ಕಲಬುರಗಿ-ಬೆಂಗಳೂರು ನಡುವೆ ಹಾರಾಟ ಆರಂಭಿಸಿದ ಅಲಯನ್ಸ್ ಏರ್

ಕಲಬುರಗಿ, ಮೇ 28 : ಅಲಯನ್ಸ್ ಏರ್ ವಿಮಾನ ಬೆಂಗಳೂರು- ಕಲಬುರಗಿ ನಡುವಿನ ಹಾರಾಟವನ್ನು ಪುನಃ ಆರಂಭಿಸಿದೆ. ಲಾಕ್ ಡೌನ್‌ನಿಂದಾಗಿ ಸ್ಥಗಿತಗೊಂಡಿದ್ದ ವಿಮಾನ ಹಾರಾಟ ಗುರುವಾರ ಮತ್ತೆ ಆರಂಭವಾಗಿದೆ.

ಗುರುವಾರ ಬೆಂಗಳೂರಿನಿಂದ 19 ಪ್ರಯಾಣಿಕರನ್ನು ಹೊತ್ತ ವಿಮಾನ 11.45ಕ್ಕೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ಲಾಕ್ ಡೌನ್ ಜಾರಿಯಲ್ಲಿದ್ದರೂ ಕೇಂದ್ರ ಸರ್ಕಾರ ಮೇ 25ರಿಂದ ದೇಶಿಯ ವಿಮಾನಗಳ ಸೇವೆಯನ್ನು ಆರಂಭಿಸಿದೆ.

ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಮಾನ ಮಧ್ಯಾಹ್ನ 12.45ಕ್ಕೆ ಬೆಂಗಳೂರಿಗೆ ವಾಪಸ್ ಆಯಿತು. ಕಲಬುರಗಿಯಿಂದ 19 ಜನರು ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಜೂನ್ 1ರಿಂದ ಈ ವಿಮಾನದ ವೇಳಾಪಟ್ಟಿ ಬದಲಾವಣೆಯಾಗಲಿದೆ.

ಮೇ 25ರ ಸೋಮವಾರದಿಂದ ಬೆಂಗಳೂರು-ಕಲಬುರಗಿ ನಡುವೆ ಸ್ಟಾರ್ ಏರ್ ವಿಮಾನ ಸಂಚಾರವನ್ನು ನಡೆಸುತ್ತಿದೆ. ಈಗ ಅಲಯನ್ಸ್ ಏರ್ ಸಹ ತನ್ನ ಸೇವೆಯನ್ನು ಆರಂಭಿಸಿದೆ. 2019ರಲ್ಲಿ ಕಲಬುರಗಿ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಲಾಗಿತ್ತು.

ಎಲ್ಲಾ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್

ಎಲ್ಲಾ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್

ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸು ಪ್ರತಿಯೊಬ್ಬ ಪ್ರಯಾಣಿಕನಿಗೂ ಭಾರತೀಯ ವಿಮಾನಯಾನ ಪ್ರಾಧಿಕಾರದ ಮಾರ್ಗಸೂಚಿಯಂತೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಪ್ರತಿ ಪ್ರಯಾಣಿಕರಿಂದ ಅರೋಗ್ಯದ ಬಗ್ಗೆ ಸ್ವಯಂ ದೃಢೀಕರಣವನ್ನು ನಿಲ್ದಾಣದ ಸಿಬ್ಬಂದಿ ಪಡೆದುಕೊಳ್ಳುತ್ತಿದ್ದಾರೆ.

ಆರೋಗ್ಯ ಸೇತು ಕಡ್ಡಾಯ

ಆರೋಗ್ಯ ಸೇತು ಕಡ್ಡಾಯ

ಕಲಬುರಗಿ-ಬೆಂಗಳೂರು ನಡುವೆ ಸಂಚಾರ ನಡೆಸುವ ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ ಆರೋಗ್ಯ ಸೇತು ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡಿರಬೇಕು. ಪ್ರಯಾಣಿಕರ ಲಗೇಜ್‍ಗಳನ್ನು ಸಹ ಸ್ಯಾನಿಟೈಸ್ ಮಾಡಿಯೇ ವಿಮಾನಕ್ಕೆ ಹಾಕಲಾಗುತ್ತಿದೆ.

ಎಲ್ಲರ ವಿವರ ನೀಡುವುದು ಕಡ್ಡಾಯ

ಎಲ್ಲರ ವಿವರ ನೀಡುವುದು ಕಡ್ಡಾಯ

"ಕಲಬುರಗಿಯಿಂದ ಹೊರಡುವ ಪ್ರಯಾಣಿಕರು ಮಾತ್ರವಲ್ಲ. ಬೆಂಗಳೂರಿನಿಂದ ಬರುವ ಪ್ರಯಾಣಿಕರಿಗೂ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಎಲ್ಲರ ವಿವರವನ್ನು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸಂಗ್ರಹ ಮಾಡುತ್ತಿದ್ದಾರೆ" ಎಂದು ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ ಜ್ಞಾನೇಶ್ವರರಾವ್ ಹೇಳಿದ್ದಾರೆ.

ವಿಮಾನದ ವೇಳಾಪಟ್ಟಿ

ವಿಮಾನದ ವೇಳಾಪಟ್ಟಿ

ಅಲಯನ್ಸ್ ಏರ್ ವಿಮಾನ ಸಂಚಾರ ವೇಳಾಪಟ್ಟಿ ಜೂನ್ 1ರಿಂದ ಬದಲಾವಣೆಯಾಗಲಿದೆ. ಸೋಮವಾರ ಮತ್ತು ಮಂಗಳವಾರ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 8.45ಕ್ಕೆ ಆಗಮಿಸುವ ವಿಮಾನ 9.25ಕ್ಕೆ ಬೆಂಗಳೂರಿಗೆ ವಾಪಸ್ ಆಗಲಿದೆ. ಬುಧವಾರದಿಂದ ಭಾನುವಾರದ ತನಕ ಬೆಳಗ್ಗೆ 11.45ಕ್ಕೆ ಕಲಬುರಗಿಗೆ ಆಗಮಿಸಿ 12.25ಕ್ಕೆ ವಾಪಸ್ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+