ಅತ್ಯಾಚಾರದಿಂದ ಮನನೊಂದ ಕಲಬುರಗಿ ಯುವತಿ ಆತ್ಮಹತ್ಯೆ
ಕಲಬುರಗಿ, ಸೆಪ್ಟೆಂಬರ್ 8: ಅತ್ಯಾಚಾರದ ಅವಮಾನ ತಾಳಲಾರದೆ, ಮನನೊಂದು ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರಗಿಯ ಚಿಂಚೋಳಿಯಲ್ಲಿ ಸೆ.7 ರಂದು ಸಂಜೆ ನಡೆದಿದೆ.
ಯುವತಿ ಒಬ್ಬಳೇ ಇದ್ದ ಸಮಯದಲ್ಲಿ ಪರಿಚಿತನೇ ಆಗಿದ್ದ ಯುವಕನೊಬ್ಬ ಕುಡಿದುಬಂದು, ಆಕೆಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದ. ಇದರಿಂದ ಖಿನ್ನತೆಗೊಳಗಾಗಿದ್ದ ಯುವತಿ ಸೆ.8 ರಂದು ಸಂಜೆ ಯಾರೂ ಇಲ್ಲದ ಸಮಯದಲ್ಲಿ ಜಮೀನಿಗೆ ತೆರಳಿ, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಅತ್ಯಾಚಾರ ಎಸಗಿದ್ದ ವ್ಯಕ್ತಿ, ತಲೆಮರೆಸಿಕೊಂಡಿದ್ದು ಆತನ ಪತ್ತೆಗೆ ಕಲಬುರಗಿ ಪೊಲೀಸರು ಬಲೆಬೀಸಿದ್ದಾರೆ.












Click it and Unblock the Notifications