ಕಲಬುರಗಿಯಲ್ಲಿ ಮೃತಪಟ್ಟ ವೃದ್ಧನಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್!

ಕಲಬುರಗಿ, ಏಪ್ರಿಲ್.21: ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಪ್ರಾಣ ಬಿಡುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಕಲಬುರಗಿಯಲ್ಲಿ ಮಾರಕ ಕೊವಿಡ್19ಗೆ ಮತ್ತೊಬ್ಬ ವೃದ್ಧ ಪ್ರಾಣ ಬಿಟ್ಟಿರುವುದು ವರದಿಯಾಗಿದೆ.

ಕಲಬುರಗಿಯಲ್ಲಿ ಎರಡು ದಿನಗಳ ಹಿಂದೆಯಷ್ಟೇ 80 ವರ್ಷದ ವೃದ್ಧನ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಬೆಳಗ್ಗೆ ಪಾರ್ಕಿನ್ಸಸ್ ನಿಂದ ಬಳಲುತ್ತಿದ್ದ ವೃದ್ಧನು ಪ್ರಾಣ ಬಿಡುತ್ತಾರೆ.

ಜ್ವರ ಮತ್ತು ನಿಶ್ಯಕ್ತಿ ಹೊಂದಿದ್ದ ವೃದ್ಧನನ್ನು ಭಾನುವಾರ ಮಧ್ಯರಾತ್ರಿಯೇ ಆಸ್ಪತ್ರೆಗೆ ದಾಖಲಿಸಲಿಸಿದ್ದು ಚಿಕಿತ್ಸೆಗೆ ಸ್ಪಂದಿಸದೇ ಸೋಮವಾರ ಬೆಳಗ್ಗೆ 9 ಗಂಟೆಗೆ ವೃದ್ಧನು ಪ್ರಾಣ ಬಿಟ್ಟಿದ್ದಾರೆ. ನಂತರ ಮೃತ ವೃದ್ಧನಲ್ಲಿ ಕೊರೊನಾ ವೈರಸ್ ಪಾಸಿಟಿವ್ ಇರುವ ಬಗ್ಗೆ ವರದಿ ಬಂದಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.

80 Years Old Man Death From Coronavirus In Kalburgi

ಕರ್ನಾಟಕದಲ್ಲಿ 395 ಜನರಿಗೆ ಕೊರೊನಾ ಸೋಂಕು:

ಕೊರೊನಾ ವೈರಸ್ ಮಹಾಮಾರಿ ರಾಜ್ಯದಲ್ಲಿ 395ಕ್ಕೂ ಅಧಿಕ ಮಂದಿಗೆ ವಕ್ಕರಿಸಿಕೊಂಡಿದೆ. ಇದುವರೆಗೂ ಕರ್ನಾಟಕದಲ್ಲಿ ಕೊರೊನಾ ವೈರಸ್ ನಿಂದ 16 ಮಂದಿ ಪ್ರಾಣ ಬಿಟ್ಟಿದ್ದಾರೆ. ಇದೀಗ ಕಲಬುರಗಿಯ ವೃದ್ಧನ ಸಾವು ಸೇರಿ ಒಟ್ಟು 17 ಮಂದಿ ಕೊರೊನಾಗೆ ಬಲಿಯಾದಂತೆ ಆಗಿದೆ. ಈ ಸಂಬಂಧ ರಾಜ್ಯ ಸರ್ಕಾರವು ತೀವ್ರ ಎಚ್ಚರಿಕೆ ವಹಿಸಿದ್ದು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+