ನಂಬಿಕೆ, ವೈವಿಧ್ಯಮಯ ಆಭರಣಗಳಿಗೆ ಮತ್ತೊಂದು ಹೆಸರು ಕಲ್ಯಾಣ್ ಜುವೆಲರ್ಸ್

ಮದುವೆ ಮತ್ತಿತರ ಶುಭ ಮುಹೂರ್ತಗಳಿಗೆ ವರ್ಷದ ಒಂದೆರಡು ತಿಂಗಳು ಮಾತ್ರ ಬಿಡುವು. ಉಳಿದಂತೆ ಸಾಲು ಮುಹೂರ್ತಗಳು ಇರುತ್ತವೆ. ಮದುಮಗಳ ಸಂಕೋಚದ ಕಣ್ಣುಗಳಲ್ಲಿ ಒಂದು ಬಗೆಯ ಬೆಳಕು ಫಳಫಳಿಸಿದರೆ, ಆಕೆಯ ಮೈ ಮೇಲಿನ ಒಡವೆ ಝಗಮಗಿಸುತ್ತಿರುತ್ತದೆ. ಚಿನ್ನಾಭರಣ ಎಂಬುದು ಭಾರತೀಯ ಮದುವೆಗಳ ಭಾಗವೇ ಆಗಿಹೋಗಿದೆ.

ಮದುವೆ ಆಗಲು ನಾನಾ ಸಂಪ್ರದಾಯ ಇರಬಹುದು. ಆದರೆ ಚಿನ್ನಾಭರಣ ಇಲ್ಲದ ಮದುವೆಯನ್ನು ಊಹಿಸಲು ಸಾಧ್ಯವಾ? ದಸರಾ ಸಂದರ್ಭದಲ್ಲಿ ಮನೆಗೆ ಆಭರಣ ತರುವ ಸಂಪ್ರದಾಯ- ಪದ್ಧತಿ ಈಗಲೂ ನಡೆದುಕೊಂಡು ಬಂದಿದೆ. ಮಗಳು, ಅಕ್ಕ, ತಂಗಿ ಅಥವಾ ಭಾವೀ ಪತ್ನಿಗೆ ಒಡವೆ ತರುವುದಕ್ಕೆ ಕೂಡ ಶುಭ ಮುಹೂರ್ತ ನೋಡಲಾಗುತ್ತದೆ. ದಸರಾ ಅಂಥ ಶುಭ ಮುಹೂರ್ತ.

Kalyan Jewelers Dasara Special Wedding Jewellery

Recommended Video

      ಹಬ್ಬದ ಸಂಭ್ರಮದಲ್ಲಿ ಚಿನ್ನದ ಬೆಲೆ ದಾಖಲೆ ಮೊತ್ತದಲ್ಲಿ ಏರಿಕೆ

      ಅದಕ್ಕಾಗಿಯೇ ಕಲ್ಯಾಣ್ ಜ್ಯುವೆಲರ್ಸ್ ನಿಂದ ಮದುವೆ ಸಂದರ್ಭಕ್ಕೆ ವಧುವಿನ ಅಲಂಕಾರಕ್ಕೆ ಅಂತಲೇ ಚಂದದ, ಸೊಗಸಾದ ಹಾಗೂ ದೀರ್ಘ ಕಾಲ ಬಳಸಬಹುದಾದ ಚಿನ್ನಾಭರಣಗಳ ಸಂಗ್ರಹವನ್ನು ಮಾರಲಾಗುತ್ತಿದೆ. ಭಾರತದ ನಾನಾ ಭಾಗಗಳಲ್ಲಿ ಮದುವೆ ಸಂದರ್ಭದಲ್ಲಿ ಬಳಸುವಂತಹ ಆಭರಣಗಳ ಸಂಗ್ರಹ ಕಲ್ಯಾಣ್ ಜ್ಯುವೆಲರ್ಸ್ ನಲ್ಲಿ ದೊರೆಯಲಿದೆ.

      ವೈವಿಧ್ಯತೆಗೆ ಭಾರತ ಹೆಗ್ಗುರುತು. ಆಯಾ ಪ್ರದೇಶಕ್ಕೆ ಅದರದೇ ಆದ ವಿಶಿಷ್ಟ ಬಗೆಯ ಆಭರಣದ ಡಿಸೈನ್ ಇದೆ. ಆ ಆಭರಣಗಳನ್ನು ಆಯಾ ಪ್ರಾದೇಶಿಕ ಭಾಗದಲ್ಲಿ ಮಾತ್ರ ನೋಡುವುದಕ್ಕೆ ಸಾಧ್ಯ. ಇದು ತಲೆಮಾರಿನಿಂದ ತಲೆಮಾರಿಗೆ ಸಾಗಿ ಬಂದಿದೆ. ಕಲ್ಯಾಣ್ ಜ್ಯುವೆಲರ್ಸ್ ನ ಬಲವೇ ಅದು. ಭಾರತದ ಮೂಲೆಮೂಲೆಯಲ್ಲಿನ ಕುಸುರಿ ಚಿನ್ನಾಭರಣ ತಯಾರಕರು ಕಲ್ಯಾಣ್ ಜ್ಯುವೆಲರ್ಸ್ ಗಾಗಿ ಆಭರಣ ತಯಾರಿಸುತ್ತಾರೆ.

      Kalyan Jewelers Dasara Special Wedding Jewellery

      ಕಲ್ಯಾಣ್ ಜ್ಯುವೆಲರ್ಸ್ ನಲ್ಲಿ ಸಿಗುವಂಥ ಅದ್ಭುತವಾದ ಆಭರಣಗಳು ನಿಮಗೆ ಬೇರೆಲ್ಲೂ ದೊರೆಯಲು ಸಾಧ್ಯವಿಲ್ಲ. ಅಷ್ಟೇ ಅಲ್ಲ, ಇಷ್ಟು ದೊಡ್ಡ ಪ್ರಮಾಣದ ಬ್ರ್ಯಾಂಡ್ ಬೇರೆಲ್ಲೂ ಸಿಗುವುದು ಕಷ್ಟ. ಕಲ್ಯಾಣ್ ಜ್ಯುವೆಲ್ಲರ್ಸ್ ಗೆ ನೂರಾ ಒಂಬತ್ತು ವರ್ಷಗಳ ಇತಿಹಾಸ ಇದೆ. ಸ್ವಾತಂತ್ರ್ಯಪೂರ್ವ ಭಾರತದಲ್ಲಿ ದೇಶ ನಿರ್ಮಾಣದ ಮಹತ್ತರ ಉದ್ದೇಶದಿಂದ ಆರಂಭವಾಗಿದ್ದು ಕಲ್ಯಾಣ್ ಜ್ಯುವೆಲರ್ಸ್.

      ಪ್ರಾಮಾಣಿಕತೆ, ಪಾರದರ್ಶಕ ಹಾಗೂ ನೈತಿಕವಾದ ವ್ಯವಹಾರ ಮಾಡುವುದನ್ನಷ್ಟೇ ಕಲ್ಯಾಣ್ ನಂಬುತ್ತದೆ. ಇದೇ ನಂಬಿಕೆ ಸಂಸ್ಥೆಯ ಗಟ್ಟಿ ಅಡಿಪಾಯ ಕೂಡ. ಚಿನ್ನದ ರೀಟೇಲ್ ವ್ಯವಹಾರಕ್ಕೆ ಕಲ್ಯಾಣ್ ಜ್ಯುವೆಲ್ಲರ್ಸ್ ಬಂದಿದ್ದು 1993ರಲ್ಲಿ. ಕೇರಳದ ತ್ರಿಶೂರ್ ನಲ್ಲಿ ಜ್ಯುವೆಲರ್ಸ್ ನ ಕೇಂದ್ರ ಕಚೇರಿ ಇದೆ. ಭಾರತ ಮತ್ತು ಇತರೆಡೆ ಸೇರಿ ಒಟ್ಟು 137 ಶೋರೂಮ್ ಗಳಿವೆ.

      Kalyan Jewelers Dasara Special Wedding Jewellery

      ಪರಿಶುದ್ಧತೆ, ಜೀವಿತಾವಧಿ ನಿರ್ವಹಣೆ, ವಿನಿಮಯ, ಉತ್ಪನ್ನದ ಮಾಹಿತಿ ಇದು ಕಲ್ಯಾಣ್ ಜ್ಯುವೆಲ್ಲರ್ಸ್ ನೀಡುವ ಖಾತ್ರಿ. ದಸರಾ ಸಂದರ್ಭದಲ್ಲಿ ಮನೆಗೆ ಚಿನ್ನ ಅಥವಾ ಯಾವುದೇ ಬೆಲೆಬಾಳುವ ಲೋಹ ತೆಗೆದುಕೊಂಡು ಬರುವುದು ತಲೆತಲಾಂತರ ಪದ್ಧತಿ, ಸಂಪ್ರದಾಯ. ಹಾಗೆ ಖರೀದಿಸುವಾಗ ನಂಬಿಕೆ ಇರುವ ಕಡೆ ಹೋಗುವುದು ಉತ್ತಮ. ಆ ನಿಮ್ಮ ನಂಬಿಕೆ ಕಲ್ಯಾಣ್ ಜ್ಯುವೆಲರ್ಸ್ ದಶಕಗಳಿಂದ ಉಳಿಸಿಕೊಂಡು ಬಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+