ಕಲಬುರಗಿ : 15 ಸಾವಿರ ರೂ.ಗೆ ಹೆಣ್ಣು ಮಗು ಮಾರಾಟ
ಕಲಬುರಗಿ, ಫೆಬ್ರವರಿ 25 : ಕಲಬುರಗಿ ಜಿಲ್ಲೆಯಲ್ಲಿ ಹೆಣ್ಣು ಶಿಶುಗಳು ಮಾರಾಟ ನಿಂತಿಲ್ಲ. 15 ಸಾವಿರ ರೂ.ಗಳಿಗೆ ಮಗು ಮಾರಾಟ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನರನ್ನು ಬಂಧಿಸಲಾಗಿದೆ.
ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಚಂದು ನಾಯಾಕ್ ತಾಂಡಾದಲ್ಲಿ ದಂಪತಿಗಳು ಹೆಣ್ಣು ಶಿಶುವನ್ನು ಮಾರಾಟ ಮಾಡಿದ್ದರು. 15 ಸಾವಿರ ರೂಪಾಯಿಗೆ ಮಗುವನ್ನು ಅನುಷಾ ರಾಮಚಂದ್ರ ದಂಪತಿ ಮಾರಾಟ ಮಾಡಿದ್ದರು.
ಹೈದರಾಬಾದ್ ಮೂಲದ ಶಾರಾದ ಟಿ.ಪಾಲ್ ದಂಪತಿಗೆ ಮಗುವನ್ನು ಮಾರಾಟ ಮಾಟಲಾಗಿತ್ತು. ಆಶಾಕಾರ್ಯಕರ್ತೆ ಸುವರ್ಣಾ ಅವರು ಮಧ್ಯವರ್ತಿಯಾಗಿದ್ದು, ಅವರ ಮೂಲಕ ಮಗು ಮಾರಾಟ ಮಾಡಲಾಗಿತ್ತು.

ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ದಾಳಿ ನಡೆಸಿ, ಮಗುವನ್ನು ರಕ್ಷಣೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಜನರನ್ನು ಬಂಧಿಸಲಾಗಿದೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಪ್ಪಳ : ಕೊಪ್ಪಳದಲ್ಲಿ ಜನವರಿಯಲ್ಲಿ ಮಗು ಮಾರಾಟ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಪತಿಯು ಗಂಡು ಮಗುವನ್ನು ರೂ. 1.50 ಲಕ್ಷಕ್ಕೆ ಮಾರಲು ಯತ್ನಿಸುತ್ತಿರುವ ಎಂದು ರುಕ್ಸಾನಾ ಎಂಬುವವರು ಆರೋಪಿಸಿದ್ದರು.












Click it and Unblock the Notifications