ಕಲಬುರಗಿಯಿಂದ ವಿಮಾನ ಹಾರಾಟ ಆರಂಭಿಸಿದ ಅಲಾಯನ್ಸ್ ಏರ್

ಕಲಬುರಗಿ, ಡಿಸೆಂಬರ್ 27 : ಕಲಬುರಗಿ ವಿಮಾನ ನಿಲ್ದಾಣದಿಂದ ಅಲಾಯನ್ಸ್ ಏರ್ ಸಂಸ್ಥೆಯು ವಿಮಾನ ಹಾರಾಟವನ್ನು ಆರಂಭಿಸಿದೆ. ನವೆಂಬರ್ 22ರಂದು ಕಲಬುರಗಿ ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಾಗಿತ್ತು.

ಶುಕ್ರವಾರ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ 10.54ಕ್ಕೆ ಹೊರಟ ವಿಮಾನ 12.50ಕ್ಕೆ ಕಲಬುರಗಿಯಲ್ಲಿ ಭೂ ಸ್ಪರ್ಶ ಮಾಡಿತು. ವಾಟರ್ ಸೆಲ್ಯೂಟ್ ಮೂಲಕ ವಿಮಾನವನ್ನು ಬರಮಾಡಿಕೊಳ್ಳಲಾಯಿತು.

72 ಸೀಟುಗಳ ನಂಬರ್ 91509 ಸಂಖ್ಯೆಯ ವಿಮಾನವು ಕಲಬುರಗಿಗೆ ಆಗಮಿಸಿತು. ಅಲಾಯನ್ಸ್ ಏರ್ ಸಂಸ್ಥೆಯ ವಿಮಾನ ಮೊದಲ ಬಾರಿಗೆ ಕಲಬುರಗಿಗೆ ಆಗಮಿಸಿದ್ದರಿಂದ ವಾಟರ್ ಸೆಲ್ಯೂಟ್ ನೀಡಲಾಯಿತು, ಪ್ರಯಾಣಿಕರನ್ನು ಸ್ವಾಗತಿಸಲಾಯಿತು.

ಅಲಾಯನ್ಸ್ ಏರ್ ಸಂಸ್ಥೆಯ ಬೆಂಗಳೂರು ಮೂಲದ ಮುಖ್ಯ ಪೈಲಟ್ ಎ.ಮಾಕನ್, ದೆಹಲಿ ಮೂಲದ ಮಹಿಳಾ ಕೋ-ಪೈಲಟ್ ಶಾಲು ಸುರಕ್ಷತೆಯಿಂದ ವಿಮಾನವನ್ನು ಲ್ಯಾಂಡ್ ಮಾಡಿದರು. ಇಂಜಿನಿಯರ್ ಕ್ರಾಂತಿಕುಮಾರ್ ಅವರ ತಂಡ ಜೊತೆಯಲ್ಲಿತ್ತು.

56 ಪ್ರಯಾಣಿಕರ ಆಗಮನ

56 ಪ್ರಯಾಣಿಕರ ಆಗಮನ

ಶುಕ್ರವಾರ ಮೊದಲ ವಿಮಾನದಲ್ಲಿ ಬೆಂಗಳೂರಿನಿಂದ ಶಾಸಕ ಬಸವರಾಜ ಮತ್ತಿಮೂಡ, ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಸೇರಿದಂತೆ 56 ಪ್ರಯಾಣಿಕರು ಆಗಮಿಸಿದರು. ಕಲಬುರಗಿಯಿಂದ 56 ಪ್ರಯಾಣಿಕರು ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

2 ವಿಮಾನಗಳ ಹಾರಾಟ ಆರಂಭ

2 ವಿಮಾನಗಳ ಹಾರಾಟ ಆರಂಭ

ಕಲಬುರಗಿ ವಿಮಾನ ನಿಲ್ದಾಣದಿಂದ ಪ್ರಸ್ತುತ ಸ್ಟಾರ್ ಏರ್ ಸಂಸ್ಥೆಯು ಸೋಮವಾರ, ಶುಕ್ರವಾರ ಮತ್ತು ಶನಿವಾರ ಕಲಬುರಗಿ-ಬೆಂಗಳೂರು ಮಧ್ಯೆ ವಿಮಾನ ಸೇವೆ ನೀಡುತ್ತಿದೆ. ಈಗ ಅಲಾಯನ್ಸ್ ಏರ್ ಸಂಸ್ಥೆಯು ಕಲಬುರಗಿ-ಬೆಂಗಳೂರು-ಮೈಸೂರು ನಡುವೆ ಸಂಚಾರ ಆರಂಭಿಸಿದೆ. ಕಲಬುರಗಿ ವಿಮಾನ ನಿಲ್ದಾಣದಿಂದ 2 ವಿಮಾನ ಸೇವೆಗಳು ಆರಂಭವಾದಂತಾಗಿದೆ.

ಅಲಾಯನ್ಸ್ ಏರ್ ವೇಳಾಪಟ್ಟಿ

ಅಲಾಯನ್ಸ್ ಏರ್ ವೇಳಾಪಟ್ಟಿ

ಅಲಾಯನ್ಸ್ ಏರ್ ವಿಮಾನವು ಮಂಗಳವಾರ ಹೊರತುಪಡಿಸಿ ಉಳಿದ 6 ದಿನ ಸಂಚಾರ ನಡೆಸಲಿದೆ. 91897 ಸಂಖ್ಯೆಯ ವಿಮಾನ ಮೈಸೂರಿನಿಂದ ಬೆಳಗ್ಗೆ 8.30ಕ್ಕೆ ಹೊರಟು, 9.10 ಗಂಟೆಗೆ ಬೆಂಗಳೂರು ತಲುಪಲಿದೆ. ಈ ವಿಮಾನದ ಪ್ರಯಾಣಿಕರು 91509 ಸಂಖ್ಯೆಯ ವಿಮಾನದಿಂದ ಬೆಂಗಳೂರಿನಿಂದ 9.50ಕ್ಕೆ ಹೊರಟು ಕಲಬುರಗಿಗೆ 11.25ಕ್ಕೆ ತಲುಪಬಹುದು.

91510 ಸಂಖ್ಯೆಯ ವಿಮಾನ ಕಲಬುರಗಿಯಿಂದ ಬೆಳಗ್ಗೆ 11.50ಕ್ಕೆ ಹೊರಟು, ಮಧ್ಯಾಹ್ನ 1.30ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ 91898 ಸಂಖ್ಯೆಯ ವಿಮಾನ ಮಧ್ಯಾಹ್ನ 2 ಗಂಟೆಗೆ ಹೊರಟು ಮೈಸೂರಿಗೆ 2.50ಕ್ಕೆ ತಲುಪಲಿದೆ.

ಮಂಗಳವಾರ ಮಾತ್ರ ಸಮಯ ಬದಲಾವಣೆ

ಮಂಗಳವಾರ ಮಾತ್ರ ಸಮಯ ಬದಲಾವಣೆ

ಮೈಸೂರಿನಿಂದ ಬೆಳಗ್ಗೆ 10.25ಕ್ಕೆ ಹೊರಟು, 11.05ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ 11.40ಕ್ಕೆ ಹೊರಟು ಕಲಬುರಗಿಗೆ ಮಧ್ಯಾಹ್ನ 1.20ಕ್ಕೆ ಆಗಮಿಸಲಿದೆ. ಕಲಬುರಗಿಯಿಂದ ಮಧ್ಯಾಹ್ನ 1.45ಕ್ಕೆ ಹೊರಟು 3.25ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ಮಧ್ಯಾಹ್ನ 3.45ಕ್ಕೆ ಹೊರಟು ಮೈಸೂರಿಗೆ ಸಂಜೆ 4.40ಕ್ಕೆ ತಲುಪಲಿದೆ.

ದೆಹಲಿ, ತಿರುಪತಿಗೆ ವಿಮಾನ ಸೇವೆ

ದೆಹಲಿ, ತಿರುಪತಿಗೆ ವಿಮಾನ ಸೇವೆ

ಸ್ಟಾರ್ ಏರ್ ಸಂಸ್ಥೆಯು ಕಲಬುರಗಿ-ಬೆಂಗಳೂರು, ಕಲಬುರಗಿ-ಹಿಂಡನ್ (ನವದೆಹಲಿ) ಹಾಗೂ ಕಲಬುರಗಿ-ತಿರುಪತಿ ನಡುವೆ ವಿಮಾನ ಹಾರಾಟಕ್ಕೆ ಅನುಮತಿ ಪಡೆದಿದೆ. ಮುಂದಿನ ಮಾರ್ಚ್ ನಂತರ ಕಲಬುರಗಿ-ಹಿಂಡನ್ (ನವದೆಹಲಿ) ಹಾಗೂ ಕಲಬುರಗಿ-ತಿರುಪತಿ ನಡುವೆ ವಿಮಾನ ಸಂಚಾರ ಆರಂಭಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+