ಕೋವಿಡ್ 19: ಕಲಬುರಗಿ ಪ್ರಯೋಗಾಲಯ ವರದಿಯೇ ಅಂತಿಮ
ಕಲಬುರಗಿ, ಏಪ್ರಿಲ್ 22: ಕೋವಿಡ್-19 ಪರೀಕ್ಷೆ ಕೈಗೊಳ್ಳುತ್ತಿರುವ ಕಲಬುರಗಿ ಜಿಮ್ಸ್ ಪ್ರಯೋಗಾಲಯ ನೀಡುವ ವೈದ್ಯಕೀಯ ವರದಿ ಅಂತಿಮವಾಗಿದ್ದು, ದೃಢೀಕರಣಕ್ಕಾಗಿ ಬೆಂಗಳೂರು ಅಥವಾ ಪುಣೆ ಕಳುಹಿಸುವ ಅಗತ್ಯವಿಲ್ಲ ಎಂದು ಕಲಬುರಗಿ ಲೋಕಸಭಾ ಸದಸ್ಯ ಡಾ.ಉಮೇಶ ಜಾಧವ ಹೇಳಿದರು.
ಕಲಬುರಗಿ ಪ್ರಯೋಗಾಲಯ ಆರಂಭವಾದ ನಂತರ ಶಿಷ್ಠಚಾರದ ಪ್ರಕಾರ ಬೆಂಗಳೂರು ಅಥವಾ ಪುಣೆಗೆ ಕಳುಹಿಸಲಾಗುತಿತ್ತು. ಇದೀಗ ಈ ಪ್ರಯೋಗಾಲಯವನ್ನು ಉನ್ನತ್ತೀಕರಿಸಿರುವುದರಿಂದ ದೃಡೀಕರಣಕ್ಕಾಗಿ ಬೇರೆ ಪ್ರಯೋಗಾಲಕ್ಕೆ ವರದಿ ಕಳುಹಿಸುವ ಅಗತ್ಯವಿಲ್ಲ. ಇನ್ನೂ ಕೋವಿಡ್-19 ಪರೀಕ್ಷೆಗೆ ಅಗತ್ಯ ಪ್ರಮಾಣದಲ್ಲಿ ಕೆಮಿಕಲ್ ಸಹ ಲಭ್ಯವಿದೆ ಎಂದರು.
ಕಲಬುರಗಿ ನಗರದಲ್ಲಿ ಕೊರೋನಾ ಸೊಂಕಿನಿಂದ ಇದೂವರೆಗೆ 4 ಜನ ಮೃತಪಟ್ಟಿದಲ್ಲದೆ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಪಾಸಿಟಿವ್ ಸಂಖ್ಯೆ ಹೆಚ್ಚಳವಾಗುತ್ತಿರುವುದು ಕಳವಳಕಾರಿಯಾಗಿದೆ. ಇದರ ನಿಯಂತ್ರಣಕ್ಕೆ ಜಿಲ್ಲಾಡಳಿತ ಮತ್ತು ವೈದ್ಯಕೀಯ ಸಿಬ್ಬಂದಿಗಳು ಹಗಲಿರುಳು ಶ್ರಮಿಸುತ್ತಿದ್ದು, ಶ್ಲಾಘನೀಯ ಎಂದರು.

ಲಾಕ್ ಡೌನ್ ಹಿನ್ನೆಲೆಯಲ್ಲಿ ಜಾತಿ, ಮತ ಹೊರತುಪಡಿಸಿ ಎಲ್ಲರು ಜಿಲ್ಲಾಡಳಿತ ಮತು ಅರೋಗ್ಯ ಇಲಾಖೆಯ ಎಲ್ಲಾ ಸೂಚನೆ ಪಾಲನೆ ಮಾಡಬೇಕು ಮತ್ತು ಅನಗತ್ಯ ಮನೆಯಿಂದ ಹೊರಬರಬಾರದು ಎಂದು ಡಾ.ಉಮೇಶ ಜಾಧವ ಅವರು ಮನವಿ ಮಾಡಿದರು.












Click it and Unblock the Notifications