ಮಾರ್ಚ್‌ 6ಕ್ಕೆ ರಾಜ್ಯಕ್ಕೆ ಮೋದಿ, ಖರ್ಗೆ ಕ್ಷೇತ್ರದಲ್ಲಿ 'ಲೋಕ' ಕಹಳೆ

Recommended Video

      ಕಾಂಗ್ರೆಸ್ ಕ್ಷೇತ್ರಗಳೇ ಮೋದಿ ಟಾರ್ಗೆಟ್..! | Oneindia Kannada

      ಕಲಬುರಗಿ, ಮಾರ್ಚ್‌ 05: ನಾಳೆ (ಮಾರ್ಚ್ 06)ಕ್ಕೆ ರಾಜ್ಯಕ್ಕೆ ಮೋದಿ ಆಗಮಿಸಲಿದ್ದು, ಲೋಕಸಭಾ ಚುನಾವಣೆ ಪ್ರಚಾರಕ್ಕೆ ಕಹಳೆ ಮೊಳಗಿಸಲಿದ್ದಾರೆ.

      ಕಾಂಗ್ರೆಸ್‌ನ ಹಿರಿಯ ಸಂಸದ, ಲೋಕಸಭೆಯಲ್ಲಿ ಕಾಂಗ್ರೆಸ್‌ನ ಮುಖಂಡ ಮಲ್ಲಿಕಾರ್ಜುನ ಖರ್ಗೆ ಕ್ಷೇತ್ರ ಕಲಬುರ್ಗಿಯಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.

      ಮೈತ್ರಿ ಸರ್ಕಾರದ ವಿರುದ್ಧ ಟೀಕೆಗಳ ಸುರಿಮಳೆಯನ್ನೇ ಮೋದಿ ಅವರು ಸುರಿಸುವ ನಿರೀಕ್ಷೆ ಇದ್ದು, ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿಯ ಪ್ರಚಾರಕ್ಕೆ ಇದು ಅಧಿಕೃತ ಚಾಲನೆ ಎನ್ನಲಾಗುತ್ತಿದೆ.

      Narendra Modi arriving to Karnataka on March 06

      ಸಮಾವೇಶಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವುದು ಕುತೂಹಲ ಹುಟ್ಟಿಸಿದ್ದು, ಖರ್ಗೆ ಅವರ ವಿರುದ್ಧ ಮೋದಿ ಅವರು ಟೀಕಾ ಪ್ರಹಾರ ಹರಿಸುವ ನಿರೀಕ್ಷೆ ಇದೆ.

      ಕಾಂಗ್ರೆಸ್‌ ತ್ಯಜಿಸಿ, ನಿನ್ನೆಯಷ್ಟೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಉಮೇಶ್ ಜಾಧವ್ ಅವರು ನಾಳೆಯ ಸಮಾವೇಶದಲ್ಲಿ ಮೋದಿ ಉಪಸ್ಥಿತಿಯಲ್ಲಿ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಳ್ಳುವ ನಿರೀಕ್ಷೆ ಇದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+