ಕಲಬುರಗಿ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ

ಕಲಬುರಗಿ, ಅಕ್ಟೋಬರ್ 31 : ಕಲಬುರಗಿ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ಸಂಚಾರ ಆರಂಭಿಸಲು ವಿಮಾನ ನಿಲ್ದಾಣ ಪ್ರಾಧಿಕಾರ ಒಪ್ಪಿಗೆ ನೀಡಿದೆ. 175.57 ಕೋಟಿ ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗಿದೆ.

ಗುರುವಾರ ವಿಮಾನ ನಿಲ್ದಾಣ ಪ್ರಾಧಿಕಾರ ನವೆಂಬರ್ 1ರಿಂದಲೇ ಕಲಬುರಗಿ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ ನೀಡಿದೆ. 30/8/2019 ರಂದು ಕರ್ನಾಟಕ ಸರ್ಕಾರ ವಿಮಾನ ನಿಲ್ದಾಣವನ್ನು ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಹಸ್ತಾಂತರ ಮಾಡಿತ್ತು.

ಕರ್ನಾಟಕ ಸರ್ಕಾರವೇ ಸಂಪೂರ್ಣವಾಗಿ 175.57 ಕೋಟಿ ರೂ. ವೆಚ್ಚದಲ್ಲಿ ಕಲಬುರಗಿ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಿದೆ. "ವಾಣಿಜ್ಯ ಹಾರಾಟ ಕೈಗೊಳ್ಳಲು ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್ ಅವರು ಏರೋಡ್ರೋಮ್ ಲೈಸೆನ್ಸ್ ನೀಡಿದ್ದಾರೆ" ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.

AAI Approves For Commercial Flight Service Kalaburagi Airport

ಕರ್ನಾಟಕ ಸರ್ಕಾರ ಆಗಸ್ಟ್ 24ರಂದು ವಾಣಿಜ್ಯ ಸಂಚಾರ ಆರಂಭಿಸುವ ಕುರಿತು ಒಪ್ಪಂದಕ್ಕೆ ಸಹಿ ಹಾಕಿತ್ತು. 30-08-2019 ರಂದು ಕಲಬುರಗಿ ವಿಮಾನ ನಿಲ್ದಾಣ ಮತ್ತು 742.23 ಎಕರೆ ಪ್ರದೇಶವನ್ನು ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ ಎಸ್.ಜ್ಞಾನೇಶ್ವರ ರಾವ್ ಮತ್ತು ಜಂಟಿ ಜನರಲ್ ಮ್ಯಾನೇಜರ್ ಎಂ.ಯಾದಯ್ಯಗೆ ಹಸ್ತಾಂತರ ಮಾಡಲಾಗಿತ್ತು.

ಕಲಬುರಗಿ ವಿಮಾನ ನಿಲ್ದಾಣದಲ್ಲಿ 2018ರ ಆಗಸ್ಟ್ 26 ರಂದು ಪ್ರಾಯೋಗಿಕ ವಿಮಾನ ಹಾರಾಟ ನಡೆಸಲಾಗಿತ್ತು, ಅದು ಯಶಸ್ವಿಯಾಗಿತ್ತು. ಭವಿಷ್ಯದ ಆಲೋಚನೆ ಇಟ್ಟುಕೊಂಡು ಏರ್ ಬಸ್‌ನಂತರ ಬೃಹತ್ ವಿಮಾನಗಳು ಸಹ ಇಲ್ಲಿ ಬಂದಿಳಿಯಲು ಅನುಕೂಲವಾಗುವಂತೆ 3.725 ಕಿ.ಮೀ. ಉದ್ದದ ರನ್‌ ವೇ ನಿರ್ಮಾಣ ಮಾಡಲಾಗಿದೆ.

ಕಲಬುರಗಿ ವಿಮಾನ ನಿಲ್ದಾಣದ ರನ್ ವೇ ದೇಶದ 10ನೇ ಹಾಗೂ ರಾಜ್ಯದ 2ನೇ ಅತಿ ಉದ್ದದ ರನ್‌ ವೇ ಎಂಬ ಹೆಗ್ಗಳಿಕೆ ಪಡೆದಿದೆ. ಕೇಂದ್ರ ಸರ್ಕಾರವು ಕಲಬುರಗಿ ವಿಮಾನ ನಿಲ್ದಾಣವನ್ನು 'ಉಡಾನ್' ಯೋಜನೆಯಡಿ ಸೇರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+