ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿಯಲ್ಲಿ 1,894 ಮಕ್ಕಳು ಭಾಗ್ಯಲಕ್ಷ್ಮೀಯರಲ್ಲ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಉಡುಪಿ, ಜೂನ್ 2 : ಉಡುಪಿಯಲ್ಲಿ 1,894 ಮಕ್ಕಳು ಸರ್ಕಾರದ ಭಾಗ್ಯಲಕ್ಮ್ಮೀ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರ ನಿಯಮವನ್ನು ಮೀರಿ ಭಾಗ್ಯಲಕ್ಷ್ಮೀ ಬಾಂಡ್ ಪಡೆದವರು ಬಾಂಡ್ ವಾಪಸ್ ನೀಡುವಂತೆ ಆಡಿಟರ್ ಜನರಲ್ ಆದೇಶ ನೀಡಿದ್ದಾರೆ. ಬಡ ಕುಟುಂಬದವರಿಗೆ ಇದು ಹೊಸ ಸಂಕಷ್ಟ ತಂದೊಡ್ಡಿದೆ.

ಬಡ ಕುಟುಂಬದಲ್ಲಿ ಜನಿಸುವ ಹೆಣ್ಣು ಮಕ್ಕಳ ವಿದ್ಯಾಭ್ಯಾಸ, ವಿವಾಹಕ್ಕೆ ಆರ್ಥಿಕ ಸಹಾಯ ನೀಡುವ ಮಹತ್ವದ ಗುರಿಯೊಂದಿಗೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ಭಾಗ್ಯಲಕ್ಮೀ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಆದರೆ, ಉಡುಪಿಯ ಜಿಲ್ಲೆಯಲ್ಲಿ ಹಲವಾರು ಗೊಂದಲಗಳಿಂದಾಗಿ 1,864 ಮಕ್ಕಳು ಬಾಂಡ್ ನಿಂದ ವಂಚಿತರಾಗುತ್ತಿದ್ದಾರೆ.

Bhagyalakshmi

ಮೊದಲು 'ಭಾಗ್ಯಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವಾಗ ಫ‌ಲಾನುಭವಿಯಾಗುವ ಮಗುವಿನ ತಂದೆಯ ಭಾವಚಿತ್ರ ಕೂಡ ಪಡಿತರ ಚೀಟಿಯಲ್ಲಿ ಇರಬೇಕು ಎಂಬ ನಿಯಮವನ್ನು ಸರ್ಕಾರ ಜಾರಿಗೆ ತಂದಿತ್ತು. ನಂತರ 2006ರಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ನಲ್ಲಿ ಈ ಬಗ್ಗೆ ಚರ್ಚೆ ನಡೆದು, ಪಡಿತರ ಚೀಟಿಯಲ್ಲಿ ತಾಯಿಯ ಹೆಸರು ಮತ್ತು ಭಾವಚಿತ್ರವಿದ್ದರೂ ಭಾಗ್ಯಲಕ್ಷ್ಮೀ ಬಾಂಡ್‌ ನೀಡಬೇಕು ಎಂದು ನಿರ್ಣಯ ಕೈಗೊಳ್ಳಲಾಗಿತ್ತು. [ಭಾಗ್ಯಲಕ್ಷ್ಮೀ ಯೋಜನೆಗೆ ವಿವಾಹ ನೋಂದಣಿ ಕಡ್ಡಾಯ]

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ನಿಯಮದ ಅನ್ವಯವೇ ಭಾಗ್ಯಲಕ್ಷ್ಮೀ ಬಾಂಡ್‌ ಗಳನ್ನು ಒದಗಿಸಿತ್ತು. ಆದರೆ, ಸದ್ಯ ನವದೆಹಲಿಯ ಆಡಿಟರ್ ಜನರಲ್ ತಂದೆಯ ಭಾವಚಿತ್ರವಿಲ್ಲದ ಬಾಂಡ್ ಗಳನ್ನು ಹಿಂಪಡೆಯುವಂತೆ ಆದೇಶ ನೀಡಿದ್ದಾರೆ. ಆದ್ದರಿಂದ ಜಿಲ್ಲೆಯ 1,894 ಮಕ್ಕಳು ಭಾಗ್ಯಲಕ್ಷ್ಮೀ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ.

ಉಡುಪಿ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರಿಗೆ ಆದೇಶ ನೀಡಿರುವ ಆಡಿಟರ್ ಜನರಲ್, ಬಾಂಡ್‌ ವಾಪಸ್‌ ಪಡೆದುಕೊಳ್ಳಲು ಸೂಚನೆ ನೀಡಿದ್ದಾರೆ. ಅದರಂತೆ ಕುಂದಾಪುರ ತಾಲೂಕಿನ 10, ಕಾರ್ಕಳದ 88, ಬ್ರಹ್ಮಾವರದ 1,226 ಮತ್ತು ಉಡುಪಿ ತಾಲೂಕಿನ 574 ಮಂದಿಯ ಬಾಂಡ್‌ ಹಿಂದಿರುಗಿಸಬೇಕಾಗಿದೆ.

ಮೇ 30ರಂದು ನಡೆದ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಬಾಂಡ್ ವಾಪಸ್ ಕುರಿತು ಚರ್ಚೆ ನಡೆಯಿತಾದರೂ ಯಾವ ಸದಸ್ಯರು ಈ ಕುರಿತು ಹೆಚ್ಚಿನ ಚರ್ಚೆ ನಡೆಸಲಿಲ್ಲ. ಆದರೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಉಪೇಂದ್ರ ನಾಯಕ್ ಈ ಬಗ್ಗೆ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಮಾಡಿ, 1,894 ಬಾಂಡ್ ಗಳನ್ನು ಪುನರ್ ಪರಿಶೀಲನೆ ಮಾಡುವಂತೆ ಕೋರಲು ತೀರ್ಮಾನಿಸಿದ್ದಾರೆ. ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ? ಎಂದು ಕಾದು ನೋಡಬೇಕು.

English summary
The Bhagyalakshmi bonds scheme which was launched by the State government is in problems at Udupi district. 1894 bonds issued to the beneficiaries from the district have been rejected.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X