ಕಲಬುರಗಿಯಲ್ಲೂ ನಡೆದೇ ಹೋಯಿತು ಅತ್ಯಾಚಾರ, ಬರ್ಬರ ಹತ್ಯೆ

ಕಲಬುರಗಿ, ಡಿಸೆಂಬರ್ 3: ದೇಶವನ್ನೇ ಬೆಚ್ಚಿ ಬೀಳಿಸಿದ ಹೈದರಾಬಾದ್ ಪಶುವೈದ್ಯೆ ಅತ್ಯಾಚಾರ ಪ್ರಕರಣದ ಬೆಳಕಿಗೆ ಬಂದ ಬೆನ್ನಲ್ಲೇ ರಾಜ್ಯದಲ್ಲೂ ಇಂತಹ ಘಟನೆ ನಡೆದೇ ಹೋಗಿದೆ.

ಎಂಟು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.ಯಾಕಾಪುರ ಗ್ರಾಮದ ಯಲ್ಲಪ್ಪ(35) ಕೃತ್ಯವೆಸೆಗಿದ ಆರೋಪಿ. ಬಾಲಕಿಗೆ ಚಾಕಲೇಟ್ ಆಸೆ ತೋರಿಸಿ ತನ್ನೊಡನೆ ಕರೆದುಕೊಂಡು ಹೋಗಿ ಕಾಮುಕ ಅತ್ಯಾಚಾರಗೈದಿದ್ದಾನೆ.

ಬಳಿಕ ಬಾಲಕಿಯನ್ನು ಬರ್ಬರವಾಗಿ ಕೊಲೆ ಮಾಡಿ, ಶವವನ್ನು ಗ್ರಾಮದ ಹೊರವಲಯದಲ್ಲಿ ಬಿಸಾಡಿದ್ದಾನೆ. ಸೋಮವಾರ ಮಧ್ಯಾಹ್ನ ಶಾಲೆಗೆ ಹೋಗಿದ್ದ ಬಾಲಕಿ ಮನೆಗೆ ಮರಳದಿದ್ದಾಗ ಆತಂಕಗೊಂಡ ಪೋಷಕರು ಹಾಗೂ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿ ಹುಡುಕಾಟ ನಡೆಸಿದ್ದಾರೆ.

Rape And Murder Also Took Place In Kalabari

ಈ ಪ್ರಕರಣದಿಂದ ಮೃತ ಬಾಲಕಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆರೋಪಿ ವಿರುದ್ಧ ಸಿಟ್ಟಿಗೆದ್ದಿದ್ದು, ಸದ್ಯ ಇದರಿಂದ ಗ್ರಾಮದಲ್ಲಿ ಎರಡು ಕೋಮಿನ ಮಧ್ಯೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ಮುಂಜಾಗೃತ ಕ್ರಮವಾಗಿ ಪೊಲೀಸರು ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಸಂಜೆ ಸಮಯದಲ್ಲಿ ಯಲ್ಲಪ್ಪ ಜೊತೆ ಬಾಲಕಿ ಓಡಾಡುತ್ತಿರುವದನ್ನು ಕೆಲ ಗ್ರಾಮಸ್ಥರು ನೋಡಿದ್ದು, ಸಂಶಯದ ಮೇಲೆ ಯಲ್ಲಪ್ಪನನ್ನು ಸುಲೇಪೇಠ್ ಠಾಣೆಯ ಪೊಲೀಸರು ವಿಚಾರಿಸಿದ್ದಾಗ ಆರೋಪಿ ಸತ್ಯವನ್ನು ಬಾಯಿಬಿಟ್ಟಿದ್ದಾನೆ. ತಾನೇ ಅತ್ಯಾಚಾರಗೈದು, ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+