ಕಲಬುರಗಿ : ಫೆ.17ರ ನರೇಂದ್ರ ಮೋದಿ ಸಮಾವೇಶ ಮುಂದೂಡಿಕೆ
ಕಲಬುರಗಿ, ಫೆಬ್ರವರಿ 17 : ಪ್ರಧಾನಿ ನರೇಂದ್ರ ಮೋದಿ ಅವರ ಕಲಬುರಗಿ ಭೇಟಿ ಮುಂದೂಡಲಾಗಿದೆ. ಫೆ.17ರಂದು ನರೇಂದ್ರ ಮೋದಿ ಅವರು ಕಲಬುರಗಿಯಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಬೇಕಿತ್ತು.
ನರೇಂದ್ರ ಮೋದಿ ಅವರ ಕಲಬುರಗಿ ಸಮಾವೇಶವನ್ನು ದಿಢೀರ್ ಮುಂದೂಡಲಾಗಿದೆ. ಫೆ.17ರ ಬದಲು ಮಾರ್ಚ್ 1ರಂದು ಕಲಬುರಗಿಯಲ್ಲಿ ಪಕ್ಷದ ಸಮಾವೇಶ ನಡೆಯಲಿದೆ. ಫೆ.17 ಮತ್ತು 27ಕ್ಕೆ ನಡೆಯಬೇಕಿದ್ದ ಎರಡು ಸಮಾವೇಶದ ದಿನಾಂಕ ಬದಲಾವಣೆ ಮಾಡಲಾಗಿದೆ.
ಫೆ.10ರಂದು ಹುಬ್ಬಳ್ಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ್ದರು. ಆ ಮೂಲಕ ಕರ್ನಾಟಕದಲ್ಲಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದರು.

ಫೆ.17ರಂದು ಕಲಬುರಗಿಯಲ್ಲಿ ಸಮಾವೇಶ ಉದ್ದೇಶಿಸಿ ನರೇಂದ್ರ ಮೋದಿ ಮಾತನಾಡಬೇಕಿತ್ತು. ಆದರೆ, ಅನಿವಾರ್ಯ ಕಾರಣದಿಂದಾಗಿ ಸಮಾವೇಶದ ದಿನಾಂಕ ಬದಲಾವಣೆ ಮಾಡಲಾಗಿದೆ. ಮಾರ್ಚ್ 1ರಂದು ಸಮಾವೇಶ ನಡೆಯಲಿದೆ.
ಅಮಿತ್ ಶಾ ಭೇಟಿ : ಮತ್ತೊಂದು ಕಡೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಫೆ.14 ಮತ್ತು 21ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಫೆ.14ರ ಗುರುವಾರ ರಾಯಚೂರು ಜಿಲ್ಲೆಯ ಸಿಂಧನೂರು ಮತ್ತು ಫೆ.21ರಂದು ಚಿಕ್ಕಬಳ್ಳಾಪುರದಲ್ಲಿ ಶಕ್ತಿ ಕೇಂದ್ರಗಳ ಪ್ರಮುಖರು ಮತ್ತು ಕಾರ್ಯಕರ್ತರ ಸಭೆಗಳನ್ನು ನಡೆಸಲಿದ್ದಾರೆ.












Click it and Unblock the Notifications