'ಬಾಯಿತಪ್ಪಿ' ರಾಹುಲ್ ಗಾಂಧಿಯನ್ನು ಸಾಯಿಸಿಬಿಟ್ಟ ಮಲ್ಲಿಕಾರ್ಜುನ ಖರ್ಗೆ
ಪಕ್ಷದ ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ, "ಮಾಜಿ ಪ್ರಧಾನಿ ರಾಜೀವ್ ಗಾಂಧಿಯನ್ನು ತುಕುಡೇ ತುಕುಡೇ ಮಾಡಿ ಹತ್ಯೆಗೈಯ್ಯಲಾಗಿತ್ತು' ಎನ್ನುವ ಬದಲು ರಾಹುಲ್ ಗಾಂಧಿಯ ಹೆಸರನ್ನು ಬಳಸಿ, ನಂತರ ಎಚ್ಚೆತ್ತುಕೊಂಡರು.
Recommended Video
ಕಲಬುರಗಿ, ಏ 16: ಈ ಹಿಂದೆ ಇಂದಿರಾ ಗಾಂಧಿ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಬಾಯಿ ಎಡವಟ್ಟಿನಿಂದ ಸೋನಿಯಾ ಗಾಂಧಿ ಎಂದು ಹೇಳಿ, ಮಾಜಿ ಸಿಎಂ ಸಿದ್ದರಾಮಯ್ಯ ಎಡವಟ್ಟು ಮಾಡಿಕೊಂಡಿದ್ದರು.
ಈಗ, ಕಾಂಗ್ರೆಸ್ಸಿನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರ ಸರದಿ. ರಾಜೀವ್ ಗಾಂಧಿ ಎನ್ನುವ ಬದಲು ರಾಹುಲ್ ಗಾಂಧಿ ಎಂದು ಬಾಯಿತಪ್ಪಿ ಹೇಳಿ, ನಂತರ ಖರ್ಗೆ ಸಾಹೇಬ್ರು ತಮ್ಮ ತಪ್ಪನ್ನು ಸರಿಪಡಿಸಿಕೊಂಡರು.

ಕಲಬುರಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯೂ ಆಗಿರುವ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ, "ಮಾಜಿ ಪ್ರಧಾನಿ ರಾಜೀವ್ ಗಾಂಧಿಯನ್ನು ತುಕುಡೇ ತುಕುಡೇ ಮಾಡಿ ಹತ್ಯೆಗೈಯ್ಯಲಾಗಿತ್ತು' ಎನ್ನುವ ಬದಲು ರಾಹುಲ್ ಗಾಂಧಿಯ ಹೆಸರನ್ನು ಬಳಸಿ, ನಂತರ ಎಚ್ಚೆತ್ತುಕೊಂಡರು.
ಬಿಜೆಪಿಯವರು ನನ್ನನ್ನು ಸೋಲಿಸಲು ಎಷ್ಟೇ ಕಾರ್ಯತಂತ್ರ ರೂಪಿಸಿದರೂ, ಕ್ಷೇತ್ರದ ಜನತೆ ನನ್ನನ್ನು ಹರಸುತ್ತಾರೆ ಎನ್ನುವ ನಂಬಿಕೆ ನನಗಿದೆ ಎಂದಿರುವ ಮಲ್ಲಿಕಾರ್ಜುನ ಖರ್ಗೆ, ಮೋದಿ ಮುಂದಿನ ಅವಧಿಗೆ ಪ್ರಧಾನಿಯಾಗಿ ಮುಂದುವರಿಯುವುದಿಲ್ಲ ಎನ್ನುವ ಭವಿಷ್ಯವನ್ನು ನುಡಿದಿದ್ದಾರೆ.
ಖರ್ಗೆ ಸಭೆಯಲ್ಲಿ ಮೋದಿಗೆ ಜೈಕಾರ: ಪಕ್ಷದ ಪ್ರಚಾರ ಸಭೆಯಲ್ಲಿ, ಖರ್ಗೆ ಮಾತನಾಡುತ್ತಿರಬೇಕಾದರೆ, ಮೋದಿಗೆ ಜೈ ಎನ್ನುವ ಘೋಷಣೆ ಬರಲಾರಂಭಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ನೀವು ಎಷ್ಟೇ ಮೋದಿ.. ಮೋದಿ ಅಂದರೂ, ನಾನು ಇದ್ಯಾವುದಕ್ಕೂ ಹೆದರುವುದಿಲ್ಲ, ನಾನು ಏನು ಹೇಳಬೇಕು ಎಂದು ಇದ್ದೀನೋ ಅದನ್ನು ಹೇಳೇ ತೀರುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.












Click it and Unblock the Notifications