುವ ಪೆನ್‌ಗಳಲ್ಲಿ ವ್ಯತ್ಯಾಸ ಇರುವುದರ ಬಗ್ಗೆಯೂ ಪತ್ತೆಯಾಗಿದೆ. ಕೆಪಿಎಸ್‌ಸಿ ಸಿಬ್ಬಂದಿಯ ಸಹಾಯವಿಲ್ಲದೆ ಈ ಕೃತ್ಯ ಮಾಡಲು ಸಾಧ್ಯವಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಸರ್ಕಾರ ಕೂಡ ಒಪ್ಪಿಕೊಂಡಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೆಪಿಎಸ್‌ಸಿ ಮೊದಲ ಬಾರಿಗೆ ನಡೆಸಿದ ಪರೀಕ್ಷೆಗೆ 15 ಕೋಟಿ ರೂಪಾಯಿ ನೀಡಲಾಗಿದೆ. ಮರುಪರೀಕ್ಷೆಗೂ ಅಷ್ಟೇ ಹಣ ಕೊಡಲಾಗಿದೆ. ಮರುಪರೀಕ್ಷೆಯಲ್ಲೂ ಹತ್ತಾರು ತಪ್ಪುಗಳಾಗಿವೆ. ಸಿಎಂ ಸಿದ್ದರಾಮಯ್ಯ ಅವರು ವ್ಯಾಕರಣದ ಬಗ್ಗೆ ಮಾತನಾಡುತ್ತಾರೆ. ಮರುಪರೀಕ್ಷೆಯಲ್ಲೂ ಕನ್ನಡ ತಪ್ಪಾಗಿದೆ. ಸುಮಾರು 2 ಲಕ್ಷ ಮಂದಿ ನಿರುದ್ಯೋಗಿಗಳಾಗಿ ಪರೀಕ್ಷೆಗಾಗಿ ಓದುತ್ತಿರುವಾಗ ಅವರ ನೋವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+