ಜೆಸ್ಕಾಂ ವ್ಯಾಪ್ತಿಯ 11 ತಾಲೂಕುಗಳಲ್ಲಿ ಸೌರ ಪಂಪ್ ಸೆಟ್
ಕಲಬುರಗಿ, ಡಿಸೆಂಬರ್ 14: ಸೌರ ಚಾಲಿತ ಜಾಲಮುಕ್ತ ನೀರಾವರಿ ಪಂಪ್ ಸೆಟ್ ಗಳನ್ನು ಅಳವಡಿಸಲು ಜೆಸ್ಕಾಂ ವ್ಯಾಪ್ತಿಯಲ್ಲಿನ 11 ತಾಲೂಕುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ (ನಿಗಮ ಯೋಜನೆ) ಮುಖ್ಯ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಂಚಿಕೆಯಾದ ಜೆಸ್ಕಾಂ ವಿಭಾಗದ 11 ತಾಲೂಕುಗಳ ವಿವರ ಇಂತಿದೆ. ಕಾರ್ಯ ಮತ್ತು ಪಾಲನೆ ಕಲಬುರಗಿ ವಿಭಾಗದ ಜೇವರ್ಗಿ, ಚಿತ್ತಾಪುರ ಮತ್ತು ಚಿಂಚೋಳಿ. ಕಾರ್ಯ ಮತ್ತು ಪಾಲನೆ ಯಾದಗಿರಿ ವಿಭಾಗದ ಯಾದಗಿರಿ. ಕಾರ್ಯ ಮತ್ತು ಪಾಲನೆ ರಾಯಚೂರು ವಿಭಾಗದ ರಾಯಚೂರ ಮತ್ತು ಸಿಂಧನೂರ. ಕಾರ್ಯ ಮತ್ತು ಪಾಲನೆ ಬಳ್ಳಾರಿ ವಿಭಾಗದ ಸಂಡೂರ. ಕಾರ್ಯ ಮತ್ತು ಪಾಲನೆ ಬೀದರ ವಿಭಾಗದ ಹುಮನಾಬಾದ, ಭಾಲ್ಕಿ ಹಾಗೂ ಬೀದರ ತಾಲೂಕುಗಳಲ್ಲಿ 259 ನೀರಾವರಿ ಪಂಪ್ ಸೆಟ್ ಗಳನ್ನು ಅಳವಡಿಸಲಾಗುತ್ತಿದೆ.

ಮೊದಲು ಬಂದ ಅರ್ಜಿದಾರರಿಗೆ ಮೊದಲ ಆದ್ಯತೆ ನೀಡಲಾಗುವುದು. ಆಸಕ್ತಿಯುಳ್ಳ ಫಲಾನುಭವಿಗಳು ಲಿಖಿತ ಒಪ್ಪಿಗೆ ಪತ್ರ, ಭೂದಾಖಲೆಗಳ ಪ್ರಮಾಣಪತ್ರ, ಜಲ ಇಳುವರಿ ಪ್ರಮಾಣಪತ್ರ, ಜಾತಿ ಮತ್ತು ಪ್ರಮಾಣಪತ್ರ ಹಾಗೂ ವ್ಯವಸ್ಥಾಪಕ ನಿರ್ದೇಶಕರು, ಕೆ.ಆರ್.ಇ.ಡಿ.ಎಲ್. ಇವರ ಹೆಸರಿನಲ್ಲಿ 1 ಲಕ್ಷ ರೂ.ಗಳ ವಂತಿಗೆಯ ಡಿ.ಡಿ. ಪಡೆದು ಲಗತ್ತಿಸಿ ಡಿಸೆಂಬರ್ 15 ರೊಳಗಾಗಿ ಸಂಬಂಧಪಟ್ಟ ಕಾರ್ಯನಿರ್ವಾಹಕ ಅಭಿಯಂತರರು (ವಿ) ಕಾರ್ಯ ಮತ್ತು ಪಾಲನೆ ವಿಭಾಗದ ಕಚೇರಿಯಲ್ಲಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಆಯಾ ವಿಭಾಗದ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ಕಚೇರಿಗಳನ್ನು ಸಂಪರ್ಕಿಸಲು ತಿಳಿಸಿದ್ದಾರೆ.












Click it and Unblock the Notifications