ಕಲಬುರಗಿ : ಟ್ರೈನಿ ಪಿಎಸ್‌ಐ ನಿಗೂಢವಾಗಿ ಸಾವು

ಕಲಬುರಗಿ, ಜನವರಿ 06 : ತರಬೇತಿ ನಿರತ ಪಿಎಸ್‌ಐ ನಿಗೂಢವಾಗಿ ಮೃತಪಟ್ಟಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೀದರ್ ಜಿಲ್ಲೆಯ ಸೇಡಂ ತಾಲೂಕಿನ ಬೆನಕನಹಳ್ಳಿಯ ಬಸವರಾಜ ಶಂಕರಪ್ಪ ಮುಂಚೆನ್ನವರ (27) ಅವರ ಶವ ರಾಮಮಂದಿರ ವೃತ್ತದಲ್ಲಿರುವ ಗ್ರ್ಯಾಂಡ್‌ ಸೆಂಟ್ರಲ್ ಕಾಂಪ್ಲೆಕ್ಸ್ ಮುಂದೆ ಅನುಮಾನಸ್ಪದ ರೀತಿಯಲ್ಲಿ ಪತ್ತೆಯಾಗಿದೆ.

ಕಲಬುರಗಿ ನಗರದ ಹೊರವಲಯದ ನಾಗನಹಳ್ಳಿಯಲ್ಲಿರುವ ಪೊಲೀಸ್ ತರಬೇತಿ ಶಾಲೆಯಲ್ಲಿ ಬಸವರಾಜ ಅವರು ತರಬೇತಿ ಪಡೆಯುತ್ತಿದ್ದರು. ಆರೋಗ್ಯ ಸರಿ ಇಲ್ಲ ಎಂದು ಶನಿವಾರ ಅವರು ರಜೆ ಪಡೆದಿದ್ದರು. ಶಾಲೆಯಿಂದ ಹೊರ ಹೋಗಿದ್ದರು.

Trainee PSI found dead in Kalaburagi

ಭಾನುವಾರ ಬೆಳಗ್ಗೆ 9 ಗಂಟೆಗೆ ಗ್ರ್ಯಾಂಡ್‌ ಸೆಂಟ್ರಲ್ ಕಾಂಪ್ಲೆಕ್ಸ್ ಮುಂದೆ ಬಸವರಾಜ ಶಂಕರಪ್ಪ ಮುಂಚೆನ್ನವರ ಅವರು ಒದದ್ದಾಡುತ್ತಾ ಬಿದ್ದಿದ್ದರು. ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು.

ಪೊಲೀಸರು ಸ್ಥಳಕ್ಕೆ ಆಗಮಿಸುವ ಹೊತ್ತಿಗೆ ಬಸವರಾಜ ಶಂಕರಪ್ಪ ಮುಂಚೆನ್ನವರ ಮೃತಪಟ್ಟಿದ್ದರು. ಪೊಲೀಸರು ಗುರುತು ಪತ್ತೆ ಮಾಡಲು ತಪಾಸಣೆ ನಡೆಸಿದಾಗ ಟ್ರೈನಿ ಪಿಎಸ್‌ಐ ಎಂದು ತಿಳಿದುಬಂದಿದೆ.

ಕಲಬುರಗಿ ಎಸ್‌ಪಿ ಎನ್.ಶಶಿಕುಮಾರ್, ನಾಗನಹಳ್ಳಿ ಪೊಲೀಸ್ ತರಬೇತಿ ಕೇಂದ್ರದ ಪ್ರಾಂಶುಪಾಲ ಸವಿತಾ ಹೂಗಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+