ಶಿಶುಗಳ ಅದಲು ಬದಲು : ಮಗುವಿಗೆ ಹಾಲುಣಿಸಲು ನಿರಾಕರಿಸಿದ ತಾಯಂದಿರು
ಕಲಬುರಗಿ, ಡಿಸೆಂಬರ್ 19 : ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಶಿಶುಗಳು ಅದಲು ಬದಲಾಗಿ 4 ದಿನ ಕಳದಿದ್ದರೂ ಪ್ರಕರಣ ಸುಖಾಂತ್ಯ ಕಂಡಿಲ್ಲ. ಎರಡು ಕುಟುಂಬದ ಪೋಷಕರು ಪರದಾಡುವಂತಾಗಿದೆ.
ಡಿಸೆಂಬರ್ 14 ರಂದು ಜೇವರ್ಗಿ ತಾಲೂಕಿನ ಕೋಣಶಿರಸಗಿ ಗ್ರಾಮದ ನಂದಮ್ಮ ಮತ್ತು ಶಹಾಪುರ ತಾಲೂಕಿನ ಕಾಡಮ್ಮಗೇರ ನಿವಾಸಿ ನಾಜ್ ಮೀನ್‌ಗೆ ಮಕ್ಕಳು ಜನಿಸಿದ್ದವು. ಈ ವೇಳೆ ಮಕ್ಕಳ ಹಸ್ತಾಂತರ ಸಮಯದಲ್ಲಿ ಅದಲು ಬದಲು ಮಾಡಿದ್ದ ಆಸ್ಪತ್ರೆ ಸಿಬ್ಬಂದಿಗಳು.

ಗಂಡು ಮಗು ಜನನವಾದ ಮಹಿಳೆಗೆ ಹೆಣ್ಣು ಮಗು, ಹೆಣ್ಣು ಮಗು ಜನನವಾದ ಮಹಿಳೆಗೆ ಗಂಡು ಮಗು ನೀಡಿ ಎಡವಟ್ಟು ಮಾಡಿದ್ದರು.
ಇದೀಗ ಗಂಡು ಮಗು ನಮಗೆ ಬೇಕು ಅಂತಾ ಪೋಷಕರು ಪಟ್ಟುಹಿಡಿದಿದ್ದಾರೆ. ಮಕ್ಕಳ ಅದಲು ಬದಲಿನಿಂದ ಹಾಲು ಕುಡಿಸದೆ ತಾಯಂದಿರು ಸುಮ್ಮನಾಗಿದ್ದಾರೆ. ತಾಯಿಯಿದ್ದರೂ ಸಹ ಶಿಶುಗಳು ಎದೆ ಹಾಲಿನಿಂದ ವಂಚಿತವಾಗಿದೆ.












Click it and Unblock the Notifications