ಕಲಬುರಗಿ; ಕೋವಿಡ್ ಸೋಂಕಿತರ ಸಂಪರ್ಕಿತರ ಪರೀಕ್ಷೆಗೆ ಸೂಚನೆ

ಕಲಬುರಗಿ, ಮಾರ್ಚ್ 12; ಕಲಬುರಗಿ ಜಿಲ್ಲೆಯಲ್ಲಿ ಇತ್ತೀಚೆಗೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿ ಬಂದಲ್ಲಿ ಕೂಡಲೇ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಜಶೇಖರ್ ಮಾಲಿ ಜಿಲ್ಲೆಯ ಜನರಲ್ಲಿ ಈ ಕುರಿತು ಮನವಿ ಮಾಡಿದ್ದಾರೆ. ಇತ್ತೀಚೆಗೆ ಬೇರೆ ರಾಜ್ಯಗಳಿಗೆ ಹೋಗಿ ಬಂದಲ್ಲಿ, ಬೇರೆ ರಾಜ್ಯಗಳಿಂದ ನಿಮ್ಮ ಮನೆಗೆ ಯಾರಾದರೂ ಬಂದಲ್ಲಿ ಅಥವಾ ಸೋಂಕು ಹೆಚ್ಚಿರುವ ತಾಲೂಕು, ಜಿಲ್ಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆಗೆ ಒಳಗಾಗಬೇಕು ಎಂದು ಹೇಳಿದ್ದಾರೆ.

ಕೆಮ್ಮು, ನೆಗಡಿ, ಜ್ವರ, ತೀವ್ರತರಹದ ಮೈಕೈ ನೋವಿನ ಲಕ್ಷಣ ಕಂಡುಬಂದಲ್ಲಿ ತಡ ಮಾಡದೇ ಆಸ್ಪತ್ರೆಗೆ ಭೇಟಿ ನೀಡಿ‌ ಚಿಕಿತ್ಸೆ ಪಡೆಯಬೇಕು. ಜಿಲ್ಲೆಯಾದ್ಯಂತ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹಾಗೂ ವೈದ್ಯರ ದೃಢೀಕರಣದ‌ ಮೇರೆಗೆ 45 ರಿಂದ 59 ವರ್ಷದೊಳಗಿನ ಕಾಯಿಲೆಯಿಂದ ಬಳಲುತ್ತಿರುವವರೆಗೆ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತಿದ್ದು, ಯಾವುದೇ ಭಯವಿಲ್ಲದೆ ಲಸಿಕೆ ಪಡೆಯಬಹುದಾಗಿದೆ ಎಂದು ತಿಳಿಸಲಾಗಿದೆ.

Go For COVID-19 test Kalaburagi DHO Request To People

ವಾರ ಪೂರ್ತಿ ಲಸಿಕೆ: ಕಲಬುರಗಿಯ ಜಿಮ್ಸ್ ಆಸ್ಪತ್ರೆ, ಇ.ಎಸ್.ಐ.ಸಿ. ಆಸ್ಪತ್ರೆ ಹಾಗೂ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ವಾರದ 7 ದಿನಗಳ‌ ಕಾಲ ಉಚಿತವಾಗಿ ‌ಲಸಿಕೆ‌ ನೀಡಲಾಗುತ್ತಿದೆ.

ಕಲಬುರಗಿ ನಗರದ ಅಶೋಕ ನಗರ, ಶಿವಾಜಿ ನಗರ, ಸೆಂಟ್ ಜಾನ್, ಮಕ್ತಂಪೂರ, ಮಾಣಿಕೇಶ್ವರಿ ನಗರ, ಎನ್.ಆರ್.ನಗರ, ಐ‌.ಸಿ.ಡಿ.ಎಸ್., ತಾರಪೈಲ್, ತಾಜ‌ ನಗರ, ಹೀರಾಪೂರ, ಶಹಾಬಜಾರ, ಖಾನಾಪೂರ ಹಾಗೂ ಗ್ರಾಮೀಣ ಪ್ರದೇಶಗಳ ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಾರದಲ್ಲಿ ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಶನಿವಾರ ಮಾತ್ರ ಲಸಿಕೆ ಲಭ್ಯವಿದೆ.‌

ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಪಡೆಯಲು 12 ಖಾಸಗಿ ಅಸ್ಪತ್ರೆಗಳನ್ನು ಗುರುತಿಸಲಾಗಿದೆ. ನಗರದ ಬಸವೇಶ್ವರ, ಕೆ.ಬಿ.ಎನ್., ಚಿರಾಯೂ, ಧನ್ವಂತ್ರಿ, ಸನರೈಸ್, ಯೂನೆಟೆಡ್, ದೇವತಾ, ಮೆಡಿಕೇರ್, ಕಾಮರೆಡ್ಡಿ, ಹೆಚ್. ಸಿ. ಜಿ. ಕ್ಯಾನ್ಸರ್, ವಾತ್ಸಲ್ಯ ಹಾಗೂ ಗುಲಬರ್ಗಾ ಹಾರ್ಟ್ ಫೌಂಡೇಷನ್ ಆಸ್ಪತ್ರೆಗಳಲ್ಲಿ 250 ರೂ. ಪಾವತಿ ಮಾಡಿ ಲಸಿಕೆ ಪಡೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+